ದೊಡ್ಡಬಳ್ಳಾಪುರ: ತಾಲ್ಲೂಕಿನ ತೂಬಗೆರೆ ಗ್ರಾಮಪಂಚಾಯಿತಿ (grama panchayat) ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆದಿದ್ದು, ಅವಿರೋಧ ಆಯ್ಕೆ ನಡೆದಿದೆ.
ಚುನಾವಣಾ ಅಧಿಕಾರಿ ಗಿರಿಜಾಂಬ, ಸಹಾಯಕ ಚುನಾವಣೆ ಅಧಿಕಾರಿ ವೆಂಕಟೇಶ್ ಸಮ್ಮುಖದಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ಮುನಿಲಕ್ಷ್ಮಮ್ಮ ರಾಮಕೃಷ್ಣ ಮತ್ತು ಮಂಜುಳಮ್ಮ ರಾಜ್ ಕುಮಾರ್ ಹೊರತು ಪಡಿಸಿ ಮತ್ಯರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ, grama panchayat ಅಧ್ಯಕ್ಷರಾಗಿ ಮುನಿಲಕ್ಷ್ಮಮ್ಮ ರಾಮಕೃಷ್ಣ, ಉಪಾಧ್ಯಕ್ಷರಾಗಿ ಮಂಜುಳಮ್ಮ ರಾಜ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಪ್ಪಯಣ್ಣ, ಕೆಪಿಸಿಸಿ ಸದಸ್ಯ ಮುನಿರಾಜು ಸೇರಿದಂತೆ ಹಲವು ಗಣ್ಯರು ಶುಭ ಹಾರೈಸಿದರು.
ಇದನ್ನೂ ಓದಿ; Doddaballapura: ದೊಡ್ಡಬೆಳವಂಗಲ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಕಲಾವತಿ ಕೃಷ್ಣಮೂರ್ತಿ ಆಯ್ಕೆ
ಈ ಸಂದರ್ಭದಲ್ಲಿ ಹಿರಿಯ ಗ್ರಾಮ ಪಂಚಾಯಿತಿ ಸದಸ್ಯರಾದ ಕೃಷ್ಣಪ್ಪ, ನರಸಿಂಹಮೂರ್ತಿ, ಮುನಿಕೃಷ್ಣಪ್ಪ , ನಾಗೇಶ್, ಗಂಗಾಧರ, ಮಹಿಳಾ ಸದಸ್ಯರಾದ ಲೋಕೇಶ್ವರಿ ರವಿ ಸಿದ್ದಪ್ಪ, ವರಲಕ್ಷ್ಮೀ, ಸುರೇಶ್ ಬಾಬು, ವೆಂಕಟೇಗೌಡ, ಮುಖಂಡರಾದ ಪುಟ್ಟಪ್ಪ, ಸುಬ್ರಹ್ಮಣ್ಯಪ್ಪ, ಯುವ ಮುಖಂಡ ಉದಯ ಆರಾಧ್ಯ ಮತ್ತಿತರರಿದ್ದರು.