Site icon ಹರಿತಲೇಖನಿ

Crime news: ಊಟ ಕೇಳಿದ ಮಗುವನ್ನೇ ಹೊಡೆದು ಕೊಂದನ ಪಾಪಿ ತಂದೆ..?

ಚಿತ್ರದುರ್ಗ: ಊಟ ಕೇಳಿದ ಕಾರಣಕ್ಕೆ ಪಾಪಿ ತಂದೆಯೊಬ್ಬ ಸ್ವಂತ ಮಗನ ಮೇಲೆ ಹಲ್ಲೆ ನಡೆಸಿ, ಹತ್ಯೆ ಮಾಡಿದ್ದಾನೆ ಎನ್ನಲಾದ ಅಮಾನುಷ ಘಟನೆ ಚಿತ್ರದುರ್ಗ ತಾಲೂಕಿನ ಹಳೇ ರಂಗಾಪುರ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ.

ಊಟ ಬೇಕೆಂದು ಅಳುತ್ತಿದ್ದ ಮಗನ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆಂದು ಪತಿ ತಿಪ್ಪೇಶ್ ವಿರುದ್ಧ ಪತ್ನಿ ಗೌರಮ್ಮ ಭರಮಸಾಗರ. ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮೃತ ದುರ್ದೈವಿಯನ್ನು 06 ವರ್ಷದ ಮಂಜುನಾಥ ಎನ್ನಲಾಗಿದ್ದು, ಊಟ ಬೇಕೆಂದು ಅಳುತ್ತಿದ್ದ ಅದಕ್ಕಾಗಿ ತಾಯಿ ಪಕ್ಕದ ಮನೆಗೆ ಊಟ ತರಲು ಹೋಗಿದ್ದಳು. ಆದರೆ ಹಿಂತಿರುಗಿ ಬರುವಷ್ಟರಲ್ಲಿ ತಂದೆ ತಿಪ್ಪೇಶ್ ಮಗನ ಮೇಲೆ ಹಲ್ಲೆ ನಡೆಸಿದ್ದಾನೆ.

ಬೆನ್ನು ಪಕ್ಕೆಗೆ ಹೊಡೆದಿದ್ದು, ಮಗ ಮೂರ್ಛ ಹೋಗಿದ್ದಾನೆ. ತಾಯಿ ತಕ್ಷಣ ಮಗನನ್ನು ಚಿತ್ರದುರ್ಗದ ಖಾಸಗಿ ಆಸ್ಪತ್ರೆಗೆ ಕರೆತಂದರು. ಅಷ್ಟರಲ್ಲಿ ಬಾಲಕ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.

ಈ ಕುರಿತು ತಿಪ್ಪೇಶ್ ವಿರುದ್ಧ ಪತ್ನಿ ಗೌರಮ್ಮ ಭರಮಸಾಗರ ಠಾಣೆಯಲ್ಲಿ ದುರುದ್ದೇಶದಿಂದ ಮಗನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ದೂರು ನೀಡಿದ್ದಾರೆ.

ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version