Site icon ಹರಿತಲೇಖನಿ

Doddaballapura: ಹಾಡಹಗಲೇ ಸ್ಕೂಟರ್ ಕಳವು..! ದೂರು| Viral video ನೋಡಿ

ದೊಡ್ಡಬಳ್ಳಾಪುರ: ಮನೆ ಮಾಲೀಕರು ಒಳಗೆ ಇರುವಾಗಲೇ ಹಾಡ ಹಗಲಿನಲ್ಲೇ ಮುಸುಕುದಾರಿಯೊಬ್ಬ ಮನೆ ಕಾಂಪೌಂಡ್ ಒಳಗೆ ನಿಲ್ಲಿಸಿದ್ದ ಸ್ಕೂಟರ್ ಕಳವು ಮಾಡಿರುವ ಪ್ರಕರಣ ಕುರುಬರಹಳ್ಳಿಯಲ್ಲಿ ಗುರುವಾರ ನಡೆದಿದೆ.

ಕಳ್ಳನ ಚಲನವಲನ ಹಾಗೂ ಬೈಕ್‌ ಕಳವು ಮಾಡುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸ್ಕೂಟರ್ ಮಾಲೀಕರು ಮನೆಯಲ್ಲಿ ಇರುವಾಗಲೇ ಯಾರಿಗೂ ತಿಳಿಯದಂತೆ ಕಾಂಪೌಂಡ್ ಒಳಗಿನಿಂದ ಬೈಕ್ ತಳ್ಳಿಕೊಂಡು ಹೋಗಿದ್ದಾನೆ.

https://www.harithalekhani.com/wp-content/uploads/2024/11/1000564773.mp4

ಮುಖದ ಗುರುತು ಪತ್ತೆಯಾಗದಂತೆ ಬಟ್ಟೆ ಸುತ್ತಿಕೊಂಡು ನಕಲಿ ಕೀ ಬಳಸಿ ಬೈಕ್‌ ಕಳವು ನಡೆಸಿದ್ದಾನೆ.

https://www.harithalekhani.com/wp-content/uploads/2024/11/VID-20241107-WA0061.mp4

ಈ ಕುರಿತು ಇದೀಗ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version