ವಕ್ಫ್ ವಿವಾದ: ರೈತ ಆತ್ಮಹತ್ಯೆಯೆಂದು ಸುಳ್ಳು ಸುದ್ದಿ.. ಸಂಸದ ತೇಜಸ್ವಿ ಸೂರ್ಯ, E-Paper ಸಂಪಾದಕನ ವಿರುದ್ಧ FIR..!

ಬೆಂಗಳೂರು: ವಕ್ಫ್ ಜಮೀನು ನೋಟೀಸ್ ವಿವಾದ ರಾಜ್ಯ ಮತ್ತು ರಾಷ್ಟ್ರದ ಮಟ್ಟದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸಮರ ಜೋರಾಗಿದೆ.

ಇದರ ಬೆನ್ನಲ್ಲೇ ಜಮೀನಿನ ಪಹಣಿಯಲ್ಲಿ ವಕ್ಫ್ ಹೆಸರು ನಮೂದು: ಹಾವೇರಿಯಲ್ಲಿ ರೈತ ಆತ್ಮಹತ್ಯೆ! ಎಂಬ ಶಿರ್ಷಿಕೆ ಅಡಿಯಲ್ಲಿ ಸುದ್ದಿ ಪ್ರಕಟಿಸಿದ ಮಾಧ್ಯಮ ಸಂಸ್ಥೆಯ ಸಂಪಾದಕ ಹಾಗೂ ಈ ಸುದ್ದಿಯನ್ನು ಪರಿಶೀಲಿಸದೆ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿದ ಸಂಸದ ತೇಜಸ್ವಿ ಸೂರ್ಯ ವಿರುದ್ಧ FIR ದಾಖಲಾಗಿದೆ.

ಈ ಕುರಿತು ಸುನಿಲ ಎನ್ನುವವರು ನೀಡಿದ ದೂರಿನ ಮೇರೆಗೆ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿವರ: ಜಮೀನಿನ ಪಹಣಿಯಲ್ಲಿ ವಕ್ಫ್ ಹೆಸರು ನಮೂದಾಗಿದ್ದಕ್ಕೆ ಹಾವೇರಿಯಲ್ಲಿ ಮನನೊಂದು ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.. ಸಧ್ಯ ರೈತರು ವಕ್ಫ್ ನೋಟಿಸ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬ ಸುದ್ದಿಯನ್ನು ಪ್ರಸಾರ ಮಾಡಿರುತ್ತಾರೆ.

ನಂತರ ಈ ಸುದ್ದಿಯನ್ನು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಟ್ಯಾಗ್ ಮಾಡಿ ತಮ್ಮ @tejasvi_surya ‘X’ A farmer in Haveri commits suicide after finding his land is taken over by Waqf!, In their haste to appease minorities, CM @siddaramaiah and minister @BZZameerAhmedK have unleashed catastrophic effects in Karnataka that are becoming impossible to contain with every passing day ಅಂತಾ ಇತ್ಯಾದಿ ಪೋಸ್ಟ್ ಮಾಡಿರುತ್ತಾರೆ.

ನಂತರ ನಾನು ಪ್ರಕಟವಾಗಿರುವ ಸುದ್ದಿಯಲ್ಲಿ ಬಂದಿರುವ ಮಾಹಿತಿಯನ್ನು ಪೊಲೀಸ್ ಅಧೀಕ್ಷಕರು, ಹಾವೇರಿ ಜಿಲ್ಲೆ ಅವರಿಗೆ ತಿಳಿಸಿದಾಗ, ಮೇಲ್ಕಂಡ ಸದರಿ ಸುದ್ದಿಯ ಬಗ್ಗೆ Fact Check ಮಾಡುವಂತೆ ತಿಳಿಸಿದರು.

ನಾನು ಮತ್ತು ಜಿಲ್ಲಾ ಪೊಲೀಸ್ ಕಛೇರಿಯ ಸಿಸ್ಟಂ ಎಡ್ಡಿನಿಸ್ಟ್ರೇಟರ್ ಪ್ರಕಾಶ ಗಾಯದ ಇವರು ಸೇರಿ Fact Check ಮಾಡಿದಾಗ, ಪ್ರಸ್ತುತದಲ್ಲಿ ಹಾವೇರಿ ಜಿಲ್ಲೆಯಲ್ಲಿ ಈ ರೀತಿ ನಕ್ಷ ವಿಷಯಕ್ಕೆ ಸಂಬಂಧಿಸಿದಂತೆ ರೈತ ಆತ್ಮಹತ್ಯೆ ಪ್ರಕರಣ ನಡೆದಿರುವುದಿಲ್ಲ.

