ಸಿಎಂ, ಡಿಸಿಎಂ, ಸಚಿವರ ಮನೆಗಳಿಗೆ ರೈತರು ನುಗ್ಗುವ ದಿನಗಳು ದೂರವಿಲ್ಲ: HD ಕುಮಾರಸ್ವಾಮಿ ವಾರ್ನಿಂಗ್

ಚನ್ನಪಟ್ಟಣ; ವಕ್ಫ್ ವಿವಾದವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಆದಷ್ಟು ಬೇಗ ಸರಿ ಮಾಡದಿದ್ದರೆ ರೈತರೇ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಚಿವರ ಮನೆಗಳಿಗೆ ನುಗ್ಗುವ ದಿನಗಳು ದೂರವಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.

ಚನ್ನಪಟ್ಟಣ ಕ್ಷೇತ್ರದಲ್ಲಿ ಪ್ರಚಾರದ ನಡುವೆ ದೊಡ್ಡನಹಳ್ಳಿ ಗ್ರಾಮದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಸಚಿವರು; ಎಷ್ಟು ದಿನ ಜನರಿಗೆ ಹೀಗೆ ಮೋಸ ಮಾಡುತ್ತೀರಾ? ಒಂದು ಸಮುದಾಯವನ್ನು ಚಿವುಟುತ್ತೀರಾ? ಮತ್ತೊಂದು ಸಮುದಾಯದ ತೊಟ್ಟಿಲು ತೂಗುತ್ತಿರಾ? ಜನರಲ್ಲಿ ಕ್ಷಮೆ ಕೇಳಿ ಸರಿ ಮಾಡಿಕೊಳ್ಳಿ. ಇಲ್ಲವಾದರೆ ಜನರೇ ನಿಮ್ಮ ಮನೆಗಳಿಗೆ ನುಗ್ಗುವ ಕಾಲ ದೂರವಿಲ್ಲ.

ಮೊನ್ನೆ ಮೊನ್ನೆ ಕಾಂಗ್ರೆಸ್ ಎಂಎಲ್ ಸಿ ಒಬ್ಬರು ರಾಜ್ಯಪಾಲರ ಮನೆಗೆ ಬಾಂಗ್ಲಾ ದೇಶದ ಪ್ರಧಾನಿ ಮನೆಗೆ ಜನ ನುಗ್ಗಿದಂತೆ ನುಗ್ಗುತ್ತಾರೆ ಅಂದಿದ್ದರು. ಅದೇ ಪರಿಸ್ಥಿತಿ ನಿಮಗೂ ಬಂದರೂ ಅಚ್ಚರಿ ಇಲ್ಲ. ರೈತರ ತಾಳ್ಮೆ ಪರೀಕ್ಷೆ ಮಾಡಬೇಡಿ ಎಂದು ಎಚ್ಚರಿಕೆ ಕೊಟ್ಟರು.

ನಾನು ಸಿಎಂ ಆಗಿದ್ದ ಅವಧಿಯಲ್ಲಿ ನನ್ನ ಮುಂದೆ ಯಾವುದೇ ವಕ್ಫ್ ಕಡತ ಬಂದಿರಲಿಲ್ಲ. ಹೆಚ್.ಡಿ.ಕುಮಾರಸ್ವಾಮಿ, ಯಡಿಯೂರಪ್ಪ ಮತ್ತು ಬಸವರಾಜ್ ಬೊಮ್ಮಾಯಿ ಅವರ ಕಾಲದಲ್ಲೂ ವಕ್ಫ್ ತೀರ್ಮಾನ ಆಗಿದೆ ಸಿಎಂ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆ ಬೇಜಬ್ದಾರಿತನದ್ದು ಎಂದು ಅವರು ಕಿಡಿಕಾರಿದರು.

