Site icon ಹರಿತಲೇಖನಿ

ದೇವರ ಹೆಸರಿಗೆ ದೇವಾಲಯಗಳ ಆಸ್ತಿ ನೋಂದಣಿ ಮಾಡಿ: ವಿಶ್ವಪ್ರಸನ್ನತೀರ್ಥ ಸ್ವಾಮೀಜಿ

ದಾವಣಗೆರೆ: ದೇವಾಲಯಗಳ ಆಸ್ತಿಯನ್ನು ದೇವರ ಹೆಸರಿನಲ್ಲಿ ನೋಂದಣಿ ಮಾಡಿಸುವ ಮೇಲ್ಪಂಕ್ತಿಯನ್ನು ಹಾಸನ ಜಿಲ್ಲೆಯ ಅಧಿಕಾರಿಗಳು ಹಾಕಿಕೊಟ್ಟಿದ್ದು, ಅದೇ ಮಾದರಿಯಲ್ಲಿ ಧಾರ್ಮಿಕ, ದತ್ತಿ ಇಲಾಖೆ ಅಧೀನದ ಹಿಂದು ದೇವಾಲಯಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕೆಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

Aravind, BLN Swamy, Lingapura

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿ ಧಾರ್ಮಿಕ ದತ್ತಿ ಇಲಾಖೆ ಇದ್ದು, ಅದೇ ಇಲಾಖೆಯಡಿ ಇರುವ ದೇವಾಲಯಗಳು, ದೇವಾಲಯಗಳ ಆಸ್ತಿಗಳ ರಕ್ಷಣೆಗೆ ಸರ್ಕಾರ ಮೊದಲು ಮುಂದಾಗಬೇಕು. ದೇವರ ಹೆಸರಿನಲ್ಲಿ ಆಸ್ತಿಗಳನ್ನು ನೋಂದಣಿ ಮಾಡಿಸಬೇಕು ಎಂದರು.

ರೈತರ ಜಮೀನು ವಕ್ಷ ಆಸ್ತಿ ಅಂತಾ ಮಾಡಿದ್ದು ಇದರ ಹಿಂದೆ ಯಾರು ಕೆಲಸ ಮಾಡಿದ್ದಾರೆಂಬ ಬಗ್ಗೆ ಬಹಿರಂಗ ಆಗಬೇಕು. ಯಾರ ಆಸ್ತಿ ಇನ್ನಾರಿಗೋ ಇದ್ದಕ್ಕಿದ್ದಂತೆ ಹೋಗುತ್ತದೆ. ಯಾಕೆ ಹೀಗಾಯಿತು? ನಮ್ಮ ಆಸ್ತಿ ಬೇರೆಯವರ ಆಸ್ತಿ ಅಂದರೆ ಹೇಗೆ? ಹಾಗಾಗಬಾರದಿತ್ತು ಎಂಬ ಪ್ರಶ್ನೆ ಸಹಜ. ಈಗ ಎಲ್ಲರೂ ಸಹ ಎಚ್ಚರವಾಗಿದ್ದಾರೆ.

Aravind, BLN Swamy, Lingapura

ಇಂತಹದ್ದೊಂದು ಕಾನೂನು ಎಲ್ಲಿಂದ ಬಂದಿತು, ಯಾಕೆ ಬಂದಿತು, ಹೇಗೆ ಬಂದಿತು ಎಂಬ ಬಗ್ಗೆಯೂ ಸಮಗ್ರ ವಿಚಾರಣೆ ಆಗಬೇಕು ಎಂದರು.

ವಕ್ಸ್‌ ಆಸ್ತಿ ಅಂತಾ ನೋಟಿಸ್ ಕೊಟ್ಟಿದ್ದನ್ನು ವಾಪಸ್ ಪಡೆಯುವುದಷ್ಟೇ ಅಲ್ಲ, ಪಹಣಿಯಲ್ಲೂ ಬದಲಾಗಬೇಕು. ವಕ್ಷ ಮಂಡಳಿ, ವಕ್ಷೆ ಇಲಾಖೆಯಿಂದ ಇದು ಹಗಲು ದರೋಡೆ ಆಗುತ್ತಿದೆ.

ಅದು ಆಗದಂತೆ ಸರ್ಕಾರ ತಡೆಗಟ್ಟಬೇಕು. ಎಲ್ಲಾ ಪ್ರಜೆಗಳೂ ನೆಮ್ಮದಿಯಾಗಿ ಬಾಳಬೇಕು. ವಕ್ಸ್ ಮಂಡಳಿ ಯಾಕೆ ಬಂದಿತೆಂಬ ಬಗ್ಗೆ, ಯಾಕೆ ರದ್ದು ಮಾಡಬೇಕೆಂಬ ಬಗ್ಗೆ ತಜ್ಞರು ಚರ್ಚಿಸಬೇಕು ಎಂದರು.

Exit mobile version