ಆದರೆ E-Paper ಗಳಲ್ಲಿ ಬಂದಂತ ಸುದ್ದಿ ದಿನಾಂಕ: 06/01/2022 ರಂದು ಆಡೂರ ಪೊಲೀಸ್ ಠಾಣೆಯ ವ್ಯಾಪ್ತಿಯ ಹರನಗಿರಿ ಗ್ರಾಮದ ರೈತ ಸಾಲದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ವಿಷಯವಾಗಿದ್ದು, ಈ ಕುರಿತು ಈಗಾಗಲೆ ಆಡೂರ ಪೊಲೀಸ್ ಠಾಣೆ ಯುಡಿಆರ್ ನಂ. 3/2022 ಕಲಂ 174 ಸಿಆರ್‌ಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿ ಅಂತಿಮ ವರದಿಯನ್ನು ತಹಶಿಲ್ದಾರ ಹಾನಗಲ್ ರವರಿಗೆ ಸಲ್ಲಿಸಿದ್ದು, ಸದರಿ ಪ್ರಕರಣ ಮುಕ್ತಾಯವಾಗಿರುತ್ತದೆ. ಇದೇ ಸುದ್ದಿಯನ್ನು ಪ್ರಸ್ತುತ ವಕ್ಫ್ ವಿಚಾರಕ್ಕೆ ನಡೆದಿದೆ ಅಂತಾ ಬಿಂಬಿಸಿ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿರುವ ಬಗ್ಗೆ ಪೊಲೀಸ್ ಅಧೀಕ್ಷಕರಿಗೆ ತಿಳಿಸಿದಾಗ, ಈ ಬಗ್ಗೆ ದೂರು ನೀಡುವಂತೆ ತಿಳಿಸಿದ ಮೇರೆಗೆ ದೂರು ನೀಡಲಾಗಿದೆ.

ಈ ರೀತಿಯ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ತಮ್ಮ @tejasvi_surya ಎಂಬ “X” ಖಾತೆಯಲ್ಲಿ ಸುಳ್ಳು ಸುದ್ದಿಯನ್ನು ಪೋಸ್ಟ್ ಮಾಡಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಸುಳ್ಳು ಸುದ್ದಿ ಪ್ರಸಾರ ಮಾಡಿದ ಸುದ್ದಿ ಸಂಸ್ಥೆಯ ಸಂಪಾದಕರ ವಿರುದ್ಧ ಪ್ರಕರಣ ದಾಖಲಾಗಿದೆ.

ರಾಜಕೀಯ

BJP JDU: ಬಿಜೆಪಿ ಬೆಂಬಲ ಹಿಂಪಡೆದಿಲ್ಲ.. ಸ್ಪಷ್ಟನೆ ನೀಡಿದ ಜೆಡಿಯು ವಕ್ತಾರ..!

BJP JDU: ಬಿಜೆಪಿ ಬೆಂಬಲ ಹಿಂಪಡೆದಿಲ್ಲ.. ಸ್ಪಷ್ಟನೆ ನೀಡಿದ ಜೆಡಿಯು ವಕ್ತಾರ..!

ಮಣಿಪುರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಕ್ಷಣಕ್ಕೊಂದು ರೂಪ ತಾಳುತ್ತಿದೆ‌. ಮಣಿಪುರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದಿದಲ್ಲ BJP JDU

[ccc_my_favorite_select_button post_id="101466"]
ತೋಟದ ಮನೆ ವಾಸಿಗಳಿಗೆ ಗುಡ್ ನ್ಯೂಸ್ ಕೊಟ್ಟ ಸಚಿವ ಜಾರ್ಜ್

ತೋಟದ ಮನೆ ವಾಸಿಗಳಿಗೆ ಗುಡ್ ನ್ಯೂಸ್ ಕೊಟ್ಟ ಸಚಿವ ಜಾರ್ಜ್

ತಮ್ಮ ತಮ್ಮ ತೋಟದಗಳಲ್ಲಿ ಮನೆಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ಆ ಮನೆಗಳಿಗೂ ಸಹ ನಿರಂತರ ಜ್ಯೋತಿ ಮೂಲಕ ವಿದ್ಯುತ್ ಸಂಪರ್ಕ ಅಗತ್ಯವಿದ್ದು, Good news

[ccc_my_favorite_select_button post_id="101473"]
ನಮ್ಮ ಆದ್ಯತೆ ಯಾವುದು..?; ಕರವೇ ರಾಜಘಟ್ಟರವಿ ಬೇಸರ

ನಮ್ಮ ಆದ್ಯತೆ ಯಾವುದು..?; ಕರವೇ ರಾಜಘಟ್ಟರವಿ ಬೇಸರ

ಅರ್ಥ ಆಗುವವರಿಗೆ ಇದಕ್ಕಿಂತ ಹೆಚ್ಚಾಗಿ ಹೇಳಬೇಕಿಲ್ಲ. ಅರ್ಥ ಆಗದವರಿಗೆ ಹೇಳಿ ಪ್ರಯೋಜನವಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ‌. monalisa

[ccc_my_favorite_select_button post_id="101378"]

Indian Army Day 2025: ಇತಿಹಾಸ, ಥೀಮ್,

[ccc_my_favorite_select_button post_id="100962"]

Makara jyothi: ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ..

