ಚಿಕ್ಕಬಳ್ಳಾಪುರ: ಕೃಷಿ ಹೊಂಡದಲ್ಲಿ ವಿದ್ಯಾರ್ಥಿಯೊಬ್ಬನ ಶವ ಪತ್ತೆಯಾದ ಘಟನೆ (Student drown in Krishi Honda) ತಾಲೂಕಿನ ಕೊಳವನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತ ಯವಕನನ್ನು ದೊಡ್ಡಬಳ್ಳಾಪುರ ಮೂಲದ 18 ವರ್ಷದ ಸಾಯಿ ಎಂದು ಗುರ್ತಿಸಲಾಗಿದೆ. ಈತ ಹೊಂಡದಲ್ಲಿ ಈಜಲು ಹೋಗಿ ನೀರುಪಾಲಾಗಿರಬೇಕೆ ಎಂದು ಶಂಕಿಸಲಾಗಿದೆ.
ಗ್ರಾಮದ ರೈತ ವಾಸುದೇವ್ ಎಂಬುವರ ಹೊಂಡದಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಬಂದ ಪೋಲೀಸರು ಶವವನ್ನು ಹೊರತೆಗೆದಾಗ ಅದೇ ಗ್ರಾಮದ ಚೇತನ್ ಎಂಬ ಯುವಕ ಮೃತ ಯುವಕನ್ನು ಗುರ್ತಿಸಿದ್ದಾನೆ.
ತನ್ನ ಸಹಪಾಠಿಯಾದ ದೊಡ್ಡಬಳ್ಳಾಪುರ ತಾಲೂಕಿನ ಈತ ಅನಾಥನಾಗಿದ್ದು ಹಾಸ್ಟೆಲ್ ನಲ್ಲಿದ್ದು ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಒಂದು ವಾರದಿಂದ ನಮ್ಮ ಮನೆಯಲ್ಲಿ ಇದ್ದನು ಎಂದು ಮಾಹಿತಿ ನೀಡಿದ್ದಾನೆ.
ನಂದಿಗಿರಿಧಾಮ ಪೋಲಿಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.