ಬೆಂಗಳೂರು: ರಿಜಿಸ್ಟ್ರೇಷನ್ ಕಾಯ್ದೆ 1908 ರ ನಿಯಮ 22(B) ತಿದ್ದುಪಡಿ ವಿರೋಧಿಸಿ ಉಪನೋಂದಣಾಧಿಕಾರಿಗಳು ನೋಂದಣಿ ಸ್ಥಗಿತಗೊಳಿಸಿರುವುದಾಗಿ ಸೋಷಿಯಲ್ ಮೀಡಿಯಾ ಮತ್ತು ಮಾಧ್ಯಮಗಳಲ್ಲಿ ವರದಿಯಾಗಿರುವುದಕ್ಕೆ ಸಂಬಂಧಿಸಿದಂತೆ ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಇಲಾಖೆ ಪತ್ರಿಕಾ ಪ್ರಕಟಣೆ (latest news) ಬಿಡುಗಡೆ ಮಾಡಿದೆ.
ಅ.21ರಂದು ರಿಜಿಸ್ಟ್ರೇಷನ್ ಕಾಯ್ದೆ 1908 ರ ನಿಯಮ 22(B) ತಿದ್ದುಪಡಿ ವಿರೋಧಿಸಿ ಐದಾರು ಉಪನೋಂದಣಾಧಿಕಾರಿಗಳು ನೋಂದಣಿಯನ್ನು ಕೆಲಕಾಲ ಸ್ಥಗಿತಗೊಳಿಸಿದ್ದು ಕಂಡುಬಂದಿರುತ್ತದೆ. ಆದರೆ ನಂತರ ಉಪನೋಂದಣಾಧಿಕಾರಿಗಳೊಂದಿಗೆ ಚರ್ಚಿಸಿ ನೋಂದಣಿ ಕಾರ್ಯ ಎಂದಿನಂತೆಯೇ ಮುಂದುವರೆಸಲು ಕ್ರಮವಹಿಸಲಾಗಿದೆ.
ಪ್ರಸ್ತುತ ಯಾವುದೇ ಸಮಸ್ಯೆ ಇರುವುದಿಲ್ಲ, ಯಾರೇ ನೋಂದಣಿ ಮಾಡಿಸಿಕೊಳ್ಳಬೇಕಾದವರು ನೋಂದಣಿ ಮಾಡಿಸಬಹುದಾಗಿರುತ್ತದೆ ಎಂದು ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರಾದ ದಯಾನಂದ ಕೆ.ಎ ಅವರು ಸ್ಪಷ್ಟಪಡಿಸಿದ್ದಾರೆ.