ಬೆಂಗಳೂರು: ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರಗಳಲ್ಲಿರುವ ಉದ್ಯೋಗಿಗಳಿಗೆ ಗುಂಪು ವೈದ್ಯಕೀಯ ವಿಮೆ ಒದಗಿಸಲು ಅಲ್ಪಾವಧಿ ಇ-ಟೆಂಡರ್ ಕರೆಯಲಾಗಿದೆ.
ಕೇಂದ್ರ ಸರ್ಕಾರ ಒಡೆತನದ ಆಸಕ್ತಿ ವಿಮಾ ಕಂಪನಿಗಳು ಇ-ಪ್ರೋಕ್ಯೂರೆಮೆಂಟ್ ವೆಬ್ ಸೈಟ್ https://kppp.karnataka.gov.in ಭೇಟಿ ನೀಡಿ, ದಾಖಲೆಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಂಸ್ಥೆ, ರಾಜಾಜಿನಗರ ಇಂಡಸ್ಟ್ರಿಯಲ್ ಎಸ್ಟೇಟ್, ಬೆಂಗಳೂರು-10 ಅಥವಾ ದೂರವಾಣಿ ಸಂಖ್ಯೆ : 080-2315 2118, 2315 2119, 2315 2262, 2330 1683 ಗೆ ಸಂಪರ್ಕಿಸಬಹುದು ಎಂದು ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.