ದೊಡ್ಡಬಳ್ಳಾಪುರ: ನಗರದ ಸೋಮೇಶ್ವರ ದೇವಾಲಯದ ರಸ್ತೆ ಗಂಗಾಧರಪುರದಲ್ಲಿರುವ ಭಾರತ್ ಗ್ಯಾಸ್ ಗ್ಯಾಸ್ ಮಂಜುನಾಥ ಗ್ಯಾಸ್ ಏಜೆನ್ಸೀಸ್‌ನ ಕಚೇರಿಯಲ್ಲಿ ದೀಪಾವಳಿ ವಿಶೇಷ ಕಾರ್‍ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಮಂಜುನಾಥ ಗ್ಯಾಸ್ ಏಜೆನ್ಸಿಸ್ ಮಾಲೀಕ ಡಿ.ನಂದಕುಮಾರ್ ತಾಲೂಕು ಕಚೇರಿ ವೃತ್ತದ ಬಳಿ ಸಣ್ಣ ಕಚೇರಿಯೊಂದಿಗೆ ಆರಂಭವಾದ ಸಂಸ್ಥೆ ಇಂದು ಬೃಹತ್ತಾಗಿ ಬೆಳೆಯಲು ಸಾವಿರಾರು ಗ್ರಾಹಕರ ಸಹಕಾರ ಕಾರಣವಾಗಿದೆ.
ಸಂಸ್ಥೆ ಇಂದಿನ ಆಧುನಿಕ ಸೌಲಭ್ಯಗಳನ್ನು ಬಳಸಿಕೊಂಡು ಗ್ರಾಹಕಸ್ನೇಹಿಯಾಗಿ ಮುನ್ನಡೆಯುತ್ತಿದೆ. ಈಗ ಮೊಬೈಲ್ ಫೋನಿಂದಲೇ ಸಿಲೆಂಡರ್‌ಗಳನ್ನು ಬುಕ್ ಮಾಡಿ ತ್ವರಿತವಾಗಿ ಪಡೆಯಬಹುದಾಗಿದೆ.
ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಸಂಸ್ಥೆಯು ಡೆಲಿವರಿ ವಾಹನಗಳಿಗೆ ನೂತನವಾಗಿ ವಿಟಿಎಸ್ (ವೆಹಿಕಲ್ ಟ್ರ್ಯಾಕಿಂಗ್ ಸಿಸ್ಟಮ್) ವ್ಯವಸ್ಥೆ ಅಳವಡಿಸಲಾಗಿದೆ. ಈ ವಿಟಿಎಸ್ ಮೂಲಕ ಡೆಲಿವರಿ ವಾಹನಗಳ ಮೇಲ್ವಿಚಾರಣೆ ಮಾಡಲಾಗುವುದು.
ಜಿಪಿಎಸ್ ಮ್ಯಾಪ್‌ಗಳ ಮೂಲಕ ವಾಹನಗಳು ಯಾವ ಸ್ಥಳದಲ್ಲಿದೆ, ಯಾವ ಸಮಯಕ್ಕೆ, ಗ್ರಾಹಕರನ್ನು ತಲುಪಿದೆ ಎನ್ನುವುದು ತಿಳಿಯಲಿದೆ. ಇದರಿಂದ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಸಾಧ್ಯವಾಗಲಿದೆ. ಇದಲ್ಲದೇ ಸಂಸ್ಥೆಯಿಂದ ಸ್ವಚ್ಛ ಭಾರತ್, ಸ್ವಾಸ್ಥ್ಯ ಭಾರತ್ ಮಕ್ಕಳಿಗೆ ವಿವಿಧ ಸ್ಪರ್ಧೆಗಳು ಮೊದಲಾಗಿ ಹಲವಾರು ಸಾಮಾಜಿಕ ಕಾರ್‍ಯಕ್ರಮಗಳನ್ನು ಹಮ್ಮಿಕೊಂಡಿತ್ತು.
ಕಚೇರಿಯ ಆವರಣದಲ್ಲಿ ಇನ್ ಆಂಡ್ ಔಟ್ ದಿನೋಪಯೋಗಿಗಳ ಮಳಿಗೆ ಸ್ಥಾಪಿಸಲಾಗಿದೆ. ಸಂಸ್ಥೆಯ ಏಳಿಗೆಗೆ ಕಾರಣವಾದ ಗ್ರಾಹಕರು, ವಿತರಕರು, ಸಿಬ್ಬಂದಿಗಳಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇವೆ.
ದೀಪಾವಳಿ ಹಬ್ಬದ ಪ್ರಯುಕ್ತ, ಹೆಚ್ಚುವರಿ ಹೊಸ ಸಂಪರ್ಕಗಳು, ವಾಣಿಜ್ಯ ಸಂಪರ್ಕಗಳು, ಕೆವೈಸಿ, ರಾಪಿಡ್ ಹಾಗೂ ಎ ವರ್ಗಗಳಲ್ಲಿ ಹೆಚ್ಚಾಗಿ ನಿಷ್ಠೆಯಿಂದ ಕಾರ್ಯ ನಿರ್ವಹಿಸಿರುವ ಡೆಲಿವರಿ ಬಾಯ್ಸ ಗಳಿಗೆ ದೀಪಾವಳಿ ಉಡುಗೊರೆಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

ಈ ವೇಳೆ ಬಿಪಿಸಿಎಲ್ ಮುಖ್ಯಸ್ಥ ಪಿಯೂಶ್ ಗುಪ್ತ, ಬಿಪಿಸಿಎಲ್ ಅಕಾರಿಯಾದಂತಹ ಅನಿಕೇತ್ ಬಾಬು, ಸಂಸ್ಥಾಪಕ ಮಾಲೀಕರಾದ ದಯಾನಂದ. ಆರ್ ಲೆಕ್ಕಸಂಶೋಧಕರಾದ ಕೆ.ಗಿರೀಶ, ಮೊದಲಾದವರು ಹಾಜರಿದ್ದರು.