ದೊಡ್ಡಬಳ್ಳಾಪುರ: ತಾಲ್ಲೂಕಿನ ಪಂಚಗಿರಿ ಶ್ರೇಣಿಗಳಲ್ಲಿ ಒಂದಾದ ಚನ್ನರಾಯಸ್ವಾಮಿ ಬೆಟ್ಟದ ತಪ್ಪಲಿನ ಗೌಡನಕೆರೆ ಸೋಮವಾರ ರಾತ್ರಿ ಸುರಿದ ಮಳೆಗೆ ಕೋಡಿ ಬಿದ್ದಿದೆ. doddaballapura rain
ಈ ಕೆರೆಗೆ ಹೆಚ್ಚಿನ ನೀರು ಹರಿದು ಬರುವುದೇ ಬೆಟ್ಟದ ಮೇಲೆ ಹಾಗೂ ಬೆಟ್ಟದ ತಪ್ಪಲಿನಲ್ಲಿ ಬೀಳುವ ಮಳೆಯಿಂದ.
ಸತತ ಒಂದು ವಾರದಿಂದಲು ಬೀಳುತ್ತಿರುವ ಹಾಗೂ ಸೋಮವಾರ ರಾತ್ರಿ ಸುರಿದ ಬಾರೀ ಮಳೆಗೆ ಚನ್ನರಾಯಸ್ವಾಮಿ ಬೆಟ್ಟದ ಏಳೆಮ್ಮೆದೊಣೆಯ ಜಲಪಾತ ಹಾಲಿನಂತೆ ದುಮ್ಮಿಕ್ಕಿ ಹರಿಯುತ್ತಿದೆ.
ಸುಮಾರು 500 ಅಡಿಗಳಷ್ಟು ಎತ್ತರದಿಂದ ಬೃಹತ್ ಬಂಡೆಯ ಮೇಲಿಂದ ದುಮ್ಮಿಕ್ಕುವ ಜಲಪಾತವು ಜೋಗದಲ್ಲಿನ ಜಲಪಾತಗಳಂತೆ ಕಣ್ಮನಸೆಳೆಯುತ್ತಿವೆ.
ಈ ಜಲಪಾದದಿಂದ ಹರಿದು ಬರುವ ನೀರು ಚನ್ನಾಪುರ ಕೆರೆ ಸೇರುವ ಮೂಲಕ ಅರ್ಕಾವತಿ ನದಿ ಪಾತ್ರದ ಕೆರೆಗಳನ್ನು ತುಂಬಿಸುತ್ತ ಮುಂದೆ ಸಾಗುತ್ತದೆ.