ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಇಂದು ಸತತ ಮೂರನೇ ಅಪಘಾತ ವರದಿ ತಾಲೂಕಿನ ಜನರನ್ನು ಆಶ್ಚರ್ಯ ಮತ್ತು ಆತಂಕಕ್ಕೀಡು ಮಾಡಿದೆ.
ಕಳೆದ ರಾತ್ರಿ ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಟಾಟಾ 407 ಮೊಗಚಿ ಬಿದ್ದು ಚಾಲಕ ಸಾವನಪ್ಪಿರುವ ಬೆನ್ನಲ್ಲೇ, ಇಂದು ಬೆಳ್ಳಂಬೆಳಗ್ಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಗೊಲ್ಲಹಳ್ಳಿ ಬಳಿ ಟೀ ಕುಡಿಯಲು ರಸ್ತೆ ಬದಿಯ ಹೋಟೆಲ್ ಬಳಿ ನಿಂತಿದ್ದವರಿಗೆ ಲಾರಿ ಡಿಕ್ಕಿ ಓರ್ವ ಸಾವನಪ್ಪಿದ್ದಾರೆ.
ಇದನ್ನೂ ಓದಿ: Doddaballapura accident news: ರಸ್ತೆ ಬದಿ ಟೀ ಕುಡಿಯುತ್ತಿದ್ದವರಿಗೆ ಲಾರಿ ಡಿಕ್ಕಿ.. ಓರ್ವ ಸ್ಥಳದಲ್ಲಿಯೇ ಸಾವು..!
ಇದೀಗ ಬಂದ ಮಾಹಿತಿ ಅನ್ವಯ ನಗರದ ಹೊರವಲಯದಲ್ಲಿರುವ ಮುಶಾಶಿ ಕಾರ್ಖಾನೆ ಬಳಿ, ಲಾರಿಯೋಂದು ಚಾಲಕನ ನಿಯಂತ್ರಣ ತಪ್ಪಿ, ಡಿವೈಡರ್ ನಡುವೆ ಅಳವಡಿಸಲಾಗಿರುವ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.
ದಾಬಸ್‌ಪೇಟೆ ಕಡೆಯಿಂದ ದೇವನಹಳ್ಳಿ ಮಾರ್ಗವಾಗಿ ಕಬ್ಬಿಣದ ಸರಕನ್ನು ಹೇರಿಕೊಂಡು ಸಾಗುತ್ತಿದ್ದ ಲಾರಿ, ಬೆಸೆಂಟ್ ಪಾರ್ಕ್ ಹಿಂಭಾಗದ ಮುಶಾಶಿ ಕಾರ್ಖಾನೆಯ ಬಳಿಯಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ, ಡಿವೈಡರ್ ಹೇರಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.
ಇದನ್ನೂ ಓದಿ: Doddaballapura accident news: ಗೂಡ್ಸ್ ವಾಹನ ಮೊಗಚಿ ಬಿದ್ದು ಚಾಲಕ ಸ್ಥಳದಲ್ಲಿಯೇ ಸಾವು..!
ಅಪಘಾತದ ತೀವ್ರತೆಗೆ ಟಾಟಾ ಗೂಡ್ಸ್ ಕ್ಯಾರಿಯರ್ ಲಾರಿಯ ಮುಂಭಾಗ ಜಖಂ ಗೊಂಡಿದ್ದು, ಚಾಲಕ ಹಾಗೂ ಸಹಾಯಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಘಟನೆ ಹಿನ್ನೆಲೆಯಲ್ಲಿ ಈ ವ್ಯಾಪ್ತಿಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಈ ಘಟನೆ ಸಂಭವಿಸಿದೆ.