ಚಿಕ್ಕಬಳ್ಳಾಪುರ: ಗೌರಿಬಿದನೂರು ಮಾರ್ಗ ಕಣಿವೆ ಪ್ರದೇಶದ ಕೇತಭೈರವೇಶ್ವರ ದೇವಾಲಯದ ಬಳಿ ಪತ್ತೆಯಾದ ಅಪರಿಚಿತ ಮಹಿಳೆಯ ಕೊಲೆ ಪ್ರಕರಣ ಸಂಬಂಧ, ಮಹಿಳೆಯ ಗುರುತು ಪತ್ತೆ ಹಚ್ಚಲು ಚಿಕ್ಕಬಳ್ಳಾಪುರ ಪೊಲೀಸ್ ಇಲಾಖೆ ಗಣಕೀಕೃತ 3d imageಗಳನ್ನ ಬಿಡುಗಡೆಗೊಳಿಸಿದ್ದಾರೆ.
ಅಂದಹಾಗೆ ಆಕ್ಟೋಬರ್ 10 ರಂದು ಸುಟ್ಟು ಕರಕಲಾಗಿ ಬರೀ ಮೂಳೆ, ತಲೆ ಬುರುಡೆ, ಅರೆಬರೆ ಬಟ್ಟೆ, ಮೂಗುತಿ, ಕೈ ಬಳೆಗಳು ಪತ್ತೆಯಾಗಿದ್ದು ಇದು ಮಹಿಳೆಯ ಮೃತದೇಹ ಎಂಬುದು ಖಾತರಿಯಾಗಿತ್ತು, ಹೀಗಾಗಿ ಪ್ರಕರಣದ ಬೆನ್ನು ಹತ್ತಿರುವ ಪೊಲೀಸರು ಮಹಿಳೆ ಯಾರು ಎಂಬುದನ್ನ ತಿಳಿಯುವ ಸಲುವಾಗಿ ತ್ರೀಡಿ ಇಮೇಜ್ ಬಿಡುಗಡೆ ಮಾಡಿದ್ದಾರೆ.
ಇದರ ಜೊತೆಗೆ ಆಕೆಯ ಅರೆಬೆರೆಬಟ್ಟೆ, ವಿ ಜೆ ಎಂಬ ಸೀಲ್ ಇರುವ ಮೂಗುತಿ ಯ ಪೋಟೋ ಬಿಡುಗಡೆ ಮಾಡಿ ಮಹಿಳೆಯ ಗುರುತು ಗೊತ್ತಿದ್ದವರು ಮಾಹಿತಿ ನೀಡಲು ಮನವಿ ಮಾಡಲಾಗಿದೆ.
ಇನ್ನೂ ಮಹಿಳೆಯ ಮಾಹಿತಿ ನೀಡಿದವರಿಗೆ ಸೂಕ್ತ ಬಹುಮಾನ ಘೋಷಣೆ ಮಾಡಲಾಗಿದೆ.