ರಾಮನಗರ: ಚನ್ನಪಟ್ಟಣ ಉಪಚುನಾವಣೆ (channapatna by election) ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ದೊಡ್ಡಬಳ್ಳಾಪುರ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಭರ್ಜರಿ ಪ್ರಚಾರ ನಡೆಸಿದರು.
ಚನ್ನಪಟ್ಟಣ ತಾಲ್ಲೂಕಿನ ಶ್ಯಾನಭೋಗನಹಳ್ಳಿ, ಹುಣಸನಹಳ್ಳಿ, ಕೋಡಂಬಳಿ ಮುಂತಾದ ಗ್ರಾಮಗಳಲ್ಲಿ ನಿಖಿಲ್ ಪರ ಪ್ರಚಾರ ನಡೆಸಿದ ಅವರು, ನಿಮ್ಮ ಕಷ್ಟಕ್ಕೆ ಸ್ಪಂದಿಸುವ ಯುವಕನನ್ನ ಗೆಲ್ಲಿಸಿ.. ಸಾಮಾನ್ಯ ಜನರ ಭಾವನೆಯನ್ನ ಅರ್ಥಮಾಡಿಕೊಂಡು ಕೆಲಸ ಮಾಡುವ ಶಕ್ತಿ ನಿಖಿಲ್ ಕುಮಾರಸ್ವಾಮಿಗೆ ಇದೆ ಎಂದರು.
ಕುಮಾರಸ್ವಾಮಿ ಅವರು ಮುಖ್ಯ ಮಂತ್ರಿಯಾಗಿದ್ದ ವೇಳೆ ಬಡ ಸಾಮಾನ್ಯ ಮಹಿಳಾ ವರ್ಗದವರಿಗೆ ಬದುಕು ಕಟ್ಟಿ ಕೊಡುವಂತ ಕೆಲಸ ಮಾಡಿದ್ದರು. ಪ್ರಸ್ತುತ ಕೇಂದ್ರ ಸಚಿವರಾಗಿ ವಿದ್ಯಾವಂತ ಯುವ ಸಮುದಾಯಕ್ಕೆ ಅರ್ಹತೆ ತಕ್ಕ ಉದ್ಯೋಗ ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಅವರ ಕೈ ಬಲಪಡಿಸಲು ನಿಖಿಲ್ ಅವರನ್ನು ಜಯಶೀಲರನ್ನಾಗಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಡಾ.ವಿಜಯ್ ಕುಮಾರ್, ಮುಖಂಡರಾದ ಗೋವಿಂದ ರಾಜು, ಸತ್ಯನಾರಾಯಣ, ಕೆಂಪರಾಜ್, ಪ್ರಭಾಕರ್, ಪ್ರವೀಣ್,ಮಹೇಶ್, ರಾಕೇಶ್, ವಿಕಾಸ್, ಪುನೀತ್ ಮತ್ತಿತರರಿದ್ದರು.