ಬೆಂಗಳೂರು: ವಕ್ಸ್ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದ ಬೆನ್ನಲ್ಲೇ ಮತ್ತೆ ಪರಿಶೀಲನಾ ತಂಡ ವಿಜಯೇಂದ್ರ ಪುನರ್ ರಚನೆ ಮಾಡಿದ್ದಾರೆ.
ಭಾನುವಾರ ಬಿ.ವೈ ವಿಜಯೇಂದ್ರ ಅವರು ಬಿಜೆಪಿಯ ಪರಿಶೀಲನಾ ತಂಡ ರಚಿಸಿದ್ದರು. ಸಂಸದ ಗೋವಿಂದ ಕಾರಜೋಳ ನೇತೃತ್ವದಲ್ಲಿ ಶಾಸಕರಾದ ಹರೀಶ್ ಪೂಂಜ, ಮಹೇಶ್ ಟೆಂಗಿನಕಾಯಿ, ಮಾಜಿ ಎಂಎಲ್‌ಸಿ ಅರುಣ್ ಶಹಾಪುರ್, ರೈತ ಮೋರ್ಚ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಕರುಡಪ್ಪ ಅವರನ್ನು ಒಳಗೊಂಡ ತಂಡವನ್ನು ರಚಿಸಲಾಗಿತ್ತು.
ಈ ಬಿಜೆಪಿ ತಂಡದಲ್ಲಿ ಸ್ಥಳೀಯ ಶಾಸಕ ಹಾಗೂ ಸಂಸದರನ್ನು ಸೇರಿಸಿಲ್ಲ, ಪೂಜ್ಯ ತಂದೆಯವರು ಹಾಗೂ ಅವರ ಚಿಕ್ಕ ಮಗ ತುಳಿಯುವುದನ್ನೆ ಕಾಯಕ ಮಾಡಿಕೊಂಡಿದ್ದಾರೆ.. ಈ ತಂಡವನ್ನು ಬಹಿಷ್ಕರಿಸುವುದಾಗಿ ಇಂದು ಯತ್ನಾಳ್ ಸಿಡಿದೆದ್ದಿದ್ದರು.
ಇದರಿಂದ ಹೆಚ್ಚೆತ್ತ ವಿಜಯೇಂದ್ರ, ಸಂಸದ ಜಿಗಜಿಣಗಿ ಶಾಸಕ ಯತ್ನಾಳ ಸೇರ್ಪಡೆಗೊಳಿಸಿ ತಂಡವನ್ನು ಪುನರ್ ರಚಿಸಿದ್ದಾರೆ. ನಾಳೆ ಕಾರಜೋಳ ನೇತೃತ್ವದ ಈ ತಂಡ ವಿಜಯಪುರ ಜಿಲ್ಲೆಗೆ ತೆರಳಲಿದೆ.
ಇಂದು ತಂಡಕ್ಕೆ ರಮೇಶ್ ಜಿಗಜಿಣಗಿ, ಶಾಸಕ ಯತ್ನಾಳ್ ಹಾಗೂ ಮಾಜಿ ಜಿಲ್ಲಾಧ್ಯಕ್ಷ ಎಂ.ಬಿ ಜಿರಲಿ ಸೇರ್ಪಡೆ ಮಾಡಿದ್ದಾರೆ.