Site icon ಹರಿತಲೇಖನಿ

ದೇವಾಲಯದಲ್ಲೇ ಹೃದಯಾಘಾತ.. ವಿಷ್ಣುವರ್ಧನ್ ದುರ್ಮರಣ.!| viral video

ಹೈದರಾಬಾದ್: ದೇವಾಲಯಕ್ಕೆ ಬಂದಿದ್ದ ಯುವಕನೋರ್ವನಿಗೆ ಹೃದಯಾಘಾತ ಸಂಭವಿಸಿದ ಪರಿಣಾಮ, ಕುಸಿದು ಸಾವನ್ನಪ್ಪಿರುವಂತಹ ಆಘಾತಕಾರಿ ಘಟನೆ ಹೈದರಾಬಾದ್‌ನ ಕೆಪಿಹೆಚ್‌ಬಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Aravind, BLN Swamy, Lingapura

ಮೃತ ವ್ಯಕ್ತಿಯನ್ನು ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ಕದಿರಿ ಮಂಡಲದ 31 ವರ್ಷದ ಕೆ ವಿಷ್ಣುವರ್ಧನ್ ಎಂದು ಗುರುತಿಸಲಾಗಿದೆ.

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ವಿಷ್ಣುವರ್ಧನ್ ಹೈದರಾಬಾದ್‌ನ ಕೆಪಿಹೆಚ್‌ಬಿ ಕಾಲೋನಿಯಲ್ಲಿ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದರು ಎನ್ನಲಾಗಿದೆ.

Aravind, BLN Swamy, Lingapura

ವಿಷ್ಣುವರ್ಧನ್ ಪ್ರತಿದಿನ ಹತ್ತಿರದ ಆಂಜನೇಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡುತ್ತಿದ್ದರು ಎನ್ನಲಾಗಿದೆ. ಸೋಮವಾರ ಬೆಳಗ್ಗೆ ಎಂದಿನಂತೆ ದೇವಾಲಯಕ್ಕೆ ಆಗಮಿಸಿದ ಅವರು, ಎದೆ ನೋವು ಕಾಣಿಸಿಕೊಂಡಿದೆ. ಅಲ್ಲೇ ನೀರು ಕುಡಿಯಲು ಹೋದಾಗ ಏಕಾಏಕಿ ಕುಸಿದು ಬಿದ್ದಿದ್ದಾರೆ.

ಈ ವೇಳೆ ಅಲ್ಲಿದ್ದವರು ವಿಷ್ಣುವರ್ಧನ್ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಅವರು ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಮರಣೋತ್ತರ ಪರೀಕ್ಷೆಯ ಬಳಿಕ ಯುವಕನ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

Exit mobile version