Site icon ಹರಿತಲೇಖನಿ

ಇಂದಿನ ಭವಿಷ್ಯ: ಕೋಪದಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಈ ರಾಶಿಯವರಿಗೆ ಹಾನಿಕಾರಕವಾಗಲಿದೆ

Keep valuables safe

Keep valuables safe

ಬುಧವಾರ, ನವೆಂಬರ್ 05, 2024 ದೈನಂದಿನ ರಾಶಿ ಭವಿಷ್ಯ: astrology predictions

Aravind, BLN Swamy, Lingapura

ಮೇಷ: ಕಷ್ಟದ ಸಮಯದಲ್ಲಿ ನೆರೆಯವರಿಗೆ ಸಹಾಯ ಮಾಡುವುದು ನಿಮಗೆ ಖುಷಿ ನೀಡುತ್ತದೆ. ಮಾರ್ಕೆಟಿಂಗ್ ಸಂಬಂಧಿತ ಕೆಲಸಗಳಲ್ಲಿ ಹೊಸ ತಂತ್ರಜ್ಞಾನವನ್ನು ಬಳಸಿ.

ವೃಷಭ: ವಾಹನ ಚಾಲನೆ ವೇಳೆ ಎಚ್ಚರವಿರಲಿ. ಯೋಜನೆಯಂತೆ ಎಲ್ಲವೂ ನಡೆದರೆ ಮನಸ್ಸಿನಲ್ಲಿ ಸಂತೋಷ. ಸಂಬಂಧಗಳನ್ನು ಗೌರವಿಸುವುದರಿಂದ, ಮನೆಯಲ್ಲಿ ನೆಮ್ಮದಿ ನೆಲೆಸುವುದು.

Aravind, BLN Swamy, Lingapura

ಮಿಥುನ: ರೈತರಿಗೆ ಇಂದು ಹೆಚ್ಚಿನ ವ್ಯಾಪಾರವಾಗಲಿದೆ. ಪತಿ-ಪತ್ನಿ ಯರ ಸಂಬಂಧದಲ್ಲಿ ಸಾಮರಸ್ಯ. ಆರೋಗ್ಯ ಚೆನ್ನಾಗಿರುತ್ತದೆ.

ಕಟಕ: ಇಂದು ನಿಮ್ಮ ಸಾಮರ್ಥ್ಯವನ್ನು ಕಡಿಮೆ ಮಾಡಬಹುದು. ಕುಟುಂಬದ ಸದಸ್ಯರ ಅಗತ್ಯಗಳನ್ನು ಸಹ ನೋಡಿಕೊಳ್ಳಿ. ಹೂಡಿಕೆಗೆ ಸಂಬಂಧಿಸಿದ ಕೆಲಸದಲ್ಲಿ ಕೆಲವು ರೀತಿಯ ಲೋಪ ಉಂಟಾಗಬಹುದು.

ಸಿಂಹ: ಸಂವೇದನಾಶೀಲ ಸಂಗತಿಯಾಗಿರುವ ಸಂದರ್ಭ ಗಳು ಎದುರಾಗಬಹುದು. ಕೋಪದಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಹಾನಿಕಾರಕವಾಗಲಿದೆ. ನಿಮ್ಮ ಮನಸು ಹೇಳಿದಂತೆ, ಕೆಲವು ಕೆಲಸಗಳನ್ನು ಮಾಡದಿದ್ದರೆ ಅತೃಪ್ತಿ.

ಕನ್ಯಾ: ಇತರರ ಅಗತ್ಯಗಳನ್ನು ಪೂರೈಸಲಿದ್ದೀರಿ. ಕುಟುಂಬದ ಸದಸ್ಯರಲ್ಲಿ ವಾತ್ಸಲ್ಯ ಮತ್ತು ಪ್ರೀತಿ ಉಳಿಯುತ್ತದೆ. ಯಾವುದೇ ಕೆಲಸದಲ್ಲಿ ಯಶಸ್ಸಿನಿಂದ ಮನಸ್ಸಿನಲ್ಲಿ ಸಂತೋಷ.

ತುಲಾ: ಯೋಜನೆಯ ಸಂಶೋಧನೆಯಲ್ಲಿ ಕೆಲಸ ಮಾಡಬಹುದು.ಇದಲ್ಲದೇ ವ್ಯಾಪಾರಕ್ಕೆ ಸಂಬಂಧಿಸಿದವರು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು. ನಿಮ್ಮ ಪ್ರೀತಿಪಾತ್ರರಿಗೆ ನಿಮ್ಮ ಮಾತುಗಳನ್ನು ವಿವರಿಸಲು ಸ್ವಲ್ಪ ಕಷ್ಟವಾಗಬಹುದು.

