Site icon ಹರಿತಲೇಖನಿ

ಹರಿತಲೇಖನಿ ದಿನಕ್ಕೊಂದು ಕಥೆ: ಸತ್ಯ ಹಾಗೂ ಮೌನ

ಮೂವರು ವ್ಯಕ್ತಿಗಳು ತಮ್ಮನ್ನು ಕರೆದೊಯ್ಯಲು ಬಂದ ದೇವಲೋಕದ ವಿಮಾನದಲ್ಲಿ ಸ್ವರ್ಗದತ್ತ ಪ್ರಯಾಣ ಬೆಳೆಸುತ್ತಿದ್ದರು.

ಆಗವರು ತನ್ನ ಶಿಕಾರಿಯಾದ ಕಪ್ಪೆಯನ್ನು ಕಬಳಿಸಲು ಮುಂದಾಗುತ್ತಿದ್ದ ಹಾವನ್ನು ಕಂಡರು. ಅವರಲ್ಲೊಬ್ಬ, “ಓ ಸರ್ಪವೆ! ಕಪ್ಪೆಯ ಮೇಲೆ ನಿನಗೆ ಅನುಕಂಪವೇ ಇಲ್ಲವೇ? ದಯವಿಟ್ಟು ಆ ಕಪ್ಪೆಯ ಜೀವವನ್ನು ಉಳಿಸು,” ಎಂದ.

ಸಿಟ್ಟಿಗೆದ್ದ ನಾಗ, “ನನ್ನ ಆಹಾರವನ್ನು ನನ್ನಿಂದ ದೂರಮಾಡಲು ನಿನಗೆಷ್ಟು ಧೈರ್ಯ? ನೀನು ನರಕಕ್ಕೆ ಹೋಗು,” ಎಂದವನಿಗೆ ಶಾಪ ಹಾಕಿತು. ಖಿನ್ನನಾಗಿ ಅವನು ನರಕಕ್ಕೆ ಹೋದ.

ಅದನ್ನು ವೀಕ್ಷಿಸಿದ ಎರಡನೆಯವನು ಆಶ್ಚರ್ಯಗೊಂಡು, ಹಾವಿನ ಪಕ್ಷವನ್ನು ಬೆಂಬಲಿಸಿ, “ಕಪ್ಪೆ ನಿನ್ನ ನೈಸರ್ಗಿಕವಾದ ಆಹಾರವಷ್ಟೆ. ಖಂಡಿತವಾಗಿಯೂ ನೀನದನ್ನು ತಿನ್ನಬಹುದು,” ಎಂದ.

ಆಕ್ರೋಶದಿಂದಾಗ ಕಪ್ಪೆ, “ನಾನು ತುತ್ತಾಗಬಹುದೆಂದು ಹೇಳಲು ನಿನಗಾವ ಅಧಿಕಾರ? ನಿನಗೆ ಕರುಣೆಯೇ ಇಲ್ಲ. ನೀನು ನರಕಯಾತನೆ ಅನುಭವಿಸು,” ಎಂದು ಅವನಿಗೆ ಎದುರಾಯಿತು. ಅವನು ದೇವಲೋಕದ ವಿಮಾನದಿಂದ ಕೆಳಗೆ ಬಿದ್ದ.

ಮೌನದಿಂದಿದ್ದ ಮೂರನೆಯವನು ಸ್ವರ್ಗವನ್ನು ಸೇರಿದ.

ಈ ಕಥೆಯ ನೀತಿಯೇನೆಂದರೆ, ಕೆಲವೊಮ್ಮೆ ಮೌನವಾಗಿರುವುದು ಮಾತಾಡುವುದಕ್ಕಿಂತ ಲೇಸು.

ಕೃಪೆ: ಸೆಂಟರ್ ಆಫ್ ಬ್ರಹ್ಮವಿದ್ಯ (ಸಾಮಾಜಿಕ ಜಾಲತಾಣ)

Exit mobile version