Site icon ಹರಿತಲೇಖನಿ

Crime news: ರಸ್ತೆಗಾಗಿ ಸಂಬಂಧಿಯನ್ನೇ ಕಡಿದು ಕೊಲೆ

Channel Gowda
Hukukudi trust

ಉಪ್ಪಿನಂಗಡಿ: ದಾರಿ ವಿವಾದಕ್ಕೆ ಸಂಬಂಧಿಸಿ ಉಂಟಾದ ವೈಷಮ್ಯಕ್ಕೆ ಸಂಬಂಧಿಯನ್ನೇ ಕತ್ತಿಯಿಂದ ಕಡಿದು ಕೊಲೆಗೈದ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಆಲಂತಾಯ ಗ್ರಾಮದ ಪೆರ್ಲದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ.

Aravind, BLN Swamy, Lingapura

ಆಲಂತಾಯ ಗ್ರಾಮದ ಪೆರ್ಲ ನಿವಾಸಿ 54 ವರ್ಷದ ರಮೇಶ್ ಗೌಡ ಕೊಲೆಯಾದವರು. ಅವರ ಮನೆ ಸಮೀಪದ ನಿವಾಸಿ, ದೂರದ ಸಂಬಂಧಿಯೂ ಆದ ಹರೀಶ್ ಗೌಡ ಆರೋಪಿ.

ಇಬ್ಬರೊಳಗೆ ರಸ್ತೆ ಸಂಬಂಧಿಸಿ ಶುಕ್ರವಾರ ಬೆಳಗ್ಗಿನಿಂದಲೇ ಮಾತಿನ ಚಕಮಕಿ ನಡೆದಿದ್ದು, ಇದು ವಿಕೋಪಕ್ಕೆ ತಿರುಗಿ ಕೊಲೆಗೈಯುವ ಹಂತಕ್ಕೆ ತಲುಪಿದೆ.

Aravind, BLN Swamy, Lingapura

ಪೆರ್ಲ ದೇಗುಲದಲ್ಲಿ ಶುಕ್ರವಾರ ರಾತ್ರಿ ನಡೆದ ಭಜನಾ ಸೇವೆಯಲ್ಲಿ ಭಾಗವಹಿಸಲು ಹೂವುಗಳನ್ನು ಸಂಗ್ರಹಿಸಿ ಬೈಕ್‌ನಲ್ಲಿ ಮನೆಯಿಂದ ಹೊರಟು 50 ಮೀಟರ್ ದೂರ ಹೋದಾಗ ಅಲ್ಲಿಗೆ ಮೊದಲೇ ಬಂದು ನಿಂತಿದ್ದ ಹರೀಶಗೌಡ ಕತ್ತಿಯಿಂದ ಕಡಿದಿದ್ದಾನೆ ಎನ್ನಲಾಗಿದೆ.

ನಂತರ ಆರೋಪಿ ಪರಾರಿಯಾಗಿದ್ದಾನೆ. ಉಪ್ಪಿನಂಗಡಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ವರದಿಯಾಗಿದೆ.

Exit mobile version