ಕೋಲಾರ: ಬಹಳ ಕನಸುಗಳನ್ನು ಹೊಂದಿದ್ದ ಸಿ.ಪಿ.ಯೋಗೇಶ್ವರ್ ಅವರು ಚುನಾವಣೆಗಾಗಿ ಕಾಂಗ್ರೆಸ್‌ಗೆ ಹೋಗಿದ್ದಾರೆ. ಅವರಿಗಿದ್ದ ಕನಸುಗಳು ನನಸಾಗಲು ಬಿಜೆಪಿಯಲ್ಲಿದಿದ್ದರೆ ಸಾಧ್ಯವಾಗುತ್ತಿತ್ತು ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದರು.
ಮುಳಬಾಗಿಲು ತಾಲೂಕಿನ ಆವರಣಿ ಗ್ರಾಮದಲ್ಲಿ ಬುಧ ವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿ.ಪಿ.ಯೋಗೇಶ್ವರ್ ಅವರು ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ. ದೆಹಲಿಯ ಹೈಕಮಾಂಡ್ ಜತೆಗೂ ಉತ್ತಮ ಸಂಬಂಧ ಹೊಂದಿದ್ದರು, ಅನೇಕ ಮುಖಂಡರ ನಡುವೆಯೂ ಸ್ನೇಹ ಸಂಬಂಧವಿತ್ತು, ನಾಮಪತ್ರ ಸಲ್ಲಿಸಲು ಇನ್ನು ಒಂದು ದಿನ ಬಾಕಿಯಿದ್ದು ಕಾದು ನೋಡಬೇಕಿತ್ತು ಎಂದರು.
ಯೋಗೇಶ್ವರ್ ಅವರು ಬಿಜೆಪಿಯಲ್ಲಿ ಇದ್ದಷ್ಟು ದಿನ ಗೌರಯುತವಾಗಿ ನಡೆದುಕೊಂಡಿದೆ. ಸಚಿವ, ವಿಧಾನಪರಿಷತ್ ಸದಸ್ಯ ಸ್ಥಾನ ನೀಡಿದೆ, ನಾಯಕತ್ವಕ್ಕೆ ಗೌರವಕೊಟ್ಟಿದೆ. ಅತುರದಿಂದ ತೆಗೆದುಕೊಂಡ ನಿರ್ಧಾರದಿಂದ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಇದರಿಂದಾಗಿ ಚುನಾವಣೆಯ ಮೇಲೆ ಯಾವುದೇ ರೀತಿ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಚುನಾವಣೆ ಮತ್ತು ರಾಜಕಾರಣ ಲಾಸ್ಟ್ ಮಿನಿಟ್‌ವರೆಗೂ ತೆಗೆದುಕೊಂಡು ಹೋಗ ಬೇಕು, ಚನ್ನಪಟ್ಟಣದಲ್ಲಿ ಯೋಗೇಶ್ವರ್ ಪ್ರಭಾವವಿರುವುದು ಎಷ್ಟು ಸತ್ಯವೋ, ಕುಮಾರಣ್ಣಗೆದ್ದಿರುವುದು ಅಷ್ಟೇ ಸತ್ಯ, ಅಲ್ಲಿ ಅವರ ಶಕ್ತಿಯೂ ಇದೆ. ಜತೆಗೆ ಬಿಜೆಪಿ ಶಕ್ತಿಯೂ ಇದೆ. ಒಳ್ಳೆ ಅಭ್ಯರ್ಥಿಯನ್ನು ಕುಮಾರಣ್ಣ ಆಯ್ಕೆ ಮಾಡುತ್ತಾರೆ. ಸಮ ಬಲದ ಪೈಪೋಟಿ ನೀಡುವುದರ ಜತೆಗೆ ಅಭ್ಯರ್ಥಿಯ ಗೆಲುವಿಗೆ ಎಲ್ಲಾ ರೀತಿಯ ಕ್ರಮವಹಿ ಸಲಾಗುವುದು ಎಂದರು.
ಕುಟುಂಬ ರಾಜಕಾರಣ ವಿಚಾರವಾಗಿ ಕೇವಲ ಡಾ.ಮಂಜುನಾಥ್, ದೇವೇಗೌಡರ ಅವರ ಬಗ್ಗೆ ಹೇಳುತ್ತೀರ, ಕಷ್ಟಪಟ್ಟು ಮೇಲೆ ಬಂದಿರುವ ಬಡ ರೈತ ಕುಟುಂಬ. ನೆಹರು, ಇಂದಿರಾ ಗಾಂಧಿ, ರಾಹುಲ್‌ಗಾಂದಿ, ಈಗ ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ ಬಗ್ಗೆಯಾಕೆ ಹೇಳುವುದಿಲ್ಲ.
ಎಲ್ಲಾ ಕುಟುಂಬದಲ್ಲೂ ರಾಜಕೀಯ ಬಂದಿಲ್ವ, ಈಗ ಸಿದ್ದರಾಮಣ್ಣ ಕುಟುಂಬದಲ್ಲಿ ಬಂದಿಲ್ವಾ, ಕಾಂಗ್ರೆಸ್ ಅಧಿಕಾರವೆಲ್ಲ ಸೋನಿಯಾಗಾಂಧಿ ಅವರ ಕೈಯಲ್ಲಿದೆ, ಖರ್ಗೆಯವರ ತೀರ್ಮಾನ ಏನು ಆಗುವುದಿಲ್ಲ ಎಂದರು.