Site icon ಹರಿತಲೇಖನಿ

ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿಗೆ ಗೆಲುವು: ತ.ನ.ಪ್ರಭುದೇವ್ ವಿಶ್ವಾಸ

ಚನ್ನಪಟ್ಟಣ; ಎನ್‌ಡಿಎ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಚನ್ನಪಟ್ಟಣ ತಾಲೂಕಿನ ಜನರ ಒಲವು ಹೆಚ್ಚಾಗಿದ್ದು, ಉಪಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಹೆಚ್ಚಾಗಿದೆ ಎಂದು ದೊಡ್ಡಬಳ್ಳಾಪುರ ಜೆಡಿಎಸ್ ಹಿರಿಯ ಮುಖಂಡ, ನಗರಸಭೆ ಸದಸ್ಯ ತನ.ಪ್ರಭುದೇವ್ ಹೇಳಿದರು.

ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರವಾಗಿ ಚನ್ನಪಟ್ಟಣ ತಾಲೂಕಿನ ವಿವಿಧೆಡೆಗಳಲ್ಲಿ ಪ್ರಚಾರ ನಡೆಸಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಅವರ ನೀರಾವರಿ ಯೋಜನೆ, ಅಭಿವೃದ್ಧಿ ಕಾರ್ಯಗಳು ನಿಖಿಲ್ ಕುಮಾರಸ್ವಾಮಿ ಅವರಿಗೆ ವರದಾನವಾಗಲಿವೆ.

ಇದನ್ನೂ ಓದಿ: ಚನ್ನಪಟ್ಟಣ ಉಪಸಮರ: ನಿಖಿಲ್ ಪರ ಹರೀಶ್ ಗೌಡ ಅಬ್ಬರದ ಪ್ರಚಾರ

ಯುವಕನಿಗೆ ಅವಕಾಶ ನೀಡುವ ಮನಸ್ಸು ಚನ್ನಪಟ್ಟಣ ಜನರಿಗಿದ್ದು, ಬಿಜೆಪಿ ವರಿಷ್ಠರ ಅನುಗ್ರಹ, ಎರಡು ಬಾರಿ ಸೋಲನ್ನು ಅನುಭವಿಸಿರುವ ಅನುಕಂಪ ಕೂಡ ನಿಖಿಲ್ ಕುಮಾರಸ್ವಾಮಿ ಅವರ ಗೆಲುವಿಗೆ ಸಹಕಾರಿಯಾಗಲಿದೆ ಎಂದರು.

ಈ ವೇಳೆ ಮುಖಂಡರಾದ ತಳವಾರ ನಾಗರಾಜ್, ನಾರಾಯಣಪ್ಪ, ಟಿಎಪಿಎಂಸಿ ಸದಸ್ಯ ಆನಂದ್, ಯುವ ಮುಖಂಡರಾದ ಹರ್ಷ, ಶಿವು ಇದ್ದರು.

Exit mobile version