ಭಾನುವಾರ, ನವೆಂಬರ್ 10, 2024, ದೈನಂದಿನ ರಾಶಿ ಭವಿಷ್ಯ / astrology predictions
ಮೇಷ: ಅನವಶ್ಯಕ ವಿಷಯಗಳನ್ನು ಮೈಮೇಲೆ ಎಳೆದುಕೊಳ್ಳದಿರಿ. ನಿಮ್ಮದಲ್ಲದ ತಪ್ಪಿಗೆ ಸಣ್ಣಶಿಕ್ಷೆ. ಕೌಟುಂಬಿಕ ಸಮಸ್ಯೆಗಳು ದೂರಾಗುವವು. ಕೊಟ್ಟಸಾಲ ಪಾವತಿಯಾಗುವುದು.
ವೃಷಭ: ಎಲ್ಲರೂ ನಿಮ್ಮ ಮಾತನ್ನೇ ಕೇಳಲಿ ಎಂಬ ಹಠ ಬೇಡ. ವಿಶಾಲವಾಗಿ ಚಿಂತನೆ ಮಾಡಿ. ಮಹತ್ವದ ಕೆಲಸಕ್ಕೆ ವಿಘ್ನ ಬರುವ ಸಾಧ್ಯತೆ ಇದೆ ಎಚ್ಚರಿಕೆವಹಿಸಿರಿ.
ಮಿಥುನ: ಕೌಟುಂಬಿಕ ಕಲಹ ಬೀದಿಗೆ ಬರಲಿದೆ ಎಚ್ಚರ. ಮಾತಿಗಿಂತ ಹೆಚ್ಚು ಮೌನವಾಗಿರುವತ್ತ ಗಮನಿಸಿ. ನಡೆಯುತ್ತಿರುವ ದಾರಿ ಸರಿಯಾಗಿ ಇರುವುದರಿಂದ ಗುರಿ ಮುಟ್ಟುವುದು ನಿಶ್ಚಿತ. ಆರ್ಥಿಕ ಸ್ಥಿತಿ ಉತ್ತಮವಾಗಿ ಇರುವುದು.
ಕಟಕ: ದಿಢೀರ್ ಬೆಳವಳಣಿಗೆಯಲ್ಲಿ ನಿಮಗೆ ದೂರ ಪ್ರಯಾಣ ಯೋಗ ಒದಗಿ ಬರಲಿದೆ. ಉದ್ಯೋಗದ ಸ್ಥಾನ ಬದಲಾವಣೆಯ ವಿಚಾರವಾಗಿ ಚಿಂತೆ ಇರುವುದು.
ಸಿಂಹ: ದಿಢೀರ್ ಧನಲಾಭದಿಂದ ಹಲವು ವರ್ಷಗಳ ಸಾಲ ತೀರಲಿದ್ದು, ಸಮಾಧಾನ. ಜನರೊಂದಿಗೆ ಉತ್ತಮ ಬಾಂಧವ್ಯ ವೃದ್ಧಿಯಾಗುವುದು. ಯುಕ್ತಿಯಿಂದ ಕಾರ್ಯಸಾಧಿಸುವಿರಿ.
ಕನ್ಯಾ: ಹಲವು ದಿನಗಳಿಂದ ಮಾಡಬೇಕು ಎಂದುಕೊಂಡಿದ್ದ ಕೆಲಸ ಯಶಸ್ವಿಯಾಗಿ ನೆರವೇರಲಿದೆ. ನಿಶ್ಚಿತ ಅವಧಿಯ ಪರೀಕ್ಷೆಗಳು ಎದುರಾದರೂ ಬಲಗುಂದುವುದಿಲ್ಲ.
ತುಲಾ: ಸಮಾಧಾನದಿಂದ ಕಾರ್ಯ ನಿರ್ವಹಿಸಿದರೆ ನಿಮಗೆ ಜಯ ಕಟ್ಟಿಟ್ಟ ಬುತ್ತಿ ಎಂಬ ಅರಿವಿರಲಿ. ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ನಿರೀಕ್ಷೆ ಇರುವುದು. ಕೈಗೊಂಡ ಕಾರ್ಯ ಯಶಸ್ಸು ಕಾಣುವುದು.
ವೃಶ್ಚಿಕ: ಆತ್ಮೀಯರೊಬ್ಬರು ಗಂಭೀರ ಗಾಯದಿಂದ ಬಳಲಲಿದ್ದು, ಮಾನಸಿಕ ಆಘಾತವಾಗಲಿದೆ. ಅತೀ ವಿಶ್ವಾಸಿಕರೇ ಮೋಸ ಮಾಡುವ ಸಂಭವವಿದೆ. ದೂರ ಪ್ರಯಾಣ ಅಥವಾ ಪರಸ್ಥಳವಾಸ ಸಂಭವ.
ಧನಸ್ಸು: ಮಾನಸಿಕ ಕಿರಿಕಿರಿಯಿಂದ ಗೊಂದಲಕ್ಕೆ ಒಳಗಾಗುವಿರಿ. ಎಲ್ಲರಿಂದಲೂ ದೂರವಿರಿ. ಸಹೋದರರು, ಮಿತ್ರರು ಬೆನ್ನೆಲುಬಾಗಿ ನಿಲ್ಲುವರು. ಧೈರ್ಯದಿಂದ ಮಾಡುವ ಕಾರ್ಯ ಉತ್ತಮ ಫಲ ಕೊಡುವುದು.
ಮಕರ: ಷೇರು ವ್ಯವಹಾರದಲ್ಲಿ ತೊಡಗಿಸಿಕೊಂಡವರಿಗೆ ಅಲ್ಪ ಪ್ರಮಾಣದ ಲಾಭವಾಗಲಿದೆ. ವ್ಯಾಪಾರಿಗಳಿಗೆ ಮಧ್ಯಮಫಲ. ಸೀಮಿತ ಆದಾಯ, ಸೀಮಿತ ಕಾರ್ಯಗಳಿಂದ ಬೇಸರ ಇರುವುದು.
ಕುಂಭ: ವಾತಾವರಣ ವೈಪರೀತ್ಯದಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ಎಚ್ಚರ.ಅನೇಕ ರೀತಿಯ ಸೌಭಾಗ್ಯಗಳು ದೊರೆಯುವವು.ಅನಾವಶ್ಯಕ ಮಾತು, ಸಿಟ್ಟು, ಅಹಂಕಾರದಿಂದ ಹಾಗೂ ಅಗ್ನಿ, ವಿದ್ಯುತ್, ಮಶಿನರಿಗಳಿಂದ ತೊಂದರೆ ಸಾಧ್ಯತೆ.
ಮೀನ: ನಿಮ್ಮ ಪ್ರಾಮಾಣಿಕ ಕೆಲಸಕ್ಕೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗಲಿದೆ. ಶುಭದಿನ. ಕೊಟ್ಟ ಸಾಲ ಮರುಪಾವತಿ ಆಗಲಾರದು,ವ್ಯಾಪರಿಗಳಿಗೆ ವ್ಯವಹಾರಿಕ ತೊಂದರೆ ಆಗುವ ಸಧ್ಯತೆ ಇದೆ.
ರಾಹುಕಾಲ: 04:34 ರಿಂದ 05:59
ಗುಳಿಕಕಾಲ: 03:08 ರಿಂದ 04:34
ಯಮಗಂಡಕಾಲ: 12:17 ರಿಂದ 01:42