ಶನಿವಾರ, ನವೆಂಬರ್ 09, 2024, ದೈನಂದಿನ ರಾಶಿ ಭವಿಷ್ಯ| astrology predictions
ಮೇಷ ರಾಶಿ: ನಿಮ್ಮ ನಾಯಕತ್ವಕ್ಕೆ ಯಶಸ್ಸು ದೊರೆಯುವುದು. ತುಂಬಾ ಪ್ರಯಾಣ ದಣಿವಾಗಿಸುತ್ತದೆ ಇಂದು ಹಣಕ್ಕೆ ಸಂಬಂಧಿಸಿದ ಸಮಸ್ಯೆಯ ಕಾರಣದಿಂದ ತೊಂದರೆಗೊಳಗಾಗಬಹುದು.
ವೃಷಭ: ಭೂಮಿಯನ್ನು ಖರೀದಿಸಿದ ಮತ್ತು ಈಗ ಅದನ್ನು ಮಾರಾಟ ಮಾಡಲು ಬಯಸುವ ಜನರು ಇಂದು ಉತ್ತಮ ಖರೀದಿದಾರರನ್ನು ಕಾಣಬಹುದು. ಸಣ್ಣಪುಟ್ಟ ಅಡೆತಡೆಗಳ ಬಗ್ಗೆ ಗಮನ ಕೊಡದೆ ಆತ್ಮವಿಶ್ವಾಸದಿಂದ ಹೆಜ್ಜೆ ಇಡಿ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.
ಮಿಥುನ: ವ್ಯಾಪಾರ-ವ್ಯವಹಾರಗಳಲ್ಲಿ ಅನಿರೀಕ್ಷಿತ ಲಾಭ ಬಂದು ಹಣಕಾಸಿನ ಪರಿಸ್ಥಿತಿ ಉತ್ತಮವಾಗುವುದು. ಮೋಜಿಗಾಗಿ ಸಂತೋಷ ಮತ್ತು ಆನಂದವನ್ನು ಹಂಚಿಕೊಳ್ಳಿ. ಇಂದು ಪಾರ್ಟಿಯಲ್ಲಿ ಸಾಕಷ್ಟು ಹಣ ಖರ್ಚು ಮಾಡಬಹುದು
ಕಟಕ: ನಿರ್ದಿಷ್ಟ ಗುರಿ ತಲುಪಿದ್ದಕ್ಕೆ
ನಿಮ್ಮನ್ನು ಅಭಿನಂದಿಸುವರು.
ಮನೆಯ ಪರಿಸರದಲ್ಲಿ ಒಳ್ಳೆಯ ಬದಲಾವಣೆಗ ಳನ್ನು ಮಾಡುತ್ತೀರಿ. ವೈಯಕ್ತಿಕ ಮಾರ್ಗದರ್ಶನ ಸಂಬಂಧವನ್ನು ಸುಧಾರಿಸುತ್ತದೆ.
ಸಿಂಹ: ಅಧ್ಯಾತ್ಮಿಕ ಹಸಿವು ನಿಮ್ಮನ್ನು ಕಾಡುವುದು. ಕಚೇರಿಯಿಂದ ಬೇಗನೆ ಹೊರಬಂದು, ಖುಷಿ ಕೊಡುವಂತಹ ಕೆಲಸಗಳನ್ನು ಮಾಡಿ. ಆರ್ಥಿಕವಾಗಿ ಇಂದು ಬಲವಾಗಿ ಕಾಣುವಿರಿ
ಕನ್ಯಾ: ನಿಮ್ಮಲ್ಲಿ ಅಡಗಿರುವ ಶಕ್ತಿ ಏನು ಎಂಬುದು ಸ್ವತಃ ನಿಮ್ಮ ಅರಿವಿಗೆ ಬರುವುದಿಲ್ಲ. ಪರರು ನಿಮ್ಮನ್ನು ಕೆಣಕಿದಾಗ ಮಾತ್ರ ನಿಮ್ಮ ಬುದ್ಧಿಶಕ್ತಿಯು ಜಾಗೃತವಾಗುವುದು. ಅನಿರಿಕ್ಷಿತ ಬಿಲ್‌ಗಳು ಹಣಕಾಸಿನ ಹೊರೆಯನ್ನು ಹೆಚ್ಚಿಸುತ್ತದೆ.
ತುಲಾ: ಜೀವನದಲ್ಲಿ ಹಣದ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳುವುದಿಲ್ಲ. ಇಂದು ಹಣದ ಮೌಲ್ಯವನ್ನು ಅರ್ಥ ಮಾಡಿ ಕೊಳ್ಳಬಹುದು. ಭವಿಷ್ಯದ
ಬಗ್ಗೆ ನೀವೀಗ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಮುಖ್ಯವಾಗಿ ಆಲಸ್ಯದಿಂದ ಈದಿನ ಹೊರಬರಬೇಕು.