ರೈತರ ಭೂಮಿ‌ಯಾಗಲಿ, ಹಿಂದೂ ಮಠದ ಭೂಮಿಯಾಗಲಿ, ರಾಮನಗರದ ಗುಡ್ಡಬೆಟ್ಟವನ್ನು ವಕ್ಫ್ ಗೆ ನೀಡಲು ಯಾವುದೇ ಕಡತ ನನ್ನ ಬಳಿ ಬಂದಿರಲಿಲ್ಲ. ಯಾವ ದೃಷ್ಟಿಯಿಂದ ಸಿಎಂ ಅವರು ಹೇಳಿದ್ದಾರೋ ಗೊತ್ತಿಲ್ಲ. ಮಾಡಿರುವ ತಪ್ಪನ್ನು ಬೇರೆಯವರ ಮೇಲೆ ಹೊರೆಸಬೇಡಿ. ಒಂದು ವೇಳೆ ನಮ್ಮ ತಪ್ಪಿದ್ದರೆ ಜನರ ಮುಂದೆ ಇಡಿ ಎಂದು ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದರು.

ಒಂದು ವೇಳೆ ನನ್ನ ಕಾಲದಲ್ಲಿ ವಕ್ಫ್ ವಿಚಾರಕ್ಕೆ ಸಂಬಂಧಿಸಿ ಏನಾದರೂ ಆಗಿದ್ದರೆ ಅದಕ್ಕೆ ಕಾಂಗ್ರೆಸ್ ಪಕ್ಷವೇ ಕಾರಣ. ಕಂದಾಯ ಸಚಿವರಾಗಿದ್ದವರು ಕೃಷ್ಣಭೈರೇಗೌಡರು, ವಕ್ಫ್ ಮಂತ್ರಿ ಆಗಿದ್ದವರು ಈಗಿನ ವಕ್ಫ್ ಸಚಿವರೇ.

ನನ್ನ ಗಮನಕ್ಕೆ ಬಾರದೆ ಅವರು ಮಾಡಿದ್ದರೆ ಅದಕ್ಕೂ ನಮಗೂ ಸಂಬಂಧ ಇಲ್ಲ. ನಾನು ಯಾವುದೇ ಕಾನೂನು ಬಾಹಿರ ಕೃತ್ಯಕ್ಕೆ ಅವಕಾಶ ಕೊಟ್ಟಿಲ್ಲ. ಇಂತಹ ವಿಚಾರದಲ್ಲಿ ನಾನು ರಾಜಕೀಯ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು ಸಚಿವರು.

ವಿನಾಕಾರಣ ನನ್ನನ್ನು ಎಳೆಯುವುದಾದರೆ ಅದನ್ನು ಎದುರಿಸಲು ನಾನು ಸಿದ್ದನಿದ್ದೇನೆ. ಪಲಾಯನ ಮಾಡುವುದಿಲ್ಲ. ಸಿಎಂ ಆದವರು ಸುಳ್ಳು ಹೇಳಬಾರದು. ಸತ್ಯ ಹರಿಶ್ಚಂದ್ರನಂತೆ ‘ಸತ್ಯಮೇವ ಜಯತೇ’ ಜಪ ಮಾಡುತ್ತಾರೆ. ದಿನವೂ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸ್ವಲ್ಪ ಜವಾಬ್ದಾರಿಯಿಂದ ಮಾತಾಡಬೇಕು. ಕಾಂಗ್ರೆಸ್ ಜನರನ್ನು ಧರ್ಮ, ಜಾತಿ ಹೆಸರಿನಲ್ಲಿ ಒಡೆದು ಅಳುತ್ತಿದೆ. ಇದು ಕಾಂಗ್ರೆಸ್ ಸರ್ವನಾಶದ ಕಾಲ. ಅದನ್ನು ಮಲ್ಲಿಕಾರ್ಜುನ ಖರ್ಗೆಯವರೇ ಹೇಳಿದ್ದಾರೆ. ಇವರ ನಡವಳಿಕೆಯಿಂದ ಕಾಂಗ್ರೆಸ್ ಸರ್ವನಾಶ ಆಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ರಾಜಕೀಯ

ದೊಡ್ಡಬೆಳವಂಗಲ VSSN: ಕಾಂಗ್ರೆಸ್‌ಗೆ ಅಧ್ಯಕ್ಷ, ಬಿಜೆಪಿಗೆ ಉಪಾಧ್ಯಕ್ಷ..!

