horoscope today: ಭಾನುವಾರ, ನವೆಂಬರ್ 3, 2024, ದೈನಂದಿನ ರಾಶಿ ಭವಿಷ್ಯ
ಮೇಷ:
ನಿಮ್ಮ ಘನತೆ, ವೈಯಕ್ತಿಕ ಗುರಿ, ಕರ್ತವ್ಯ ಶಕ್ತಿ ಎಲ್ಲವೂ ಇಂದು ಉನ್ನತ ಮಟ್ಟದಲ್ಲಿರುವುದು. ಎಲ್ಲರಿಂದ ಬೆಂಬಲ ಪಡೆಯುವಿರಿ. ಮಾನಸಿಕ ನಿರಾಳತೆ.
ವೃಷಭ:
ನೆಮ್ಮದಿ ಹಾಳು ಮಾಡುವ ಗತಕಾಲದ ಕೆಲವು ವಿಚಾರಗಳನ್ನು ಇತ್ಯರ್ಥ ಮಾಡಲು ಸಮರ್ಥರಾಗುವಿರಿ. ಅಪ್ತರಿಂದ ಸೂಕ್ತ ನೆರವು, ಸಾಂತ್ವನ ಲಭ್ಯ.
ಮಿಥುನ:
ಪ್ರೀತಿಪಾತ್ರರನ್ನು ಸಂತೋಷಪಡಿಸಲು ಯತ್ನಿಸುವಿರಿ. ಭಿನ್ನಮತ ನಿವಾರಣೆ. ಆರೋಗ್ಯದ ಕುರಿತು ಎಚ್ಚರ ವಹಿಸಿ. ಖರ್ಚು ಹೆಚ್ಚಳವು ಚಿಂತೆ ತರುತ್ತದೆ.
ಕಟಕ:
ಅದೃಷ್ಟದ ದಿನ. ಎಲ್ಲವೂ ಗುಣಾತ್ಮಕವಾಗಿ ಸಾಗುವವು. ಪ್ರತಿಕೂಲ ಸನ್ನಿವೇಶವೂ ನಿಮಗೆ ಪೂರಕವಾಗಿ ಬದಲಾಗುವುದು. ತೃಪ್ತಿಕರ ಅನುಭವ.
ಸಿಂಹ:
ಕುಟುಂಬ ಮತ್ತು ವೃತ್ತಿಯ ನಡುವೆ ಹೊಂದಾಣಿಕೆ ಕಷ್ಟವಾದೀತು. ಎರಡನ್ನೂ ಕಡೆಗಣಿಸದಂತೆ ಯೋಜನೆ ರೂಪಿಸಿ.
ಕನ್ಯಾ:
ವೃತ್ತಿಯಲ್ಲಿ ಸವಾಲು. ಕೆಲವರು ನಿಮ್ಮ ಸ್ಟೈರ್ಯ ಕೆಡಿಸಲು ಯತ್ನಿಸುವರು. ಸಂಬಂಧದಲ್ಲಿನ ತೊಡಕು ನಿವಾರಣೆ, ಪ್ರೀತಿಯ ವಿಷಯದಲ್ಲಿ ಗುಣಾತ್ಮಕ ಬೆಳವಣಿಗೆ.
ತುಲಾ:
ಮನಸ್ಸು ಅಶಾಂತ. ಯಾವುದೋ ಸಮಸ್ಯೆ ಕಾಡುತ್ತಿರುತ್ತದೆ. ಸಮಾಧಾನ ಚಿತ್ತರಾಗಿ ಯೋಚಿಸಿ. ಸಂಧಿನೋವು ಅಥವಾ ಬೆನ್ನುನೋವು ಕಾಡಬಹುದು.
ವೃಶ್ಚಿಕ:
ಇಂದು ನಿಮ್ಮ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಗುರುತಿಸಿ. ನಕಾರಾತ್ಮಕ ಆಲೋಚನೆಗಳು ನಿಮ್ಮನ್ನು ಆಳಲು ಬಿಡಬೇಡಿ. ಈ ಸಮಯದಲ್ಲಿ ಮಾಡಿದ ಕಠಿಣ ಕೆಲಸವು ಮುಂದಿನ ದಿನಗಳಲ್ಲಿ ಖಚಿತವಾದ ಫಲಿತಾಂಶವನ್ನು ನೀಡಲಿದೆ.
ಧನಸ್ಸು:
ಆಸ್ತಿ ಖರೀದಿ ಮತ್ತು ಮಾರಾಟದ ಬಗ್ಗೆ ಯೋಜನೆಯನ್ನು ಮಾಡುವಿರಿ, ಆದ್ದರಿಂದ ಇಂದು ಫಲಪ್ರದವಾಗು ವ ಸಮಯ ಬಂದಿದೆ.
ಮಕರ:
ಇತ್ತೀಚಿನ ದಿನಗಳಲ್ಲಿ ನೀವು ನಿಮ್ಮ ದಿನಚರಿಯಲ್ಲಿ ಕೆಲವು ಬದಲಾವಣೆಗಳನ್ನು ಮತ್ತು ಶಿಸ್ತನ್ನು ತರಲು ಪ್ರಯತ್ನಿಸುತ್ತಿದ್ದೀರಿ, ಅದು ನಿಮ್ಮ ವ್ಯಕ್ತಿತ್ವ ಮತ್ತು ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ.
ಕುಂಭ:
ಯಾವುದೇ ಸವಾಲು ಎದುರಿಸುವ ಆತ್ಮವಿಶ್ವಾಸ ಇಂದು ನಿಮ್ಮಲ್ಲಿದೆ. ಹಾಗಾಗಿ ಯಾವುದೇ ಸೋಲು ತಟ್ಟದು. ಕೌಟುಂಬಿಕ ಸಹಕಾರ ನಿಮ್ಮ ಜತೆಗಿದೆ.
ಮೀನ:
ನಿಮಗಿಂದು ಪೂರಕ ದಿನ. ಉದ್ದೇಶಿತ ಕಾರ್ಯ ಸಫಲ. ಬಂಧುಗಳಿಂದ ಕಿರಿಕಿರಿ ಒದಗಿದರೂ ಅದನ್ನು నిభాయనువరి. ಖರ್ಚು ತಹಬಂದಿಗೆ.
ರಾಹುಕಾಲ: 04:30PM ರಿಂದ 06:00PM
ಗುಳಿಕಕಾಲ: 03:00PM ರಿಂದ 04:30PM
ಯಮಗಂಡಕಾಲ: 12:00PM ರಿಂದ 01:30PM