ದೊಡ್ಡಬಳ್ಳಾಪುರ: ಬೊಲೆರೋ ಗೂಡ್ಸ್ ವಾಹನ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಮುಂದೆ ಸಾಗುತ್ತಿದ್ದ ಟಾಟಾ 407 ಗೂಡ್ಸ್ ವಾಹನ ಮೊಗಚಿ ಬಿದ್ದು ಚಾಲಕ ಸ್ಥಳದಲ್ಲಿಯೇ ಸಾವನಪ್ಪಿರುವ ಘಟನೆ ಕೂಗೇನಹಳ್ಳಿ ಗೇಟ್ ಬಳಿ ಕಳೆದ ರಾತ್ರಿ ಸಂಭವಿಸಿದೆ.
ಮೃತ ಟಾಟಾ 407 ಗೂಡ್ಸ್ ವಾಹನದ ಚಾಲಕನನ್ನು ಚಿಕ್ಕಬಳ್ಳಾಪುರ ಜಿಲ್ಲೆ ದೊಡ್ಡ ಮಾರಹಳ್ಳಿ ಗ್ರಾಮದ ದೇವರಾಜ್ (33 ವರ್ಷ) ಎಂದು ಗುರುತಿಸಲಾಗಿದೆ.
ಟಾಟಾ 407 ಗೂಡ್ಸ್ ವಾಹನ ಮತ್ತು ಬೊಲೆರೋ ಗೂಡ್ಸ್ ವಾಹನ ದಾಬಸ್‌ಪೇಟೆ ಯಿಂದ ದೊಡ್ಡಬಳ್ಳಾಪುರ ಕಡೆಗೆ ಬರುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ಕೂಗೇನಹಳ್ಳಿ ಗೇಟ್ ಬಳಿ ಬೊಲೆರೋ ವಾಹನ ಹಿಂದಿನಿಂದ ಡಿಕ್ಕಿಹೊಡೆದ ವೇಳೆ ಟಾಟಾ 407 ನಿಯಂತ್ರಣ ತಪ್ಪಿ ಬಲ ಭಾಗಕ್ಕೆ ಮೊಗಚಿ ಬಿದ್ದು ವೇಳೆ ಚಾಲಕ ದೇವರಾಜ್ ಸಿಲುಕಿ ಸಾವನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇನ್ನು ಘಟನೆಯಲ್ಲಿ ಬೊಲೆರೋ ವಾಹನ ಕೂಡ ಹಳ್ಳಕ್ಕೆ ಬಿದ್ದಿದ್ದು, ಚಾಲಕ ಮತ್ತು ಸಹಾಯಕನಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.
ಈ ಕುರಿತು ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.