ದೊಡ್ಡಬಳ್ಳಾಪುರ: ಟಿಪ್ಪರ್ ಲಾರಿ ಡಿಕ್ಕಿ ಹೊಡೆದು (Accident), ದೇಹದ ಮೇಲೆ ಹರಿದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲಿಯೇ ಸಾವನಪ್ಪಿರುವ ಘಟನೆ ತಾಲೂಕಿನ ಅರಳು ಮಲ್ಲಿಗೆ ಕೆರೆ ಏರಿ ಮೇಲೆ ಸೋಮವಾರ ರಾತ್ರಿ ಸಂಭವಿಸಿದೆ.
ಘಟನೆಯಲ್ಲಿ ಮೃತ ಬೈಕ್ ಸವಾರರನ್ನು ಅರಳು ಮಲ್ಲಿಗೆ ಗ್ರಾಮದ ನಿವಾಸಿ 28 ವರ್ಷದ ಲೋಕೇಶ್ ಎಂದು ಗುರುತಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿಯಿಂದ ನೆಲಮಂಗಲ ಕಡೆ ತಿರುವ ಪಡೆಯುವ ಸಂದರ್ಭದಲ್ಲಿ ಆಲಹಳ್ಳಿ ಸಮೀಪದ ಮೇಲ್ ಸೇತುವೆ ಬಳಿ ಕಾರಿಗೆ ಗುದ್ದಿರುವ ಟಿಪ್ಪರ್ ಚಾಲಕ, ಕಾರು ಜಖಂಗೊಂಡಿರುವುದನ್ನು ಕಂಡು ಸ್ಥಳದಿಂದ ಪರಾರಿಯಾಗಿದ್ದಾನೆ.
ಈ ಬರದಲ್ಲಿ ಅರಳು ಮಲ್ಲಿಗೆ ಕೆರೆ ಕಟ್ಟೆಯಲ್ಲಿ ಎದುರಾದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ನಿಯಂತ್ರಣ ತಪ್ಪಿ, ದ್ವಿಚಕ್ರ ವಾಹನ ಸವಾರನ ಮೇಲೆ ಟಿಪ್ಪರ್ ವಾಹನದ ಚಕ್ರ ಹರಿದಿದ್ದು, ದೇಹ ನುಜ್ಜುಗುಜ್ಜಾಗಿದೆ.
ಈ ಕುರಿತಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದ್ದು, ಟಿಪ್ಪರ್ ವಾಹನ ಹಾಗೂ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.