ದಾಬಸ್‌ಪೇಟೆ: ಯುವಕನೊಬ್ಬ ಶಾಲಾ ಬಾಲಕಿಯನ್ನು ಪ್ರೀತಿಸಿ, ಪರಾರಿಯಾಗಲು ಯತ್ನಿಸಿ ಪೋಷಕರಿಗೆ ಸಿಕ್ಕಿಬಿದ್ದು, ಪೊಲೀಸರಿಗೆ ವಿಷಯ ತಿಳಿಸಿದ್ದರಿಂದ ಹೆದರಿ ನೇಣು ಬಿಗಿದ ಸ್ಥಿತಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಶಂಕಿಸಲಾಗಿದೆ (Crime news)
ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ಹಂಪಾಪುರದ 22 ವರ್ಷದ ಸಂತೋಷ್ ಆತ್ಮಹತ್ಯೆಗೆ ಶರಣಾದವ.
ಸಂತೋಷ್ ಶಿವಗಂಗೆಯಲ್ಲಿದು ಕೂಲಿ ಕೆಲಸ ಮಾಡುತ್ತಿದ್ದನು. ವರ್ಷದ ಹಿಂದೆ ಹೊಸಪಾಳ್ಯದಲ್ಲಿ ಬಳ್ಳಾರಿ ಮೂಲದವರ ಮನೆಯಲ್ಲಿದ್ದ ಈತ ಆ ಮನೆಯವರ ಹುಡುಗಿಯನ್ನು ಪ್ರೀತಿಸಿ ಇಬ್ಬರು ಪರಾರಿಯಾಗಲು ಯತ್ನಿಸುತ್ತಿದ್ದರು. ಹುಡುಗಿ ತಂದೆ ತಡೆದು ಬುದ್ದಿ ಹೇಳಿದಾಗ, ನಾನು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಹುಡುಗಿ ತಂದೆಗೆ ಹೆದರಿಸಿದ್ದ.
ಪೊಲೀಸರಿಗೆ ಕರೆ ಮಾಡಿದ್ದನ್ನು ಕೇಳಿಸಿ ಕೊಂಡ ಸಂತೋಷ್ ಅಲ್ಲಿಂದ ಜಾಗ ಖಾಲಿ ಮಾಡಿದ್ದ ರವಿಕುಮಾರ್ ಮನೆಯ ಹಿಂದೆ ಶೌಚಾಲಯದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಶುಕ್ರವಾರ ಬೆಳಿಗ್ಗೆ ಶೌಚಾಲಯಲ್ಲಿ ಶವ ಕಂಡು ಬಂದಿದೆ. ದಾಬಸ್‌ಪೇಟೆ ಪೊಲೀಸರು ಪ್ರಕರಣ ದಾಲಿಸಿದ್ದಾರೆ.