ಹರಿತಲೇಖನಿ

Rushiraj Pawar| ಶಾಸಕನ ಪುತ್ರನ ಅಪಹರಣ; ಮಹಿಳೆಯೊಂದಿಗೆ ಅಶ್ಲೀಲ ವಿಡಿಯೋ ಚಿತ್ರೀಕರಣಕ್ಕೆ ಒತ್ತಾಯ..!

Hukukudi trust

ಪುಣೆ; ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮುನ್ನ ಎನ್‌ಸಿಪಿ ಶಾಸಕ ಅಶೋಕ್ ಪವಾರ್ ಅವರ ಪುತ್ರ ತನ್ನಿಂದ 10 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟು ವ್ಯಕ್ತಿಗಳ ಗುಂಪೊಂದು ತನ್ನನ್ನು ಅಪಹರಿಸಿತ್ತು ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

Aravind, BLN Swamy, Lingapura

ಈ ಸಂಬಂಧ ಪೊಲೀಸರು ಮೂವರು ಪುರುಷರು ಮತ್ತು ಮಹಿಳೆಯ ವಿರುದ್ದ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

ಆರೋಪಿಗಳು ಪುಣೆ ಜಿಲ್ಲೆಯ ಶಿರೂರು ಶಾಸಕರ ಪುತ್ರ ರುಶಿರಾಜ್ ಪವಾರ್ (30 ವರ್ಷ) ಅವರನ್ನು ಎನ್‌ಸಿಪಿ (ಎಸ್‌ಪಿ)ಗೆ ಸೇರಲು ಬಯಸುವ ಕೆಲವು ವ್ಯಕ್ತಿಗಳೊಂದಿಗೆ ಸಭೆಗೆ ಬರುವಂತೆ ಆಹ್ವಾನಿಸಿದ್ದರು.

Aravind, BLN Swamy, Lingapura

ನಂತರ ನನ್ನನ್ನು ಮೋಟಾ‌ರ್ ಬೈಕ್‌ನಲ್ಲಿ ಬಂಗಲೆಯೊಂದಕ್ಕೆ ಕರೆದೊಯ್ದು ಅಪರಿಚಿತ ಮಹಿಳೆಯೊಂದಿಗೆ ಅಶ್ಲೀಲ ವೀಡಿಯೊವನ್ನು ಚಿತ್ರೀಕರಿಸಲು ಒತ್ತಾಯಿಸಲಾಯಿತು ಎಂದು ದೂರು ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಪ್ರಸಾರ ಮಾಡದಿರಲು ಆರೋಪಿಗಳು 10 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ. ರುಷಿರಾಜ್ ಪವಾರ್ ಸುಲಿಗೆ ಹಣದ ವ್ಯವಸ್ಥೆ ಮಾಡುವ ನೆಪದಲ್ಲಿ ಬಂಗಲೆಯಿಂದ ಹೊರಗೆ ಬಂದು ಪರಾರಿಯಾಗಿ ನಂತರ ಪೊಲೀಸ್ ಠಾಣೆಗೆ ತೆರಳಿ ಆರೋಪಿಗಳ ವಿರುದ್ದ ದೂರು ದಾಖಲಿಸಿದ್ದರು ಎನ್ನಲಾಗಿದೆ.

ದೂರಿನ ಪ್ರಕಾರ ನಾವು ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ ಮತ್ತು ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಪಂಕಜ್ ದೇಶಮುಖ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ನವೆಂಬರ್ 20 ರಂದು ರಾಜ್ಯ ವಿಧಾನಸಭಾ ಚುನಾವಣೆ ನಿಗದಿಯಾಗಿದೆ

Exit mobile version