ರಾಮನಗರ: ಚನ್ನಪಟ್ಟಣ ಕ್ಷೇತ್ರದ ಅಕ್ಕೂರು ಹೊಸಹಳ್ಳಿಯಿಂದ ಪ್ರಚಾರ ಆರಂಭಿಸಿದ NDA ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅಕ್ಕೂರು, ಸಾದರಹಳ್ಳಿ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆದರು. (channapatna by election)
ಡಿಕೆ ಶಿವಕುಮಾರ್ ಅವರ ಹೇಳಿಕೆ ಪ್ರತಿಕ್ರಿಯೆಸಿದ ನಿಖಿಲ್ ಅವರು ಹಿನ್ನಲೆ, ಸಂಸ್ಕೃತಿಗೆ ತಕ್ಕಂತೆ ಮಾತಾಡ್ತಾರೆ. ನಾನು ಅದ್ಯಾವುದಕ್ಕೂ ಮಾತಾಡಲ್ಲ ಎಂದು ನಿಖಿಲ್ ಡಿಕೆ ಶಿವಕುಮಾರ್ ಅವರಿಗೆ ತಿರುಗೇಟು ನೀಡಿದರು.
ನಮ್ಮದು ಅಭಿವೃದ್ಧಿ ರಾಜಕಾರಣ
ಎದುರಾಳಿಗಳ ಸ್ಟಾಟರ್ಜಿ ಏನೇ ಆಗಿರಲಿ.ನಾನು ಯಾವುದಕ್ಕೂ ಪ್ರವೋಕ್ ಆಗೋದಿಲ್ಲ. ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಮುಖಂಡರು ನನ್ನ ಜತೆ ಹೆಜ್ಜೆ ಹಾಕುತಿದ್ದಾರೆ.
ಯಡಿಯೂರಪ್ಪ ಅವರೆ ನನ್ನ ಹೆಸರು ಘೋಷಣೆ ಮಾಡಿದ್ದಾರೆ. ದೇವೆಗೌಡರು ನಾಳೆಯಿಂದ ಗ್ರಾಮಪಂಚಾಯತಿ ಮಟ್ಟದಿಂದ ಪ್ರಚಾರ ಮಾಡಬೇಕಿತ್ತು. ಆದರೆ ಆರೋಗ್ಯ ಸ್ವಲ್ಪ ಸರಿ ಇಲ್ಲ ಎಂದು ತಿಳಿಸಿದರು.
ಇವತ್ತು 25 ಹಳ್ಳಿಗೆ ಹೋಗ್ತಾ ಇದ್ದೇನೆ 107 ಹಳ್ಳಿಗೆ ಇನ್ನೂ ಹೋಗುವುದು ಬಾಕಿ ಇದೆ ನಿಮ್ಮೆಲರ ಆಶೀರ್ವಾದ ಯುವಕ ನಿಖಿಲ್ ಮೇಲೆ ಇರಲಿ ಎಂದು ಮನವಿ ಮಾಡಿದರು. (Channapattana by election)