ವೃಶ್ಚಿಕ: ಸಂತೃಪ್ತಿಯ ಜೀವನಕ್ಕಾಗಿ ಮಾನಸಿಕ ದೃಢತೆಯನ್ನು ಸುಧಾರಿಸಿ. ಪ್ರಯಾಣ ಮಾಡುವ ಮನಸ್ಥಿತಿ ಯಲ್ಲಿರುತ್ತೀರಿ. ಎಲ್ಲರನ್ನೂ
ಎಲ್ಲ ಕಾಲಕ್ಕೂ ಖುಷಿ ಪಡಿಸಲು ಆಗುವುದಿಲ್ಲ. ಮನಸು ದಣಿದರೆ ವಿಶ್ರಾಂತಿ ಪಡೆಯುವುದು ಒಳ್ಳೆಯದು.
ಧನಸ್ಸು: ಅನಿರೀಕ್ಷಿತ ಪ್ರಯಾಣದಿಂದ ಸುಸ್ತಾಗಬಹುದು ಹಾಗೂ ಇದು ನಿಮ್ಮನ್ನು ಕರಿಕಿರಿಗೊಳ್ಳುವಂತೆ ಮಾಡಬಹುದು. ಸನ್ಮಾನ ಸ್ವೀಕರಿಸಲು ಸಿದ್ಧರಾಗುವಿರಿ. ಕೌಟುಂಬಿಕ ಜೀವನದ ವಿಚಾರವಾಗಿ ಉತ್ತಮ ಪ್ರತಿಕ್ರಿಯೆ ದೊರೆಯುವುದು.
ಮಕರ: ರಿಯಲ್ ಎಸ್ಟೇಟ್ ಮತ್ತು ಆರ್ಥಿಕ ವ್ಯವಹಾರಗಳಿಗೆ ಒಳ್ಳೆಯ ದಿನ. ಸಂಬಂಧಿಗಳು / ಸ್ನೇಹಿತರು ಒಂದು ಅದ್ಭುತ ಸಂಜೆಗಾಗಿ ಬರುತ್ತಾರೆ. ವ್ಯಾಪಾರ-ವ್ಯವಹಾರವೂ ಸಲೀಸಾಗಿ ಆಗುವುದು. ಬರಬೇಕಾಗಿದ್ದ ಹಣ ಕೈಸೇರುವುದು. ಪ್ರಯಾಣದಲ್ಲಿ
ಎಚ್ಚರ ಅಗತ್ಯ.
ಕುಂಭ: ವಿಚ್ಛಿದ್ರಕಾರಕ ಭಾವಗಳು ಮತ್ತು ಉದ್ವೇಗಗಳನ್ನು ಹತೋಟಿಯಲ್ಲಿರಿಸಿ ಕೊಳ್ಳಿ. ನಿಮ್ಮ ಸಾಂಪ್ರದಾ ಯಿಕ ಚಿಂತನೆ ಪ್ರಗತಿಯನ್ನು ಕುಂಠಿತಗೊಳಿಸಬಹುದು.
ನೂತನ ಪರಿಸರದಲ್ಲಿ ಕಾರ್ಯ ನಿರ್ವಹಿಸಬೇಕಾಗುವುದು.
ಕೋರ್ಟು ಕಚೆರಿಯಲ್ಲಿನ ವ್ಯಾಜ್ಯಗಳು ನಿಮ್ಮ ಪರವಾಗಿ ನಿಲ್ಲುವವು.
ಮೀನ: ಯೋಗ ಧ್ಯಾನದೊಂದಿಗೆ ದಿನವನ್ನು ಪ್ರಾರಂಭಿಸಬಹುದು. ಇದನ್ನು ಮಾಡುವುದರಿಂದ ನಿಮಗೆ ಪ್ರಯೋಜನಕಾರಿ ಯಾಗುತ್ತದೆ. ಭಿನ್ನಾಭಿಪ್ರಾಯವಿದ್ದಲ್ಲಿ
ಒಂಡೆಡೆ ಸೇರಿ ಬಗೆಹರಿಸಿಕೊಳ್ಳಿ.
ರಾಹುಕಾಲ: 09:00 ರಿಂದ 10:30
ಗುಳಿಕಕಾಲ: 06:00 ರಿಂದ 07:30
ಯಮಗಂಡಕಾಲ: 01:30 ರಿಂದ 03:00