ದೊಡ್ಡಬಳ್ಳಾಪುರ: ತಾಲೂಕಿನ ಪಂಚಗಿರಿ ಶ್ರೇಣಿಯಲ್ಲಿನ ಚಿಕ್ಕರಾಯಪ್ಪನಹಳ್ಳಿ ಗೌಡನಕೆರೆಯಲ್ಲಿ ಬುಧವಾರ ಈಜಲು ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ (Crime news) 24 ಗಂಟೆ ಕಳೆದರು ಮೃತ ದೇಹ ಪತ್ತೆಯಾಗಿಲ್ಲ.
ದೊಡ್ಡಬಳ್ಳಾಪುರದ ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ ಲಘುಮೇನಹಳ್ಳಿ ಗ್ರಾಮದ ನಿವಾಸಿ 21ವರ್ಷದ ಶ್ರೀನಿವಾಸ್ ಬುಧವಾರ ಸ್ನೇಹಿತರೊಂದಿಗೆ ಈಜಲು ಕೆರೆಗೆ ಹೋಗಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಕೆರೆಯಲ್ಲಿ ಹೆಚ್ಚಿನ ನೀರು ಇದ್ದು, ನಿನ್ನೆ ಯುವಕನ ಪತ್ತೆಯಾಗದ ಹಿನ್ನೆಲೆಯಲ್ಲಿ ಹಾಗೂ ಕತ್ತಲಾಗಿದ್ದರಿಂದ ಅಗ್ನಿಶಾಮಕದಳದ ಸಿಬ್ಬಂದಿ ಹುಡುಕಾಟ ನಿಲ್ಲಿಸಿದ್ದು, ಇಂದು ಮತ್ತೆ ಪ್ರಾರಂಭ ಮಾಡಿದ್ದರು.
Crime news ಮಧ್ಯಾಹ್ನದವರೆಗೂ ಹುಡುಕಿ ಸಾಧ್ಯವಾಗದೇ ಹೋದಾಗ ಎನ್‌ಡಿಆರ್ ಎಫ್ ತಂಡವನ್ನು ಕರೆಸಿ ಹುಡುಕಾಟ ನಡೆಸಿದರು. ಆದರೆ ಇಂದು ಸಹ ಮೃತ ದೇಹ ಪತ್ತೆಯಾಗದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ ಎಂದು ಸ್ಥಳೀಯರು ಹರಿತಲೇಖನಿಗೆ ತಿಳಿಸಿದ್ದಾರೆ.
ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಡಿಸಿ ಶಿವಶಂಕರ್, ಇನ್ಸ್ಪೆಕ್ಟರ್ ಸಾಧಿಕ್ ಪಾಷಾ ಭೇಟಿ ನೀಡಿದ್ದಾರೆ.