ಶುಕ್ರವಾರ, ನವೆಂಬರ್.01, 2024, ದೈನಂದಿನ ರಾಶಿ ಭವಿಷ್ಯ| horoscope today
ಮೇಷ: ಕಷ್ಟದ ಸಮಯದಲ್ಲಿ ನೆರೆಯವರಿಗೆ ಸಹಾಯ ಮಾಡುವುದು ನಿಮಗೆ ಖುಷಿ ನೀಡುತ್ತದೆ. ಮಾರ್ಕೆಟಿಂಗ್ ಸಂಬಂಧಿತ ಕೆಲಸಗಳಲ್ಲಿ ಹೊಸ ತಂತ್ರಜ್ಞಾನವನ್ನು ಬಳಸಿ.
ವೃಷಭ: ಕನಸು ಈಡೇರಿಕೆಯ ಸಮಯವಿದು. ಆದರೆ, ಇದಕ್ಕೆ ನಿಮ್ಮ ಪರಿಶ್ರಮದ ಅಗತ್ಯವಿದೆ. ವಾಹನ ಚಾಲನೆ ವೇಳೆ ಎಚ್ಚರವಿರಲಿ. ವ್ಯಾಪಾರದಲ್ಲಿನ ಲಾಭವು ಇಂದು ಅನೇಕ ವ್ಯಾಪಾರಿಗಳ ಮತ್ತು ಉದ್ಯಮಿಗಳ ಮುಖದಲ್ಲಿ ಸಂತೋಷವನ್ನು ತರುತ್ತದೆ.
ಮಿಥುನ: ತಪ್ಪು ಮಾಡುತ್ತಿರುವ ಮನೋಭಾವ ನಿಮ್ಮಲ್ಲಿದೆ. ಈ ಸಂದರ್ಭದಲ್ಲಿ ನಿಮ್ಮ ಮನಸ್ಸಿನ ಶಕ್ತಿ ಹೆಚ್ಚಿಸಿಕೊಂಡು ನಿಮ್ಮ ಮೇಲೆ ನಿಯಂತ್ರಣ ಹೊಂದಿ.ನಿಮ್ಮ ಮೇಲೆ ನಿಮಗೆ ಭರವಸೆ ಇರಲಿ.
ಕಟಕ: ಕುಟುಂಬದ ಸದಸ್ಯರ ಅಗತ್ಯಗಳನ್ನು ಸಹ ನೋಡಿಕೊಳ್ಳಿ. ಹೂಡಿಕೆಗೆ ಸಂಬಂಧಿಸಿದ ಕೆಲಸದಲ್ಲಿ ಕೆಲವು ರೀತಿಯ ಲೋಪ ಉಂಟಾಗಬಹುದು.
ಸಿಂಹ: ರಾಜಿ ವಿಚಾರದಲ್ಲಿ ಕಷ್ಟ ಗಳನ್ನು ಎದುರಿಸಲಿದ್ದೀರಿ. ಸಂವೇದ ನಾಶೀಲ ಸಂಗತಿಯಾಗಿರುವ ಸಂದ ರ್ಭಗಳು ಎದುರಾಗಬಹುದು. ಬದ ಲಾವಣೆಗಳಿಗಿದು ಸಕಾಲವಲ್ಲ. ಎಚ್ಚರಿಕೆ ವಹಿಸಿ.
ಕನ್ಯಾ: ಶುಕ್ರನ ಪ್ರಭಾವ ನಿಮ್ಮ ರಾಶಿ ಮೇಲಿದೆ. ಇತರರ ಅಗತ್ಯಗಳನ್ನು ಪೂರೈಸಲಿದ್ದೀರಿ ಎಲ್ಲರನ್ನೂ ಎಲ್ಲಾ ವಿಚಾರದಲ್ಲಿ ತೃಪ್ತಿ ಪಡಿಸುವುದು ಅಸಾಧ್ಯ.ಬೇಸರ ಬೇಡ. ಮುನ್ನಡೆಯಿರಿ.
