Site icon ಹರಿತಲೇಖನಿ

ಹರಿತಲೇಖನಿ ದಿನಕ್ಕೊಂದು ಕಥೆ: ಎಚ್ಚರ.. ಬೆಳಿಗ್ಗೆ 8 ಗಂಟೆಯ ಮೇಲೆ ಸ್ನಾನ ಮಾಡಿದರೆ ಏನಾಗುತ್ತೆ ಗೊತ್ತಾ..? ತಪ್ಪದೆ ಓದಿ

Channel Gowda
Hukukudi trust

ಶಾಸ್ತ್ರಗಳು ನಿಜವಾಗಿಯೂ ಭಾರತೀಯರ ಆಸ್ತಿ ಎಂದರೆ ತಪ್ಪಾಗಲಾರದು ಕಾರಣ ಇದರಲ್ಲಿ ನಮ್ಮ ಜೀವನ ಅದ್ಭುತವಾಗಿ ರೂಪಿಸಿ ಕೊಳ್ಳಲು ಬೇಕಾದ ಸಲಹೆಗಳು ಸಿಗುತ್ತದೆ, ಅದರಂತೆ ಪಾಲಿಸಿದರೆ ಯಶಸ್ಸು ಸಿಗುತ್ತದೆ ಎಂದು ನಂಬಿ ಬಾಳುತ್ತಿರುವ ಸಂಖ್ಯೆ ಅದೆಷ್ಟೋ ಹಾಗು ಯಶಸ್ಸು ಕಂಡವರು ಸಹ‌.

Aravind, BLN Swamy, Lingapura

ಅದೇ ರೀತಿಯಲ್ಲಿ ನಮ್ಮ ಧರ್ಮದಲ್ಲಿ ಪ್ರತಿ ಕೆಲಸಕ್ಕೂ ಅದರದೇ ಆದ ಸಮಯವನ್ನ ನಿಗದಿಪಡಿಸಲಾಗಿದೆ ಹಾಗು ಅದನ್ನು ಅರಿತು ಬಹಳಷ್ಟು ಪಾಲಿಸುತ್ತಿದ್ದೀವಿ, ಅದರನಂತೆಯೇ ಮುಂಜಾನೆಯ ಸ್ನಾನಕ್ಕೂ ಸಹ ಅದರದೇ ಆದ ಸಮಯ ಇದೆ ಅದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿನ ವೈರಲ್ ವರದಿ ಇಲ್ಲಿದೆ.

ಬೇಗ ಏಳು ಬೇಗ ಮಲಗು ಪದ್ಧತಿ ಈಗಿಲ್ಲ ಎನ್ನುವುದು ಅಕ್ಷರ ಸಹ ನಿಜವಾದ ಸಂಗತಿ, ರಾತ್ರಿ 12 ರ ಮೇಲೆ ನಿದ್ರೆ ಮಾಡುವವರ ಸಂಖ್ಯೆಯೇ ಹೆಚ್ಚು ಇದರಿಂದಾಗಿ ಬೆಳಿಗ್ಗೆ ಏಳುವುದು ಸಹ ತಡವಾಗುತ್ತದೆ.

Aravind, BLN Swamy, Lingapura

ಸೂರ್ಯೋದಯಕ್ಕಿಂತ ಮೊದಲ ಸ್ನಾನ ಮಾಡುವವರ ಸಂಖ್ಯೆ ಅತೀ ಕಡಿಮೆ, ಸೂರ್ಯ ನೆತ್ತಿ ಮೇಲೆ ಬಂದರೂ ಕೆಲವರಿಗೆ ಸ್ನಾನ ಆಗಿರುವುದಿಲ್ಲ, ನೀವು ಇಂತವರಲ್ಲಿ ಒಬ್ಬರಾಗಿದ್ದರೆ ಎಚ್ಚರ ನೀವು ಸ್ನಾನ ಮಾಡುವ ಸಮಯ ನಿಮ್ಮ ಸುಖ, ಸಂತೋಷ, ಆರ್ಥಿಕ ವ್ಯವಸ್ಥೆ ಹಾಗೂ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಆಗಾದರೆ ಯಾವ ಸಮಯದಲ್ಲಿ ಸ್ನಾನ ಮಾಡಿದರೆ ಒಳ್ಳೆಯದು ಎಂಬ ನಿಮ್ಮ ಪ್ರಶ್ನೆಗೆ ಖಂಡಿತವಾಗಿಯೂ ಉತ್ತರ ಇಲ್ಲಿದೆ.

ಧರ್ಮಶಾಸ್ತ್ರದಲ್ಲಿ ನಾಲ್ಕು ರೀತಿಯ ಸ್ನಾನವನ್ನು ಹೇಳಲಾಗಿದೆ.

