ರಾಮನಗರ: ಚನ್ನಪಟ್ಟಣ ಕ್ಷೇತ್ರದ ಮಾರ್ಚನಹಳ್ಳಿಯಲ್ಲಿ NDA ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಎತ್ತಿನ ಬಂಡಿ ಮೂಲಕ ಗ್ರಾಮಕ್ಕೆ ತೆರಳಿ ಮತಯಾಚನೆ ಮಾಡಿದರು.
ರಾತ್ರಿ 9 ಗಂಟೆಯಾದ್ರೂ ಸ್ಥಳೀಯ ರೈತರು, ಯುವಕರ ಒತ್ತಾಸೆಯಂತೆ ಎತ್ತಿನಗಾಡಿ ಮೂಲಕ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಚುನಾವಣಾ ಪ್ರಚಾರ ಪ್ರಚಾರ ಮಾಡಿದರು.
ರಾತ್ರಿ ಸಮಯದಲ್ಲೂ ನಿಖಿಲ್ ಅವರನ್ನ ಆತ್ಮೀಯವಾಗಿ ಸ್ವಾಗತಿಸದ ಗ್ರಾಮಸ್ಥರು ಭಾಷಣ ಆಲಿಸಿದರು.
ಇದನ್ನೂ ಓದಿ; Doddaballapura: ಹಿಟ್ ಆಂಡ್ ರನ್‌ಗೆ ಬೈಕ್ ಸವಾರ ಬಲಿ..!
ಒಬ್ಬ ಯುವಕನಿಗೆ ಅವಕಾಶ ಮಾಡಿ ಕೊಡಿ:
ಚನ್ನಪಟ್ಟಣ ಕ್ಷೇತ್ರದ NDA ಅಭ್ಯರ್ಥಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಕ್ಷೇತ್ರದ ದೂಡ್ಡಮಳೂರು, ಕೋಟೆ ಮಾರನಹಳ್ಳಿ, ಬೈರಾಪಟ್ಟಣ, ದೇವರಹಳ್ಳಿ ಯಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.
ಚನ್ನಪಟ್ಟಣ ತಾಲ್ಲೂಕಿನ ದೊಡ್ಡಮಳೂರು ಗ್ರಾಮದಿಂದ ಆರಂಭವಾದ ಪ್ರಚಾರ ಸಭೆ ನಿಖಿಲ್ ಅವರಿಗೆ ಅದ್ದೂರಿ ಸ್ವಾಗತ ಕೋರಿದರು.
ಪ್ರತಿ ಗ್ರಾಮದಲ್ಲೂ ಪಟಾಕಿ ಸಿಡಿಸಿ, ಬೃಹತ್ ಹೂವಿನ ಹಾರ ಹಾಕಿ ಗ್ರಾಮಸ್ಥರು ಸ್ವಾಗತಕೋರಿದರು ದೊಡ್ಡಮಳೂರು ಗ್ರಾಮದ ಶ್ರೀ ಅಪ್ರಮೇಯ ಸ್ವಾಮಿಯ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಗ್ರಾಮದಲ್ಲಿ ಮತಾಯಾಚನೆ ನಡೆಸಿದರು,
ನಂತರ ಕೋಟೆ ಮಾರನಹಳ್ಳಿ ಶ್ರೀ ಆಂಜನೇಯ ಸ್ವಾಮಿಯ ದರ್ಶನ ಪಡೆದು ಕೋಟೆ ಮಾರನಹಳ್ಳಿಯ್ಲಲಿ ಪ್ರಚಾರ ಸಭೆಯಲ್ಲಿ ಭಾಗಿಯಾದರು. ಒಬ್ಬ ಯುವಕನ್ನು ಗೆಲ್ಲಿಸಿ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ನಂತರ ಬೈರಾಪಟ್ಟಣ ಮಾರಮ್ಮ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು, ನಂತರ ಮಹಿಳೆಯರು ಹಿರಿಯರ ಬಳಿ ತೆರಳಿ ಕೈ ಮುಗಿದು ಮತಯಾಚಿಸಿದರು.
ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಮೂರನೇ ದಿನ ಪ್ರಚಾರ ಆರಂಭಿಸಿದ್ದೇವೆ.
ಈ ಚುನಾವಣೆ ನನ್ನ ಪಾಲಿಗೆ ಅನಿರೀಕ್ಷಿತವಾದ ಚುನಾವಣೆ.ಈ ಚುನಾವಣೆ ಬಯಸದೇ ಬಂದ ಚುನಾವಣೆ. ಕುಮಾರಸ್ವಾಮಿ ಎರಡು ಬಾರಿ ಈ ಕ್ಷೇತ್ರ ಜನರು ಶಾಸಕರಾಗಿ ಆಯ್ಕೆಮಾಡಿದ್ದಾರೆ. ಬಳಿಕ ಕಳೆದ ಲೋಕಸಭಾ ಚುನಾವಣೆ ವೇಳೆ ಒತ್ತಡಕ್ಕೆ ಮಣಿದು ಮಂಡ್ಯದಲ್ಲಿ ಸ್ಪರ್ಧೆ ಮಾಡಿದ್ರು.ಬಳಿಕ ಮಂಡ್ಯದಿಂದ ಗೆದ್ದು ಕೇಂದ್ರ ಸಚಿವರಾಗಿದ್ದಾರೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ.ಇದನ್ನ ಜನ ಚರ್ಚೆ ಮಾಡ್ತಿದ್ದಾರೆ. ಎಲ್ಲಾ ಮಹಿಳೆಯರಲ್ಲಿ ಮನವಿ ಮಾಡ್ತೇನೆ. ಅತೀ ಚಿಕ್ಕ ವಯಸ್ಸಿನಲ್ಲೇ ಎರಡು ಚುನಾವಣೆ ಎದುರಿಸಿದ್ದೇನೆ. ಜನರ ಅಭಿಪ್ರಾಯವನ್ನ ಗೌರವಿಸುತ್ತೇನೆ.ಮಂಡ್ಯದ ಜನ 5 ವರೆ ಲಕ್ಷ ಮತಗಳನ್ನ ನೀಡಿದ್ದರು.
