Site icon ಹರಿತಲೇಖನಿ

Murder: ಮದುವೆಯಾಗಬೇಕಿದ್ದ ಪೊಲೀಸ್ ಪೇದೆ ಮಸಣಕ್ಕೆ..!;

Channel Gowda
Hukukudi trust

ಹಾಸನ: ಪೊಲೀಸ್ ಪೇದೆಯೋರ್ವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ದುದ್ದ ಗ್ರಾಮದ ಹೊರವಲಯದ ಡಾಬಾ ಸರ್ಕಲ್‌ನಲ್ಲಿ ಸೋಮವಾರ ರಾತ್ರಿ ನಡೆದಿದೆ.

Aravind, BLN Swamy, Lingapura

ಕೊಲೆಯಾದ ಪೇದೆ ಬಾಗೇಶಪುರ ಗ್ರಾಮದ ನಿವಾಸಿ ಹರೀಶ್ ವಿ (32) ಎಂದು ಗುರುತಿಸಲಾಗಿದೆ. ನ.11ರಂದು ಮದುವೆಯಾಗಬೇಕಿತ್ತು.

ನಿನ್ನೆ ತಮ್ಮ ವಿವಾಹ ಕುರಿತಾದ ಆಮಂತ್ರಣ ಪತ್ರಿಕೆ ಸಂಬಂಧಿಕರಿಗೆ ನೀಡಿ ಬೈಕ್ ಮೇಲೆ ವಾಪಸ್ ಬರುವಾಗ ಹಂತಕರು ಅಟ್ಯಾಕ್ ಮಾಡಿ ಕೊಂದು ಹಾಕಿದ್ದಾರೆ.

Aravind, BLN Swamy, Lingapura

ಹತ್ಯೆಯಾದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಜೇತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ದುದ್ದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಕೊಲೆಯಾದ ಹರೀಶ್ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯಲ್ಲಿ ಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದರು.

Exit mobile version