ತುಲಾ: ಯೋಜನೆಯಂತೆ ಎಲ್ಲವೂ ನಡೆದರೆ ಮನಸ್ಸಿನಲ್ಲಿ ಸಂತೋಷ, ಸಂಬಂಧಗಳನ್ನು ಗೌರವಿಸುವುದರಿಂದ, ಮನೆಯಲ್ಲಿ ನೆಮ್ಮದಿ ನೆಲೆಸುವುದು.
ವೃಶ್ಚಿಕ: ಕುಟುಂಬದ ಸದಸ್ಯರ ಉತ್ತಮ ಸಲಹೆ ನಿಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಹೊಸ ವಿಷಯಗಳನ್ನು ಕಲಿಯುವ ನಿಮ್ಮ ಸಾಮರ್ಥ್ಯವು ಗಮನಾರ್ಹವಾಗಿರುತ್ತದೆ. ಹೊಸ ಆಲೋಚನೆಗಳನ್ನು ಪರೀಕ್ಷೆಗೆ ಒಳಪಡಿಸಲು ಸೂಕ್ತ ಸಮಯ.
ಧನಸ್ಸು: ನಿಮ್ಮ ಭಾವನಾತ್ಮಕ ಮಹತ್ವಾಕಾಂಕ್ಷೆಗಳನ್ನು ಈಡೇರುವ ಸಮಯವಿದು. ಆದರೆ, ನಿಮ್ಮ ನೈಜ ಸನ್ನಿವೇಶಗಳು ನಿಮ್ಮ ಭರವಸೆಯನ್ನು ತೃಪ್ತಿಪಡಿಸಲು ಅನುಮತಿಸುತ್ತದೆಯೇ ಎಂಬುದನ್ನು ಗಮನಿಸಬೇಕಾಗುತ್ತದೆ.
ಮಕರ: ಕೋಪದಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಹಾನಿಕಾರಕವಾಗಿದೆ. ನಿಮ್ಮ ಮನಸು ಹೇಳಿದಂತೆ, ಕೆಲವು ಕೆಲಸಗಳನ್ನು ಮಾಡದಿದ್ದರೆ ಅತೃಪ್ತಿ.
ಕುಂಭ: ಮೂಲಭೂತ ಅಂಶಗಳನ್ನು ಉತ್ತಮವಾಗಿ ನಿಭಾಯಿಸಿದರೆ ನಿಮ್ಮ ಯೋಜನೆಗಳು ಉತ್ತಮವಾಗಿರುತ್ತವೆ. ಯಾವುದನ್ನೂ ಮತ್ತು ಯಾರನ್ನೂ ಲಘುವಾಗಿ ಪರಿಗಣಿಸ ಬೇಡಿ,ಕೆಲಸವು ಯೋಗ್ಯವಾಗಿದೆ ಎಂದೆನಿಸಿದರೆ, ಅದನ್ನು ನೀವೇ ಮಾಡುವುದು ಉತ್ತಮವಾಗಿರುತ್ತದೆ.
ಮೀನ: ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಮತ್ತು ಅನಗತ್ಯ ವಿಶ್ಲೇ ಷಣೆ ಮತ್ತು ಊಹಾಪೋಹಗಳಿಂದ ದೂರವಿರಿ. ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಕಾರ್ಯಕ್ಷಮತೆ ಕಡಿಮೆಯಾಗುವ ಸಾಧ್ಯತೆಯಿದೆ.
ರಾಹುಕಾಲ: 10:30AM ರಿಂದ 12:00PM
ಗುಳಿಕಕಾಲ: 07:30AM ರಿಂದ 09:00AM
ಯಮಗಂಡಕಾಲ: 03:00PM ರಿಂದ 04:30PM
ವಿಶೇಷ; ಅಮಾವಾಸ್ಯೆ, ದೀಪಾವಳಿ, ಲಕ್ಷ್ಮೀ ಪೂಜೆ, ಕನ್ನಡ ರಾಜ್ಯೋತ್ಸವ.