ವಿಜಯಪುರ; ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಜಮೀರ್ ಅಹಮದ್ ಖಾನ್ಗೆ ರೂ. 1,000 ಕೋಟಿ ನೀಡಿದ್ದರು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಯತ್ನಾಳ್, ಪೂಜ್ಯ ತಂದೆಯವರು ಜಮೀರ್ ಅಹಮದ್ ಖಾನ್ಗೆ ಒಂದು ಸಾವಿರ ಕೋಟಿ ಅನುದಾನ ನೀಡಿದ್ದರು. ಪೂಜ್ಯ ತಂದೆಯವರ ಕಿರಿಯ ಮಗ ಜಮೀರ್ ಅಹಮದ್ ಖಾನ್ಗೆ ಒಂದು ಸಾವಿರ ಕೋಟಿ ಕೊಡಬೇಕಾದ್ರೆ ಏನಾದ್ರೂ ತಗೊಂಡ್ ಇರಬೇಕಲ್ವಾ ಎಂದು ಪ್ರಶ್ನಿಸಿದರು.
ವಿಜಯೇಂದ್ರ ಇಂತಹ ಕೆಲಸಗಳನ್ನು ಬಿಡಬೇಕಿದೆ. ಇಲ್ಲಿ ನಾ ಎಂಎಲ್ಎ ಇದ್ದೀನಿ, ನಮ್ಮ ಲೋಕಸಭೆ ಸದಸ್ಯರು ಇದ್ದಾರೆ ನಮ್ಮಿಬ್ಬರನ್ನು ಬಿಟ್ಟು ವಕ್ಫ್ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ರೈತರ ಸಮಸ್ಯೆಗಳನ್ನು ಆಲಿಸಲು ವಿಜಯೇಂದ್ರ ರಚಿಸಿರುವ ಸಮಿತಿ ರಚಿಸಿದ್ದಾರೆ.
ರೈತರಿಗಾಗಿ ಅಸಲು ಹೋರಾಟ ಮಾಡುತ್ತಿರುವ ತಮ್ಮನ್ನು ತುಳಿಯುವ ಪ್ರಯತ್ನವನ್ನು ವಿಜಯೇಂದ್ರ ಮಾಡುತ್ತಿದ್ದಾರೆ. ವಿಜಯೇಂದ್ರ ಕಾರ್ಯಕ್ರಮವೇ ತುಳಿಯುವ ಕಾರ್ಯಕ್ರಮ.
ಪೂಜ್ಯ ತಂದೆಯವರು ಅದೇ ಮಾಡ್ತಾ ಇದ್ದರು, ಈಗ ಅವರ ಮಗ ಅದೇ ಕೆಲಸ ಮಾಡ್ತಾ ಇದ್ದಾರೆ ಎಂದು ಯಡಿಯೂರಪ್ಪ ಹಾಗೂ ವಿಜಯೇಂದ್ರ ಬಗ್ಗೆ ಹೇಳಿದರು.