ದೊಡ್ಡಬಳ್ಳಾಪುರ: ತಾಲ್ಲೂಕಿನ ಘಾಟಿ ಕ್ಷೇತ್ರದ ಸುಬ್ರಹ್ಮಣ್ಯಸ್ವಾಮಿ ದೇವಾಲಯಕ್ಕೆ ಸೇರಿದ ಎಂಟು ಅಂಗಡಿಗಳ ಗುತ್ತಿಗೆಯ ಅವಧಿಯು ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಬಾಡಿಗೆದಾರರ ಅಂಗಡಿಗಳಿಗೆ ಬೀಗ ಹಾಕಿ ತೆರವು ಮಾಡಲಾಗಿದೆ.
ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಆದೇಶದ ಮೇರೆಗೆ ಶುಕ್ರವಾರ ಮಧ್ಯಾಹ್ನ ದೇವಾಲಯದ ಎಡ ಮತ್ತು ಬಲ ಭಾಗದ ಎಂಟು ಅಂಗಡಿಗಳನ್ನು ತೆರವುಗೊಳಿಸಿ ದೇವಾಲಯದ ವಶಕ್ಕೆ ಪಡೆದು ಬೀಗ ಹಾಕಿ ಸೀಲ್ ಮಾಡಲಾಗಿದೆ.
ಇದನ್ನೂ ಓದಿ: ಧರ್ಮವೇ ಸತ್ಯವಾಗಿದ್ದೆಂಬ ಸತ್ಯಾಂಶ ಹೊರ ಬರಲೇಬೇಕು; ಜಗದ್ಗುರು ವಿಧುಶೇಖರ ಭಾರತೀ ಸ್ವಾಮೀಜಿ ಆಶೀರ್ವಚನ
ಅನಧಿಕೃತ ಬಾಡಿಗೆದಾರರ ಮೇಲೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗಿದೆ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎಂ.ನಾರಾಯಣಸ್ವಾಮಿ ತಿಳಿಸಿದ್ದಾರೆ.
ಮುಜರಾಯಿ ತಹಶೀಲ್ದಾರ್ ಜಿ.ಜೆ. ಹೇಮಾವತಿ, ಘಾಟಿ ಗ್ರಾಮದ ಪೋಲಿಸ್ ಹೊರ ಠಾಣೆಯ ಪೋಲಿಸರು ಹಾಗೂ ದೇವಾಲಯದ ಸಿಬ್ಬಂದಿ ಇದ್ದರು.