ದೊಡ್ಡಬೆಳವಂಗಲ VSSN: ಕಾಂಗ್ರೆಸ್‌ಗೆ ಅಧ್ಯಕ್ಷ, ಬಿಜೆಪಿಗೆ ಉಪಾಧ್ಯಕ್ಷ..!

ದೊಡ್ಡಬೆಳವಂಗಲ ವ್ಯವಸಾಯ ಸೇವಾ ಸಹಕಾರ ಸಂಘದ (VSSN) ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಾಗಿದೆ.

[ccc_my_favorite_select_button post_id="102385"]
ಸಿದ್ದು, ಬಿಎಸ್‌ವೈಗೆ ನಿರ್ಣಾಯಕ ದಿನ..!

ಸಿದ್ದು, ಬಿಎಸ್‌ವೈಗೆ ನಿರ್ಣಾಯಕ ದಿನ..!

ನ್ಯಾ.ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠವು ಆದೇಶವನ್ನು ಕಾಯ್ದಿರಿಸಿದ್ದು ಶುಕ್ರವಾರ ಈ ಎರಡೂ ಅರ್ಜಿಗಳ ಆದೇಶ ಹೊರಬೀಳಲಿದೆ. Cmsiddaramaiah

[ccc_my_favorite_select_button post_id="102376"]
Video: ಸಂಕೋಲೆಗಳಲ್ಲಿ ಕಟ್ಟಿ ಭಾರತೀಯರ ಅವಮಾನಿಸಿದ ಮೋದಿ ಮಿತ್ರ ಟ್ರಂಪ್ ಸರ್ಕಾರ.. ವ್ಯಾಪಕ ಆಕ್ರೋಶ

Video: ಸಂಕೋಲೆಗಳಲ್ಲಿ ಕಟ್ಟಿ ಭಾರತೀಯರ ಅವಮಾನಿಸಿದ ಮೋದಿ ಮಿತ್ರ ಟ್ರಂಪ್ ಸರ್ಕಾರ.. ವ್ಯಾಪಕ

ವೈರಲ್ ವಿಡಿಯೋದಲ್ಲಿ ಅಕ್ರಮ ವಲಸಿಗರ ಕಾಲನ್ನು ಸಂಕೋಲೆಗಳಲ್ಲಿ ಕಟ್ಟಿರುವುದು ಹಾಗೂ ಕೈಗಳನ್ನು ಕೋಳಗಳಿಂದ ಬಂಧಿಸಿರುವುದು ಸ್ಪಷ್ಟವಾಗಿ ಕಂಡುಬಂದಿದೆ. Video

[ccc_my_favorite_select_button post_id="102365"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಕ್ರೀಡಾ ಶಾಲೆ/ ವಸತಿ ನಿಲಯ ಪ್ರವೇಶಾತಿಗೆ ಆಯ್ಕೆ ಪ್ರಕ್ರಿಯೆ

ಕ್ರೀಡಾ ಶಾಲೆ/ ವಸತಿ ನಿಲಯ ಪ್ರವೇಶಾತಿಗೆ ಆಯ್ಕೆ ಪ್ರಕ್ರಿಯೆ

ವಿಭಾಗ ಮಟ್ಟಕ್ಕೆ ಆಯ್ಕೆಯಾಗುವ ಕಿರಿಯ ಕ್ರೀಡಾಪಟುಗಳಿಗೆ ವಿಭಾಗ ಮಟ್ಟಕ್ಕೆ ತೆರಳಲು ಇಲಾಖೆಯಿಂದ ಪ್ರಯಾಣಭತ್ಯೆ ನೀಡಲಾಗುವುದು. hostel admission

[ccc_my_favorite_select_button post_id="101814"]

Kho kho world cup ಫೈನಲ್‌ನಲ್ಲಿ ಗೆದ್ದು

[ccc_my_favorite_select_button post_id="101277"]

Khel ratna: ಗುಕೇಶ್ ಸೇರಿ 4 ಕ್ರೀಡಾಪಟುಗಳಿಗೆ

[ccc_my_favorite_select_button post_id="99992"]

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್..