ವೃಶ್ಚಿಕ: ಹೊಸ ವಿಷಯಗಳನ್ನು ಕಲಿಯುವ ನಿಮ್ಮ ಸಾಮರ್ಥ್ಯವು ಗಮನಾರ್ಹವಾಗಿರುತ್ತದೆ. ನಕಾರಾತ್ಮಕ ಆಲೋಚನೆಗಳು ನಿಮ್ಮನ್ನು ಆಳಲು ಬಿಡಬೇಡಿ. ಕೆಲಸದ ಸ್ಥಳದಲ್ಲಿ ಕೆಲ ದಿನಗಳಿಂದ ಇದ್ದ ಸಮಸ್ಯೆಗಳು ಸ್ವಲ್ಪ ಮಟ್ಟಿಗೆ ಸುಧಾರಿಸುವ ಸಾಧ್ಯತೆ ಇದೆ.

ಧನಸ್ಸು: ಸ್ವಲ್ಪ ಪ್ರಾಯೋಗಿಕ ಮತ್ತು ಸ್ವಾರ್ಥಿಯಾಗಿರುವುದು ಸಹ ಅಗತ್ಯವಾಗಿದೆ. ಇತರ ರಿಗೆ ಸಹಾಯ ಮಾಡುವಾಗ ಸುರಕ್ಷತೆಯನ್ನು ನೋಡಿಕೊಳ್ಳಿ. ನಿಮ್ಮ ನೈಜ ಸನ್ನಿವೇಶಗಳು ನಿಮ್ಮ ಭರವಸೆಯನ್ನು ತೃಪ್ತಿಪಡಿಸಲು ಅನುಮತಿ ಸುತ್ತದೆಯೇ ಎಂಬುದನ್ನು ಗಮನಿಸಬೇಕಾಗುತ್ತದೆ.

ಮಕರ: ಪ್ರೀತಿ ಪಾತ್ರರ ಜೊತೆ ವಾದಗಳನ್ನು ಉಂಟುಮಾಡುವ ವಿವಾದಾತ್ಮಕ ಸಮಸ್ಯೆ. ಆತ್ಮಾವಲೋಕನ ದಲ್ಲಿಯೂ ಸ್ವಲ ಸಮಯ ಕಳೆಯಿರಿ. ಭಾವೋದ್ವೇಗಕ್ಕೆ ಒಳಗಾಗು ವ ಮೂಲಕ, ನೀವೇ ಹಾನಿ ಮಾಡಿಕೊಳ್ಳಬಹುದು.

ಕುಂಭ: ಯಾವುದನ್ನೂ ಮತ್ತು ಯಾರನ್ನೂ ಲಘುವಾಗಿ ಪರಿಗಣಿಸಬೇಡಿ, ಪ್ರತಿಯೊಂದು ವಿಷಯದಲ್ಲೂ ಲಾಭ, ಮನಸ್ಸಿಗೆ ಸಂತೋಷ, ವಿಶೇಷ ವ್ಯಕ್ತಿ ಯನ್ನು ಭೇಟಿಯಾಗುವುದರಿಂದ ಮನಸ್ಥಿತಿಯಲ್ಲಿ ಬದಲಾವಣೆ.

ಮೀನ: ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಕಾರ್ಯಕ್ಷಮತೆ ಕಡಿಮೆ ಯಾಗುವ ಸಾಧ್ಯತೆಯಿದೆ. ಆರ್ಥಿಕ ಮತ್ತು ಕೌಟುಂಬಿಕ ಸ್ಥಿತಿ ಇಂದು ಉತ್ತಮವಾಗಿ ರುತ್ತದೆ. ನಿಮ್ಮ ಪ್ರಮುಖ, ಗೌಪ್ಯ ವಿಚಾರಗಳನ್ನು ಯಾರಿಗೂ ತಿಳಿಸದಿರಿ.

ರಾಹುಕಾಲ: 12:00PM ರಿಂದ 01:30PM
ಗುಳಿಕಕಾಲ: 10:30AM ರಿಂದ 12:00PM
ಯಮಗಂಡಕಾಲ: 07:30AM ರಿಂದ 09:00AM

Exit mobile version