ಬಳಿಕ ರಾಮನಗರದಲ್ಲಿ ಕಾರ್ಯಕರ್ತರ ಒತ್ತಾಯದ ಮೇಲೆ ಸ್ಪರ್ಧೆ ಮಾಡಿದೆ ಅಲ್ಲೂ 76 ಸಾವಿರ ಮತಗಳನ್ನ ನೀಡಿದ್ರು. ಕೂಪನ್ ಕಾರ್ಡ್ ಕೊಟ್ಟು ಮೋಸ ಮಾಡಿ ಕುತಂತ್ರದಿಂದ ಅಲ್ಲಿ ಕಾಂಗ್ರೆಸ್ ಗೆದ್ದಿತು.ಕುತಂತ್ರದ ರಾಜಕಾರಣವನ್ನ ಮಾಡಿದ್ರು.ಹಾಗಾಗಿ ನಾವು ಮತ್ತು ಬಿಜೆಪಿ ಇಂದು ಒಂದಾಗಿ ಕೆಲಸ ಮಾಡ್ತಿದ್ದೇವೆ. ಮಾಜಿ ಸಿಎಂ ಬಿಎಸ್ವೈ ಅವರು NDA ಅಭ್ಯರ್ಥಿ
ನನ್ನ ಹೆಸರು ಘೋಷಣೆ ಮಾಡಿದ್ದಾರೆ.
ನಿಮ್ಮ ಸೇವೆ ನನಗೆ ಒಂದು ಅವಕಾಶ ಮಾಡಿ ಕೊಡಿ ಎಂದು ಮನವಿ ಮಾಡಿದರು.
“ಕೈ” ಸರ್ಕಾರ ದಿವಾಳಿಯಾಗಿದೆ
ರಾಜ್ಯ ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆ. ಸರ್ಕಾರದಲ್ಲಿ ದುಡ್ಡಿಲ್ಲ, ಸಾಕಷ್ಟು ಭ್ರಷ್ಟಾಚಾರ ಹೆಚ್ಚಾಗ್ತಿದೆ. ವಾಲ್ಮೀಕಿ ಹಗರಣ, ಮೂಡಾ ಹಗರಣ ರಾಜ್ಯದಲ್ಲಿ ಚರ್ಚೆ ಆಗ್ತಿದೆ.ವಾಲ್ಮೀಕಿ ನಿಗಮದ ಹಣ ಬೇರೆ ರಾಜ್ಯದ ಚುನಾವಣೆಗೆ ಬಳಕೆ ಆಗಿದೆ.ಇಂತಹ ಸರ್ಕಾರವನ್ನ ನಾವು ಕಿತ್ತೊಗೆಯಬೇಕು ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದರು
ಎರಡು ಬಾರಿ ಪೆಟ್ಟು ತಿಂದಿದ್ದೇನೆ
ಈ ಕ್ಷೇತ್ರದಲ್ಲಿ ದೇವೇಗೌಡರು ಮತ್ತು ಕುಮಾರಸ್ವಾಮಿಗೆ ನೀವು ಶಕ್ತಿ ತುಂಬಿದ್ದೀರಿ.ಎಲ್ಲರಿಗೂ ಕೈ ಮುಗಿದು ಕೇಳಿಕೊಳ್ತೇನೆ. ಇದು ನಮ್ಮ NDA ಕುಟುಂಬಕ್ಕೆ ಅಗ್ನಿ ಪರೀಕ್ಷೆ. ಈ ಪರೀಕ್ಷೆಯಲ್ಲಿ ನಮಗೆ ಜಯ ನೀಡಿ. ಎರಡು ಬಾರಿ ಜೀವನದಲ್ಲಿ ಪೆಟ್ಟು ತಿಂದಿದ್ದೇನೆ. ನಿಮ್ಮನ್ನ ನಂಬಿಕೊಂಡು ಬಂದಿದ್ದೇನೆ.ನಿಮ್ಮ ಪರವಾಗಿ ಕೆಲಸ ಮಾಡುತ್ತೇನೆ, ದಯಮಾಡಿ ಗೆಲ್ಲಿಸಿಕೊಡಿ ಯುವಕನಿಗೆ ಎಂದು ಮನವಿ ಮಾಡಿದ್ರು.
ವಳೆಗೆರೆದೊಡ್ಡಿಯಲ್ಲಿ ಪ್ರಚಾರ ಮಾಡಿದ ನಿಖಿಲ್ ಕುಮಾರಸ್ವಾಮಿ ಗ್ರಾಮದ ರಾಮಮಂದಿರವನ್ನು ಅಭಿರುದ್ದಿ ಮಾಡುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು.