ಗುರುವಾರ, ನವೆಂಬರ್,07, 2023, ದೈನಂದಿನ ರಾಶಿ ಭವಿಷ್ಯ| astrology predictions
ಮೇಷ: ವೃತ್ತಿ ಕ್ಷೇತ್ರದಲ್ಲಿ ಹೊಸ ಜವಾಬ್ದಾರಿ ದೊರೆಯುವ ಯೋಗವಿದೆ, ಆಸ್ತಿಗೆ ಸಂಬಂಧಿಸಿದ ಕೆಲಸಗಳಿಗೆ ಅನುಕೂ ಲಕರ ಸಮಯ. ವ್ಯಾಪಾರ ಕಾರ್ಯಾಚರ ಣೆಗಳಲ್ಲಿ ಅಡಚಣೆ. ಧೈರ್ಯ ಹೆಚ್ಚಲಿದೆ.
ವೃಷಭ: ಸಾಮರಸ್ಯವನ್ನು ಕಾಪಾಡಿಕೊಳ್ಳುವುದು ನಿಮಗೆ ಉತ್ತಮ. ಪ್ರವಾಸೀ ತಾಣಗಳಿಗೆ ಭೇಟಿ ನೀಡುವ ಬಗ್ಗೆ ಯೋಜನೆ. ಕೆಲಸದ ಒತ್ತಡ ಹೆಚ್ಚೇ ಇದ್ದರೂ ಅದನ್ನು ಸುಲಭವಾಗಿ ನಿರ್ವಹಿಸುತ್ತೀರಿ.
ಮಿಥುನ: ನಿಮ್ಮ ಬೆಲೆಬಾಳುವ ವಸ್ತುಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಿ. ಉದ್ಯಮಿಗಳಿಗೆ ಇಂದು ವ್ಯವಹಾರದಲ್ಲಿ ವಿಶೇಷ ದಿನ. ಇದು ಭವಿಷ್ಯದಲ್ಲಿ ನಿಮಗೆ ಬಹಳಷ್ಟು ಪ್ರಯೋಜನವನ್ನು ನೀಡುತ್ತದೆ.
ಕಟಕ: ಆಕಸ್ಮಿಕ ಪ್ರಯಾಣದ ಸಾಧ್ಯತೆಗಳಿವೆ. ನಿಮ್ಮ ಆರ್ಥಿಕ ಸ್ಥಿತಿ ಬಲ ವಾಗುವ ದಿನ. ರಾಜಕೀಯ ವಲಯದಲ್ಲಿ ವಿಶೇಷ ಗೌರವ. ಪರೀಕ್ಷೆಗೆ ತಯಾರಾಗುವ ವಿದ್ಯಾರ್ಥಿಗಳು ಶ್ರಮ ಪಡಬೇಕು.
ಸಿಂಹ: ಆರ್ಥಿಕ ರಂಗದವರಿಗೆ ಇಂದು ಮಿಶ್ರ ದಿನವಾಗಿರುತ್ತದೆ. ಕುಟುಂಬದಲ್ಲಿ ಇಂದು ಮಂಗಳಕರ ಕಾರ್ಯ ಕ್ರಮಗಳು ನಡೆಯಬ ಹುದು. ಇದರಿಂದಾಗಿ ಓಡಾಟ ಹೆಚ್ಚುವುದು.
ಕನ್ಯಾ: ಯಾವುದೇ ಕಾರ್ಯಕ್ಕೆ ಕೈ ಹಾಕಿದರೂ ಅರ್ಧಕ್ಕೆ ಬಿಡದಿರಿ. ಇದರಿಂದ ಮುಂದಕ್ಕೆ ಪ್ರಯೋಜನ ವಿದೆ. ದಾಂಪತ್ಯ ಜೀವನ ಸುಖಮಯ. ಆರ್ಥಿಕ ರಂಗದಲ್ಲಿ ಇಂದು ಸಾಮಾನ್ಯಕ್ಕಿಂತ ಉತ್ತಮ.
ತುಲಾ: ಫಲಿತಾಂಶಗಳನ್ನು ಪಡೆಯಬಹುದು. ಬಾಕಿ ಇರುವ ಕೆಲಸವನ್ನು ಮಾಡಿ. ಅದು ಪೂರ್ಣ ಗೊಳ್ಳುವ ನಿರೀಕ್ಷೆಯಿದೆ. ಇಂದು ನಿಮ್ಮ ಮನಸ್ಸಿನಲ್ಲಿ ಹೊಸ ಯೋಜನೆಗಳು ಮೂಡುವುದು.
ವೃಶ್ಚಿಕ: ವಿಜ್ಞಾನ ತಂತ್ರಜ್ಞಾನ, ಸಂಶೋಧನಾ ಕಾರ್ಯದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಯಶಸ್ವಿ ಯಾಗುತ್ತಾರೆ. ಆದಾಯದಲ್ಲಿ ಹೆಚ್ಚಳದ ಬಲವಾದ ಸಾಧ್ಯತೆಯಿದೆ.
ಧನಸ್ಸು: ಮಕ್ಕಳ ಬಗ್ಗೆ ಯೋಚನೆಗಳು ನಿಮ್ಮನ್ನು ಕಾಡಬಹುದು. ಪ್ರೀತಿಗೆ ಸಂಬಂಧಿಸಿದ ವಿಷಯಗಳಲ್ಲಿ ಉದಾಸೀನತೆ ಇರುತ್ತದೆ.
ಮಕರ: ಆರ್ಥಿಕ ವಿಷಯದಲ್ಲಿ ಇಂದು ನಿಮಗೆ ಅದೃಷ್ಟ ವಿರುತ್ತದೆ. ತಮ್ಮ ಉದ್ಯೋಗವನ್ನು ಬದಲಾಯಿಸಲು ಬಯ ಸುತ್ತಿರುವ ಜನರಿಗೆ ಈ ಸಮಯ ಉತ್ತಮ ವಾಗಿರುತ್ತದೆ. ಕೌಟುಂಬಿಕ ವೈಷಮ್ಯ ಕಾಡಬಹುದು.
ಕುಂಭ: ವ್ಯಾಪಾರಸ್ಥರಿಗೆ ದಿನವು ಏರಿಳಿತದಿಂದ ಕೂಡಿರಲಿದ್ದು, ಆರ್ಥಿಕ ದೃಷ್ಟಿಯಿಂದ, ಸಾಲ ತೆಗೆದು ಕೊಳ್ಳುವುದನ್ನು ತಪ್ಪಿಸಿ. ಮೇಲಾಧಿಕಾರಿಗಳು ನಿಮ್ಮ ಕಡೆಗೆ ಆಕರ್ಷಿತರಾಗುತ್ತಾರೆ.
ಮೀನ: ಕಳ್ಳತನ ತಪ್ಪಿಸಲು ಎಚ್ಚರಿ ಕೆಯಿಂದ ಪ್ರಯಾಣಿಸಿ. ಪೋಷಕರ ಆರೋಗ್ಯದ ಕಡೆಗೆ ಹೆಚ್ಚು ಕಾಳಜಿ ವಹಿಸಿ. ಅತಿಥಿಗಳ ಆಗ ಮನದ ಸಾಧ್ಯತೆ ಇದೆ.
ರಾಹುಕಾಲ: 01:30PM ರಿಂದ 3:00PM
ಗುಳಿಕಕಾಲ: 09:00AM ರಿಂದ 10:30AM
ಯಮಗಂಡಕಾಲ: 06:00AM ರಿಂದ 07:30AM