Site icon ಹರಿತಲೇಖನಿ

ಯೋಗ ಶಿಕ್ಷಕಿ ಕಿಡ್ನಾಪ್‍.. ಸುಪಾರಿ ಆರೋಪದಡಿ ಮಹಿಳೆ ಸೇರಿದಂತೆ 6 ಮಂದಿ ಬಂಧನ

Dandupalya gang associates arrested..!

Dandupalya gang associates arrested..!

ಚಿಕ್ಕಬಳ್ಳಾಪುರ: ತನ್ನ ಪತಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಯೋಗ ಶಿಕ್ಷಕಿಯ ಕಿಡ್ನಾಪ್ ಮಾಡಿ ಕೊಲೆ ಮಾಡಲು ಸುಪಾರಿ ನೀಡಿದ್ದ ಆರೋಪದಡಿಯಲ್ಲಿ ಮಹಿಳೆ ಸೇರಿದಂತೆ 6 ಮಂದಿ ಅಪಹರಣಕಾರರನ್ನ ಚಿಕ್ಕಬಳ್ಳಾಪುರ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ಮೂಲದ ಸುಲೋಚನಾ ಕಿಡ್ನಾಪ್ ಆಗಿದ್ದ ಯೋಗ ಶಿಕ್ಷಕಿ. ಇನ್ನೂ ಕಿಡ್ನಾಪ್‌ಗೆ ಸುಪಾರಿ ನೀಡಿದ್ದು ಬಿಂದು ಎಂಬಾಕೆ.

ಬಿಂದು ಪತಿ ಜೊತೆ ಯೋಗ ಶಿಕ್ಷಕಿ ಸುಲೋಚನಾ ಅನೈತಿಕ ಸಂಬಂಧ ಹೊಂದಿದ್ದಾಳೆ ಅಂತ ಬಿಂದು ಸತೀಶ್ ರೆಡ್ಡಿ ಎಂಬಾತನಿಗೆ ಕೊಲೆ ಮಾಡಲು ಸುಪಾರಿ ನೀಡಿದ್ದಳಂತೆ. ಸುಪಾರಿ ಮೇರೆಗೆ ಸತೀಶ್ ರೆಡ್ಡಿ ಸುಲೋಚನಾ ಬಳಿ ಯೋಗ ಕಲಿಯುವ ನೆಪದಲ್ಲಿ ಆಕೆಯೆ ಪರಿಚಯ ಮಾಡಿಕೊಂಡು ಸಲುಗೆ ಬೆಳೆಸಿಕೊಂಡಿದ್ದನಂತೆ.

ಇನ್ನೂ ಆಕ್ಟೋಬರ್ 23 ರಂದು ಸುಲೋಚನಾಗೆ ಗನ್ ಶೂಟ್ ಟ್ರೈನಿಂಗ್ ಕೊಡುವುದಾಗಿ ಹೇಳಿ ನಂಬಿಸಿ ಸತೀಶ್ ರೆಡ್ಡಿ ಮನೆಯಿಂದ ಕರೆದುಕೊಂಡು ಹೋಗಿದ್ದಾನೆ. ಸತೀಶ್ ರೆಡ್ಡಿ ತನ್ನ ಸಹಚರರಾದ ನಾಗೇಂದ್ರ ರೆಡ್ಡಿ, ರಮಣಾರೆಡ್ಡಿ, ರವಿಚಂದ್ರನ ಜೊತೆ ಸೇರಿ ಸುಲೋಚನಾ ಕಾರಿನಲ್ಲಿ ಹೊರಟಿದ್ದು, ಇಡೀ ದಿನ ಬೆಂಗಳೂರಿನ ಹಲವು ಕಡೆ ಇಡಿ ಸುತ್ತಾಡಿ ಕೊನೆಗೆ ರಾತ್ರಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಧನಮಿಟ್ಟೇನಹಳ್ಳಿ ಬಳಿಯ ಅರಣ್ಯ ಪ್ರದೇಶದಲ್ಲಿ ಸುಲೋಚನಾಳನ್ನ ಕಾರಿನಿಂದ ಕೆಳೆಗೆ ಇಳಿಸಿ, ಆಕೆಯ ಮೇಲೆ ಹಲ್ಲೆ ಮಾಡಿದಲ್ಲದೆ ಅರೆಬೆತ್ತಲೆಗೊಳಿಸಿ ಲೈಂಗಿಕ ದೌರ್ಜನ್ಯ ನಡೆಸಿ ಕೊನೆಗೆ ಕಾರಿನಲ್ಲಿದ್ದ ಚಾರ್ಜರ್ ವೈರ್ ನಿಂದ ಕುತ್ತಿಗೆಗೆ ಬಲವಾಗಿ ಬಿಗಿದು ಕೊಲೆ ಮಾಡಲು ಯತ್ನಿಸಿದ್ದಾರೆಂದು ದೂರು ನೀಡಲಾಗಿದೆ.

ಆದರೆ ಯೋಗ ಶಿಕ್ಷಕಿಯಾಗಿದ್ದ ಸುಲೋಚನಾ ಕುತ್ತಿಗೆ ಬಿಗಿದಾಗ ನಾಲಿಗೆ ಹೊರ ಚಾಚಿ ಸತ್ತಂತೆ ನಾಟಕ ಮಾಡಿ ಉಸಿರು ಬಿಗಿದು ಹಿಡಿದು ಕೊಂಡಿದ್ದಾಳಂತೆ.

ಈ ವೇಳೆ ಸುಲೋಚನಾ ಸತ್ತಿದ್ದಾಳೆ ಎಂದು ಅಲ್ಲಿಂದ ಅಪಹರಣಕಾರರರು ಎಸ್ಕೇಪ್ ಆಗಿದ್ದಾರೆ. ನಂತರ ಸುಲೋಚನಾ ಬೆಳಿಗ್ಗೆ ಎದ್ದು ಬಂದು ಧನಮಿಟ್ಟೇನ ಹಳ್ಳಿಯಲ್ಲಿ ಸ್ಥಳೀಯರ ಮನೆಗೆ ಹೋಗಿ ಘಟನೆ ವಿವರಿಸಿ, ದಿಬ್ಬೂರಹಳ್ಳಿ ಪೊಲೀಸರನ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿ ದೂರು ನೀಡಿದ್ದಾರೆ.

ದೂರಿನನ್ವಯ ಪೊಲೀಸರು ಸುಪಾರಿ ನೀಡಿದ್ದ ಬಿಂದು ಹಾಗೂ ಕಿಡ್ನಾಪ್ ಮಾಡಿದ್ದ ಸರ್ತೀಶ್ ರೆಡ್ಡಿ, ನಾಗೇಂದ್ರ ರೆಡ್ಡಿ, ರಮಣಾರೆಡ್ಡಿ, ರವಿಚಂದ್ರ ಸೇರಿಂದತೆ ಕಿಡ್ನಾಪ್ ಮಾಡಲು ಕಳ್ಳತನ ಮಾಡಿದ್ದ ಕಾರು ವಶಕ್ಕೆ ಪಡೆದು, ಕಾರು ಕಳುವು ಮಾಡಿಕೊಟ್ಟಿದ್ದ ಅಪ್ರಾಪ್ತ ಬಾಲಕನನ್ನು ಬಂಧಿಸಿದ್ದಾರೆ.

Exit mobile version