[ccc_my_favorite_select_button post_id="98503"]
ಹೊಸಕೋಟೆಯಲ್ಲಿ ಪುಷ್ಪ ಸಿನಿಮಾ ಮಾದರಿ ಕ್ರೈಮ್..! 180 ತುಂಡು ರಕ್ತ ಚಂದನ ವಶ

ಹೊಸಕೋಟೆಯಲ್ಲಿ ಪುಷ್ಪ ಸಿನಿಮಾ ಮಾದರಿ ಕ್ರೈಮ್..! 180 ತುಂಡು ರಕ್ತ ಚಂದನ ವಶ

ಆಂಧ್ರ ಪೊಲೀಸರ ತನಿಖೆಗೆ ಹೊಸಕೋಟೆ ಪೊಲೀಸರು ಸಾಥ್ ನೀಡಿದ್ದಾರೆ. ಪತ್ತೆಯಾದ ರಕ್ತಚಂದನದ ತುಂಡುಗಳನ್ನು ಆಂಧ್ರ ಪೊಲೀಸರು ತಮ್ಮ ರಾಜ್ಯಕ್ಕೆ ರವಾನಿಸಿದ್ದಾರೆ. (Hosakote)

[ccc_my_favorite_select_button post_id="102381"]
ಬಸ್ -ಬೈಕ್ ಡಿಕ್ಕಿ: 1 ವರ್ಷದ ಮಗು ಸೇರಿ ಒಂದೇ ಕುಟುಂಬದ ಐವರ ಸಾವು

ಬಸ್ -ಬೈಕ್ ಡಿಕ್ಕಿ: 1 ವರ್ಷದ ಮಗು ಸೇರಿ ಒಂದೇ ಕುಟುಂಬದ ಐವರ

ಹುಲಿಗೆಮ್ಮ ದೇವಿಯ ದೇವರ ಕಾರ್ಯಕ್ರಮಕ್ಕಾಗಿ ಗುರುಗುಂಟಾಗೆ ತೆರಳುತ್ತಿದ್ದಾಗ ತಿಂಥಣಿ ಸಮೀಪ ಮುಂದೆ ಸಾಗುತ್ತಿದ್ದ ಲಾರಿಯನ್ನು ಓವರ್ ಟೇಕ್ ಮಾಡುವಾಗ ಎದುರಿಗೆ ಬಂದ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಕ್ಕಳು ಸೇರಿ ಐವರು ಸ್ಥಳದಲ್ಲೇ

[ccc_my_favorite_select_button post_id="102325"]

ಆರೋಗ್ಯ

ಸಿನಿಮಾ

ಅನಂತ್ ನಾಗ್, ಬಾಲಕೃಷ್ಣ ಸೇರಿ 139 ಮಂದಿಗೆ ಪದ್ಮ ಗೌರವ

ಅನಂತ್ ನಾಗ್, ಬಾಲಕೃಷ್ಣ ಸೇರಿ 139 ಮಂದಿಗೆ ಪದ್ಮ ಗೌರವ

ಕನ್ನಡ ಸಿನಿಮಾ ಇಡೀ ದೇಶದ ಚಿತ್ರರಂದ ಮಂದಿ ಗೌರವಿ ಸುವ ಹೆಸರು ಅನಂತ್ ನಾಗ್ ಅವರದು. ಆದರೆ 140ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ, ಅಂಕು‌ರ್ ಸೇರಿದಂತೆ 10ಕ್ಕೂ ಹೆಚ್ಚು ಹಿಂದಿ ಚಿತ್ರಗಳಲ್ಲಿ ನಟಿಸಿ, ರಾಷ್ಟ್ರಪ್ರಶಸ್ತಿಗೂ

[ccc_my_favorite_select_button post_id="101669"]
error: Content is protected !!