ಮಂಡ್ಯ: ಈ ಹಿಂದೆ ದರ್ಶನ್ ಜೊತೆ ನಮ್ಮ ಸಂಬಂಧ ಹೇಗಿತ್ತೋ, ಈಗಲೂ ಹಾಗೆಯೇ ಇದೆ. ನನ್ನ ಲೈಫ್ ಇರೋವರೆಗೆ ದರ್ಶನ್ ನನ್ನ ಮಗನೇ ಎಂದು ಮಾಜಿ ಸಂಸದೆ ಹಾಗೂ ಹಿರಿಯ ನಟಿ ಸುಮಲತಾ ಅಂಬರೀಶ್ ಹೇಳಿದ್ದಾರೆ.
ದರ್ಶನ್ ಆರೋಗ್ಯ ಹಾಗೂ ಹತ್ಯೆ ಆರೋಪದ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ನನ್ನ ನಿಲುವು ಸಾಮಾಜಿಕ ಜಾಲತಾಣ ಮೂಲಕ ಸ್ಪಷ್ಟ ಪಡಿಸಿದ್ದೇನೆ. ಈ ಹಿಂದೆ ದರ್ಶನ್ ಜೊತೆ ನಮ್ಮ ಸಂಬಂಧ ಹೇಗಿತ್ತೋ, ಈಗಲೂ ಹಾಗೆಯೇ ಇದೆ. ನನ್ನ ಲೈಫ್ ಇರೋವರೆಗೆ ದರ್ಶನ್ ನನ್ನ ಮಗನೇ.
ಎಲ್ಲಾ ಆರೋಪಗಳಿಂದ ದರ್ಶನ್ ಮುಕ್ತನಾಗಿ ಹೊರಗೆ ಬರ್ತಾರೆ ಎನ್ನುವ ನಂಬಿಕೆ ಎಲ್ಲರಂತೆ ನಮಗೂ ಕೂಡ ಇದೆ. ದರ್ಶನ್ ಗೆ ಬೆನ್ನು ನೋವು ತುಂಬಾ ಇದೆ. ಆದರೆ ಸರ್ಜರಿ ಮಾಡಲು ಒಪ್ಪಿಲ್ಲವಂತೆ. ಸರ್ಜರಿ ಆದ್ರೆ ರಿಕವರಿ ಆಗಲು ತುಂಬಾ ಸಮಯ ತೆಗೆದುಕೊಳ್ಳುತ್ತೆ ದರ್ಶನ್ ಜೊತೆ ಫುಲ್ ಸೆಕ್ಯೂರಿಟಿ ಇದೆ, ಫೋನ್ ಕೂಡ ಉಪಯೋಗಿಸ್ತಿಲ್ಲ. ದೇವರು ದರ್ಶನ್ ನನ್ನ ಕಾಪಾಡುತ್ತಾರೆ ಎಂದು ಸುಲಮತಾ ಅಂಬರೀಶ್ ತಿಳಿಸಿದರು.
ದರ್ಶನ್ ಪತ್ನಿ ವಿಜಯಲಕ್ಷ್ಮಿ ಜೊತೆ ನಾನು ಟಚ್ ನಲ್ಲಿ ಇದ್ದು ದರ್ಶನ್ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದೇನೆ. ದರ್ಶನ್ ಮುಂದೆ ಸಾಕಷ್ಟು ಚಾಲೆಂಜ್‌ಗಳು ಇವೆ. ಈ ಕೇಸ್ ನಲ್ಲಿ ನಿಜ ಏನು ಅನ್ನೋದು ಹೊರಗೆ ಬರಬೇಕು ಎಂದರು