ಲಖೋ: ಗೆಳತಿ ದೂರಾಗಿದ್ದಕ್ಕೆ ಮಾನಸಿಕವಾಗಿ ನೊಂದಿದ್ದ ಯುವಕನೋರ್ವ ಸೊಳ್ಳೆ ನಿವಾರಕ ಔಷಧಿ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ನಡೆದಿದೆ.
ಈ ಘಟನೆಯನ್ನು ವಿಡಿಯೋ ಮಾಡಿ ಇನ್ಸ್ಟಾಗ್ರಾಂನಲ್ಲಿ ಯುವಕನೇ ಹರಿಬಿಟ್ಟಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ವಿಷಕಾರಿ ಸೊಳ್ಳೆ ನಿವಾರಕ ಔಷಧಿ ಮೂರು ಗುಟುಕುಗಳನ್ನು ಬಾಯಿಗೆ ಹಾಕಿಕೊಂಡು ಹೊಟ್ಟೆಯನ್ನು ಹಿಡಿದುಕೊಂಡು ನೋವಿನಿಂದ ವಿಲವಿಲನೆ ಒದ್ದಾಡುತ್ತಿರುವ ದೃಶ್ಯ ಕಂಡುಬಂದಿದೆ.
ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು (ಹಂಚಿಕೊಳ್ಳಲಾದ ಪೋಸ್ಟ್), ಇದು ಪೊಲೀಸರಿಗೆ ತಲುಪಿದೆ. ಕೂಡಲೇ ಎಚ್ಚೆತ್ತುಕೊಂಡ ಪೊಲೀಸ್ ಅಧಿಕಾರಿಗಳಾದ ದುರ್ಗಾಶಂಕರ್ ಮತ್ತು ಮನೋಜ್‌ಕುಮಾರ್ ಟ್ರಾನ್ಸ್ ಯಮುನಾ ಕಾಲೋನಿಯಲ್ಲಿರುವ ಯುವಕನ ಮನೆಗೆ ತೆರಳಿ ರಕ್ಷಿಸಿ, ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದೀಗ ಯುವಕ ಬದುಕುಳಿದಿದ್ದು, ಚೇತರಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಗ್ರಾದ ಹೊರಗಿನಿಂದ ಬಂದಿದ್ದ ಈ ವ್ಯಕ್ತಿ ಗೆಳತಿ ದೂರವಾಗಿದ್ದ ಕಾರಣ ಭಾವನಾತ್ಮಕವಾಗಿ ವಿಚಲಿತನನ್ನಾಗಿದ್ದ, ಹಲವು ದಿನಗಳಿಂದ ಖಿನ್ನತೆಗೆ ಒಳಗಾಗಿದ್ದ ಪೊಲೀಸರು ತಿಳಿಸಿದ್ದಾರೆ.