ದೆಹಲಿ: 2028ರ ಲೋಕಸಭೆ ಚುನಾವಣೆಗೂ ಮುನ್ನ ದೇಶದಲ್ಲಿ ಜನಗಣತಿ ಪೂರ್ಣಗೊಳಿಸಲು ಕೇಂದ್ರ ಸರಕಾರ ತಯಾರಿ ನಡೆಸುತ್ತಿದೆ ಎಂದು ವರದಿಯಾಗಿದೆ.
ಇದಕ್ಕೂ ಮುನ್ನ 2011ರಲ್ಲಿ ಜನಗಣತಿ ಯಾಗಿತ್ತು. 202100 ನಡೆಯಬೇಕಿದ್ದ ಜನಗಣತಿ ಕರೋನಾ ಕಾರಣದಿಂದಾಗಿ ಮುಂದೆ ಹೋಗಿದೆ.
4 ವರ್ಷಗಳ ದೀರ್ಘ ವಿಳಂಬ ನಂತರ ಜನ ಗಣತಿ ನಡೆಯಲಿದೆ. 2025ರಲ್ಲಿ ಶುರುವಾಗಿ 2026ರಲ್ಲಿ ಪೂರ್ಣಗೊಳ್ಳಲಿದೆ ಎಂಬ ನಿರೀಕ್ಷೆಯಿದೆ.
ಜನಗಣತಿ ನಂತರ ಜನಸಂಖ್ಯೆ ಆಧಾರ ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆ ಆಗಲಿದೆ. 2028ಕ್ಕೆ ಲೋಕಸಭಾ ಚುನಾವಣೆ ನಡೆಯುವ ವೇಳೆಗೆ ಪೂರ್ಣ ಪ್ರಮಾಣದ ಜನಗಣತಿ ವರದಿ ಸರಕಾರದ ಕೈಸೇರಲಿದೆ ಎನ್ನಲಾಗಿದೆ.
ಮುಂದಿನ ವರ್ಷ ನಡೆಯಲಿರುವ ಜನಗಣತಿ ಎಲ್ಲ ಧರ್ಮಗಳು, ಸಾಮಾನ್ಯ ಮತ್ತು ಎಸ್‌ಸಿ-ಎಸ್‌ಟಿ ವರ್ಗಗಳಲ್ಲಿನ ಒಳಪಂಗಡಗಳ ದತ್ತಾಂಶವನ್ನೂ ಒಳಗೊಳ್ಳಲಿದೆ ಎನ್ನಲಾಗಿದೆ.
ಜನಗಣತಿ ಒಂದನ್ನೇ ನಡೆಸುವುದಕ್ಕೆ ಪ್ರತಿಪಕ್ಷಗಳು ವಿರೋಧಿಸುತ್ತಿವೆ. ಜಾತಿಗಣತಿಯನ್ನೂ ನಡೆಸಬೇಕು ಎಂಬುದು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ಒತ್ತಾಯವಾಗಿದೆ.