daily story: ಒಬ್ಬ ಹುಡುಗ ಶಾಲೆ ಮುಗಿಸಿಕೊಂಡು ಮನೆಗೆ ಬರುವಾಗ ಐಸ್ ಕ್ರೀಮ್ ತಿನ್ನಲು ಒಂದು ದೊಡ್ಡ ಹೋಟೆಲ್‍ಗೆ ಹೋದ. ಹೋಟೆಲ್‍ನಲ್ಲಿ ಮಾಣಿ (ವೇಟರ್) “ಏನು ಬೇಕು?” ಎಂದು ಕೇಳಿದಾಗ, “ಕೋನ್ ಐಸ್ ಕ್ರೀಮ್‍ಗೆ ಏಷ್ಟು?” ಎಂದು ಕೇಳಿದ.
ಮಾಣಿ “15 ರೂಪಾಯಿ” ಎಂದ. ಹುಡುಗ ತನ್ನ ಕಿಸೆ ನೋಡಿ, ಪುನಃ “ಚಿಕ್ಕ ಐಸ್ ಕ್ರೀಮ್‍ಗೆ ಎಷ್ಟಾಗುತ್ತದೆ?” ಎಂದು ಕೇಳಿದ. ಅದು ಮಾಣಿಗೆ ಏಕೋ ಕಿರಿಕಿರಿಯಾಯಿತು. ಸ್ವಲ್ಪ ಕೋಪದಿಂದ ” 12 ರೂಪಾಯಿ” ಎಂದ. ಹುಡುಗ ಚಿಕ್ಕ ಐಸ್ ಕ್ರೀಮ್‍ಗೆ ಆದೇಶ ನೀಡಿ, ತಿಂದು, ದುಡ್ಡು ಕೊಟ್ಟು ಹೋದ.
ಹುಡುಗ ಹೋದ ನಂತರ ತಟ್ಟೆ ತೆಗೆಯಲು ಬಂದ ಮಾಣಿಗೆ ಆಘಾತವಾಯಿತು. ಅವನ ಕಣ್ಣುಗಳಿಂದ ನೀರು ಹನಿಯಿತು.
ಇದನ್ನೂ ಓದಿ: ಹರಿತಲೇಖನಿ ದಿನಕ್ಕೊಂದು ಕಥೆ; ನಿದ್ರೆ ಹೇಗೆ ಬರುತ್ತೆ ಗೋತ್ತಾ?
ಕಾರಣ, ಆ ಹುಡುಗ ಹೋಗುವಾಗ ಮಾಣಿಗೆ 3 ರೂಪಾಯಿ ಟಿಪ್ಸ್ ಇಟ್ಟು ಹೊಗಿದ್ದ.
ಕೃಪೆ: Kishor MN (ಸಾಮಾಜಿಕ ಜಾಲತಾಣ)