ಬೆಂಗಳೂರು: ನಟ ದರ್ಶನ್ ಅವರಿಗೆ ಮಧ್ಯಂತ ಜಾಮೀನು ಸಿಕ್ಕ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ.
ಇನ್ನೂ ಕೆಲ ಅಭಿಮಾನಿಗಳು ಬಳ್ಳಾರಿ ಜೈಲಿಗೆ ಆಗಮಿಸಿ ದರ್ಶನ್‌ಗೆ ಜೈಕಾರ ಹಾಕುತ್ತಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಅಲ್ಲಿ ಸೇರುವ ಆತಂಕ ಪೊಲೀಸರಿಗೆ ತಲೆ ಬಿಸಿ ತರಿಸಿದೆ.
ದರ್ಶನ್‌ಗೆ ಬೇಲ್ ಸಿಕ್ಕ ಸುದ್ದಿ ಕೇಳಿ ಫ್ಯಾನ್ಸ್ ಕೂಡ ಖುಷ್ ಆಗಿದ್ದಾರೆ. ಸರಿಯಾದ ಟೈಮ್ಗೆ ಚಿಕಿತ್ಸೆ ಸಿಗದಿದ್ರೆ ತೊಂದರೆ ಉಂಟಾಗುವ ಆತಂಕ ಇದೆ ಎಂದು ವೈದ್ಯರು ನೀಡಿದ್ದ ವರದಿಯನ್ನು ದರ್ಶನ್ ಪರ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಚಿಕಿತ್ಸೆಗಾಗಿ 6 ವಾರಗಳ ಜಾಮೀನು ಮಂಜೂರು ಮಾಡಿದ್ದಾರೆ.
ಜಾಮೀನು ಮಂಜೂರು ಮಾಡಿದೆ. ಈ ಸುದ್ದಿ ದರ್ಶನ್ ಅಭಿಮಾನಿಗಳಿಗೆ ದೀಪಾವಳಿ ಹಬ್ಬಕ್ಕೆ ಬಂಪರ್ ಉಡುಗೊರೆ ಸಿಕ್ಕಂತಾಗಿದೆ. ಸೋಷಿಯಲ್ ಮೀಡಿಯಾದಲ್ಲಂತೂ ಈ ದಿನ ಡಿ ಬಾಸ್ ಹೆಸರಲ್ಲಿ ಸಂದೇಶಗಳು ಭಾರೀ ವೈರಲ್ ಆಗುತ್ತಿವೆ.
ಜಾಮೀನು ಮಂಜೂರು ಆಗಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ಸಿನಿಮಾ ಒಂದರಲ್ಲಿನ ಲೋ ಮಗಾ ನಮ್ ಬಾಸ್ ರಿಲೀಸ್ ಕಣಲೇ ಎಂಬ ವಿಡಿಯೋವನ್ನು ಶೇರ್ ಮಾಡುವ ಮೂಲಕ ದರ್ಶನ್ ಅಭಿಮಾನಿಗಳು ಫುಲ್ ಜೋರಾಗೇ ದೀಪಾವಳಿ ಹಬ್ಬ ಶುರು ಹಚ್ಚಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ ಡಿ ಬಾಸ್ ರಿಲೀಸ್‌ಗೆ ಸಂಬಂಧಪಟ್ಟ ಕೆಲವೊಂದು ಮೀಮ್ಸ್‌ಗಳು ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹೌದು ಡಿ ಬಾಸ್ ಫ್ಯಾನ್ ಪೇಜ್‌ಗಳು ದರ್ಶನ್ ಅವರ ಸಿನಿಮಾದ ಕೆಲವೊಂದು ಫುಟೇಜ್‌ಗಳನ್ನು ಎಡಿಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ನಮ್ ಬಾಸ್ ಬರ್ತಿದ್ದಾರೆ ಎಂದು ಸಂಭ್ರಮಿಸುತ್ತಿದ್ದಾರೆ.
ಇದರ ನಡುವೆ ಎಲ್ಲಾ ತೂಗುದೀಪ ಪರಿವಾರದ ಅಭಿಮಾನಿಗಳಿಗೆ ಈ ಮೂಲಕ ತಿಳಿಸುವುದು ಏನೆಂದರೆ ನಮ್ಮ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಿಗೆ ಜಾಮೀನು ದೊರಕಿದ್ದು ಈ ಸಂತೋಷದ ಸಂಭ್ರಮದಲ್ಲಿ ಅಭಿಮಾನಿಗಳು ಯಾವುದೇ ಕಾರಣಕ್ಕೂ ಮಾಧ್ಯಮದವರು ರಾಜಕಾರಣಿಗಳು, ಬೇರೆ ನಟರು ಹಾಗೂ ಕಾನೂನಿನ ಬಗ್ಗೆ ಯಾರೂ ಸಹ ನಿಂದಿಸಬೇಡಿ ಎಂಬ ಸಂದೇಶ ವೈರಲ್ ಆಗಿದೆ.