ಹೈದರಾಬಾದ್: ಇತ್ತೀಚೆಗೆ ಬಿಡುಗಡೆಯಾದ ಲವ್ ರೆಡ್ಡಿ ಚಿತ್ರ ಪ್ರದರ್ಶನ ವೇಳೆ ಚಿತ್ರಮಂದಿರಕ್ಕೆ ಭೇಟಿ ನೀಡಿದ ತೆಲುಗು ನಟ ಎನ್ ಟಿ ರಾಮಸ್ವಾಮಿ ಅವರಿಗೆ ಮಹಿಳೆಯೊಬ್ಬರು ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಲವ್ ರೆಡ್ಡಿ ಚಿತ್ರತಂಡವು ಹೈದರಾಬಾದ್‌ನ ಥಿಯೇಟರ್‌ಗೆ ಭೇಟಿ ನೀಡಿದಾಗ ಈ ಘಟನೆ ಸಂಭವಿಸಿದೆ. ಸಿನಿಮಾದಲ್ಲಿ ರಾಮಸ್ವಾಮಿ ಪ್ರೇಮಿಗಳನ್ನು ದೂರ ಮಾಡುವ ದೃಶ್ಯದಲ್ಲಿ ನಟಿಸಿದ್ದು, ಇದರಿಂದ ಅಸಮಾಧಾನಗೊಂಡ ಮಹಿಳೆ ಈ ಕೃತ್ಯ ಎಸಗಿದ್ದಾಳೆ.
ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ವೀಡಿಯೋದಲ್ಲಿ ನಟನ ಬಳಿಗೆ ಬಂದು ಶರ್ಟ್ ಕಾಲರ್ ಹಿಡಿದು ನೋಡುಗರು ಆಕೆಯನ್ನು ತಡೆಯುವ ಮೊದಲು ಅನೇಕ ಬಾರಿ ಹೊಡೆಯಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದಾಗಿದೆ.
ಜೊತೆಗೆ ಸಿನಿಮಾದ ಜೋಡಿಯನ್ನು ಯಾಕೆ ಬೇರ್ಪಡಿಸಿದ್ದೀರಿ ಎಂಬ ಪ್ರಶ್ನೆಯನ್ನು ಕೂಡ ಮಹಿಳೆ ರಾಮಸ್ವಾಮಿಗೆ ಕೇಳಿದ್ದನ್ನು ಸಹ ವೀಡಿಯೋದಲ್ಲಿ ನಾವು ಕೇಳಬಹುದು.
ಆದರೆ ಇದು ಸಿನಿಮಾ ತಂಡ ಮಾಡಿರುವ ಪ್ರಚಾರದ ಗಿಮಿಕ್ ಎಂದು ಕೆಲವರು ಕಾಮೆಂಟ್ ಮಾಡಿದರೆ ಮತ್ತೆ ಕೆಲವರು ಇಲ್ಲ. ಇದು ನೈಜ ಘಟನೆ ಎಂದು ಚರ್ಚೆಗೆ ಕಾರಣವಾಗಿದೆ.