ದೊಡ್ಡಬಳ್ಳಾಪುರ: ತಾಲೂಕಿನ ಜಿ ಸೋಣ್ಣೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ 9 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಎಲ್ಲಾ ಒಂಬತ್ತು ಕಾರ್ಯಕಾರಿಣಿ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣೆ ಅಧಿಕಾರಿ ಭಾಸ್ಕರ್, ಸಹಾಯ ಚುನಾವಣೆ ಅಧಿಕಾರಿ ಲಕ್ಷ್ಮೀನಾರಾಯಣ ಸಮ್ಮುಖದಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.
ಇದೇ ವೇಳೆ ಸಂಘದ ಅಧ್ಯಕ್ಷರಾಗಿ ಮಂಜುನಾಥ ಸಿ., ಉಪಾಧ್ಯಕ್ಷರಾಗಿ ನರಸಿಂಹಯ್ಯ ಹಾಗೂ ಸದಸ್ಯರಾಗಿ ಶಿವಕುಮಾರ್, ದಯಾನಂದ ಎಸ್., ಸಿದ್ದರಾಜು, ನಾರಾಯಣರೆಡ್ಡಿ, ರಾಜಪ್ಪ ಎಂ., ದೊಡ್ಡ ರತ್ನಮ್ಮ, ಶಾಂತಮ್ಮ ಆಯ್ಕೆ ಮಾಡಲಾಗಿದೆ.