[ccc_my_favorite_select_button post_id="100927"]

Heart attack: ಕರ್ನಾಟಕದ ವೀರ ಯೋಧ ಸಾವು..!

[ccc_my_favorite_select_button post_id="100904"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

Kho kho world cup ಫೈನಲ್‌ನಲ್ಲಿ ಗೆದ್ದು ಬೀಗಿದ ಭಾರತ

Kho kho world cup ಫೈನಲ್‌ನಲ್ಲಿ ಗೆದ್ದು ಬೀಗಿದ ಭಾರತ

ಮೊದಲ ದಿನದಿಂದಲೂ ಭಾರತ ಮಹಿಳಾ ತಂಡ ಚಾಂಪಿಯನ್ ಆಗಲಿದೆ ಎಂಬ ದೊಡ್ಡ ನಿರೀಕ್ಷೆಯಿತ್ತು. Kho kho world cup

[ccc_my_favorite_select_button post_id="101277"]
ಅಶ್ಲೀಲವಾಗಿ ವರ್ತಿಸಿದ ‘ಜೈಲರ್’ ನಟ ವಿನಾಯಕನ್: Video ವೈರಲ್

ಅಶ್ಲೀಲವಾಗಿ ವರ್ತಿಸಿದ ‘ಜೈಲರ್’ ನಟ ವಿನಾಯಕನ್: Video ವೈರಲ್

ವೈರಲ್ ಆಗಿರುವ ವಿಡಿಯೋದಲ್ಲಿ ವಿನಾಯಕನ್ ಅವರು ಮನೆಯ ಬಾಲ್ಕನಿಯಲ್ಲಿ ನಿಂತು ನೆರೆಮನೆಯವರಿಗೆ ಬೈಯ್ದಿದ್ದಾರೆ. Vinayakan

[ccc_my_favorite_select_button post_id="101390"]
ಭೀಕರ ಅಪಘಾತ.. 10 ಮಂದಿ ದುರ್ಮರಣ.. 13 ಮಂದಿಗೆ ಪರಿಹಾರ ಘೋಷಣೆ..!

ಭೀಕರ ಅಪಘಾತ.. 10 ಮಂದಿ ದುರ್ಮರಣ.. 13 ಮಂದಿಗೆ ಪರಿಹಾರ ಘೋಷಣೆ..!

ಮೃತರು ಲಾರಿಯಲ್ಲಿ ಕುಮಟಾ ಸಂತೆ ಮಾರುಕಟ್ಟೆ ತರಕಾರಿ ವ್ಯಾಪಾರಕ್ಕಾಗಿ ತೆರಳುತ್ತಿದ್ದರು ಎಂದು ತಿಳಿದುಬಂದಿದೆ. Accident

[ccc_my_favorite_select_button post_id="101428"]

Accident: ಮಂತ್ರಾಲಯ ಮಠದ 3 ವಿದ್ಯಾರ್ಥಿಗಳು ಸಾವು..!

[ccc_my_favorite_select_button post_id="101415"]

FROM DODDABALLAPURA RAILWAY POLICE: ರೈಲಿಗೆ ಸಿಲುಕಿ

[ccc_my_favorite_select_button post_id="101334"]

Accident| KSRTC ಬಸ್ ಪಲ್ಟಿ..!| Video

[ccc_my_favorite_select_button post_id="101321"]

ಭೀಕರ ಅಪಘಾತ.. ಚಾಲಕ ಗ್ರೇಟ್ ಎಸ್ಕೇಪ್..!

[ccc_my_favorite_select_button post_id="101304"]

Accident: ತೊಂಡೇಭಾವಿ ಬಳಿ‌ ಮತ್ತೆ ಭೀಕರ ಅಪಘಾತ..

[ccc_my_favorite_select_button post_id="101281"]

ಕರ್ನಾಟಕ – ಆಂಧ್ರ ಬಸ್ ಓವರ್ ಟೇಕ್

[ccc_my_favorite_select_button post_id="101076"]

ಆರೋಗ್ಯ

ಸಿನಿಮಾ

2019ರ ಚಲನಚಿತ್ರ ಪ್ರಶಸ್ತಿ ಪ್ರಕಟ: ಕಿಚ್ಚ ಸುದೀಪ್‌‌ಗೆ ಅತ್ಯುತ್ತಮ ನಟ ಪ್ರಶಸ್ತಿ

2019ರ ಚಲನಚಿತ್ರ ಪ್ರಶಸ್ತಿ ಪ್ರಕಟ: ಕಿಚ್ಚ ಸುದೀಪ್‌‌ಗೆ ಅತ್ಯುತ್ತಮ ನಟ ಪ್ರಶಸ್ತಿ

ಖ್ಯಾತ ನಟ ಕಿಚ್ಚ ಸುದೀಪ್‌ ಮತ್ತು ಅನುಪಮಾ ಗೌಡ ಅವರು ಅತ್ಯುತ್ತಮ ನಟ ಹಾಗೂ ನಟಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. State Fim Awards

[ccc_my_favorite_select_button post_id="101446"]
error: Content is protected !!