Site icon Harithalekhani

Army dog: ಉಗ್ರರ ದಾಳಿಗೆ ಭಾರತೀಯ ಸೇನೆಯ ಶ್ವಾನ ಫ್ಯಾಂಟಮ್ ದುರ್ಮರಣ..!

ಅನ್ನೂರ್: ಜಮ್ಮು ಕಾಶ್ಮೀರದ ಅನ್ನೂರ್ ನಲ್ಲಿ ನಡೆದ ಭಯೋತ್ಪಾದಕರ ಗುಂಡಿನ ದಾಳಿಗೆ ನಾಲ್ಕು ವರ್ಷದ ಫ್ಯಾಂಟಮ್ ಎಂಬ ಆರ್ಮಿ ಶ್ವಾನ (Army dog) ಸಾವನ್ನಪ್ಪಿದೆ ಎಂದು ಸೇನೆಯ ಮೂಲಗಳು ತಿಳಿಸಿವೆ.

ಭಯೋತ್ಪಾದಕರ ದಾಳಿಗಿರುವ ಹಿನ್ನಲೆ ಭಾರತೀಯ ಸೇನೆ ಹಾಗೂ ಉಗ್ರರ ವಿರುದ್ಧ ತೀವ್ರ ಕಾರ್ಯಾಚರಣೆಗೆ ನಡೆಸುತ್ತಿದೆ. ಈ ಕಾರ್ಯಾಚರಣೆಯ ವೇಳೆ ಭಯೋತ್ಪಾದಕರು ಸೇನಾ ವಾಹನದ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

ಉಗ್ರರ ಈ ದಾಳಿಗೆ ವಾಹನದಲ್ಲಿದ್ದ ನಾಲ್ಕು ವರ್ಷದ ಸೇನಾ ನಾಯಿ ಫ್ಯಾಂಟಮ್ ಗೆ ಗಂಭೀರ ಗಾಯಗೊಂಡಿತ್ತು. ಕೂಡಲೇ ಅದನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ ಎಂದು ಸೇನಾ ಮೂಲಗಳು ತಿಳಿಸಿದೆ.

Exit mobile version