ಮುನಿ ಸ್ನಾನ: ಬೆಳಗಿನ ಜಾವ 4 ಗಂಟೆಯಿಂದ ಐದು ಗಂಟೆಯೊಳಗೆ ಮಾಡುವ ಸ್ನಾನವನ್ನು ಮುನಿ ಸ್ನಾನ ಎಂದು ಕರೆಯಲಾಗುತ್ತದೆ, ಇದು ಸ್ನಾನ ಮಾಡಲು ಅತ್ಯುತ್ತಮವಾದ ಸಮಯ, ಮುನಿ ಸ್ನಾನ ಮಾಡುವುದರಿಂದ ಮನೆಯಲ್ಲಿ ಸುಖ ಶಾಂತಿ, ಸಮೃದ್ಧಿ ನೆಲೆಸುತ್ತದೆಂದು ನಂಬಲಾಗಿದೆ.

ದೇವಿ ಸ್ನಾನ: ಬೆಳಿಗ್ಗೆ ಐದು ಗಂಟೆಯಿಂದ ಆರು ಗಂಟೆಯೊಳಗೆ ಸ್ನಾನ ಮಾಡಿದರೆ ಮಾಡಿದರೆ ಆಯಸ್ಸು, ಕೀರ್ತಿ, ಧನ, ಸಂತೋಷ ಲಭಿಸುತ್ತದೆಯಂತೆ, ಇದನ್ನು ದೇವಿ ಸ್ನಾನ ಎಂದು ಕರೆಯಲಾಗುತ್ತದೆ, ಶಾಸ್ತ್ರಗಳ ಪ್ರಕಾರ ಈ ಸ್ನಾನ ಕೂಡ ಉತ್ತಮವಾದದ್ದು.

ಮನುಷ್ಯ ಸ್ನಾನ: ಮನುಷ್ಯ ಸ್ನಾನ ಮೂರನೇ ಸ್ನಾನವನ್ನು ಮನುಷ್ಯ ಸ್ನಾನ ಎಂದು ಕರೆಯಲಾಗುತ್ತದೆ, ಬೆಳಿಗ್ಗೆ 6 ಗಂಟೆಯಿಂದ 8 ಗಂಟೆಯ ಒಳಗೆ ಮಾಡುವ ಸ್ನಾನ ಇದಾಗಿದೆ, ಈ ಸಮಯದಲ್ಲಿ ಸ್ನಾನ ಮಾಡಿದರೆ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಎಂದು ನಂಬಲಾಗಿದೆ.

ರಾಕ್ಷಸಿ ಸ್ನಾನ: ಕೊನೆಯ ಸ್ನಾನ ರಾಕ್ಷಸಿ ಸ್ನಾನ ಇದೀಗ ಸಾಮಾನ್ಯವಾಗಿದೆ, 8 ಗಂಟೆ ನಂತರ ಮಾಡುವ ಸ್ನಾನ ಈ ಶ್ರೇಣಿಯಲ್ಲಿ ಬರುತ್ತದೆ, ಇದನ್ನು ಧರ್ಮ ನಿಷೇಧವೆಂದು ಪರಿಗಣಿಸಲಾಗಿದೆ, ಈ ಸ್ನಾನ ಮಾಡುವುದರಿಂದ ಮನೆಯಲ್ಲಿ ಬಡತನ, ಕಲಹ, ಅಶಾಂತಿ, ಅನಾರೋಗ್ಯ ಕಾಡುತ್ತದೆ.

ಇವುಗಳನ್ನೇ ನಮ್ಮ ಹಿರಿಯಲು ಅಕ್ಷರ ಸಹ ಪಾಲಿಸುತ್ತಿದ್ದರು ಹಾಗು ಜೀವನದಲ್ಲಿ ಯಶಸ್ಸನ್ನು ಕಾಣುತ್ತಿದ್ದರು, ಆದರೆ ಈಗಿನ ಅಪ್ಡೇಟೆಡ್ ಮಂದಿ ಇವುಗಳನ್ನು ಮರೆತು ಆಂಗ್ಲರ ಜೀವನ ಶೈಲಿಯನ್ನ ಅನುಸರಿಸುತ್ತ ತಮಗೆ ತಾವೇ ದಾರಿದ್ರ್ಯವನ್ನ ಕೈ ಬೀಸಿ ಕರೆಯುತ್ತಿದ್ದಾರೆ ಎನ್ನುವುದರ ಬಗ್ಗೆ ನಿಮ್ಮ ಅನಿಸಿಕೆಗಳನ್ನ ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

ಕೃಪೆ: ಅಂತರ್ಜಾಲ (ಕ್ರೆಡಿಟ್- Getty Image)

Exit mobile version