ದೊಡ್ಡಬಳ್ಳಾಪುರ: ತಾಲ್ಲೂಕಿನ ಉಜ್ಜನಿ ಹೊಸಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿರುವ ಭಾರತಿ ತೀರ್ಥ ಮಹಾದ್ವಾರ, ಶ್ರೀಲಕ್ಷ್ಮೀನರಸಿಂಹಸ್ವಾಮಿ ಉತ್ಸವ ಮೂರ್ತಿ ಉದ್ಘಾಟನೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಅ.23 ರಿಂದ 25 ರವರೆಗೆ ಮೂರುದಿನಗಳ ಕಾಲ ನಡೆಯಲಿವೆ ಎಂದು ದೇವಾಲಯದ ಧರ್ಮದರ್ಶಿ ಹೆಚ್.ಎಸ್.ಅಶ್ವಥ್ ನಾರಾಯಣ ಕುಮಾರ್ ತಿಳಿಸಿದ್ದಾರೆ.
ಈ ಅದ್ದೂರಿ ಧಾರ್ಮಿಕ ಕಾರ್ಯಕ್ರಮದಲ್ಲಿ ಶೃಂಗೇರಿ ಶಾರದಾ ಪೀಠದ ವಿಧುಶೇಖರ ಭಾರತೀಸ್ವಾಮಿಜಿ ಅವರು ಭಾಗವಹಿಸಲಿದ್ದಾರೆ.
ಅ.24 ರಂದು ನಡೆಯಲಿರುವ ನೂತನ ರಾಜಗೋಪುರದ ಕುಂಭಾಭಿಷೇಕ ಸಮಾರಂಭದಲ್ಲಿ ಸಂಸತ್ ಸದಸ್ಯರಾದ ಜಗದೀಶಶೆಟ್ಟರ್, ಡಾ.ಕೆ.ಸುಧಾಕರ್, ಶೃಂಗೇರಿ ಶಾರದಾ ಪೀಠದ ಆಡಳಿತ ಅಧಿಕಾರಿ ಶ್ರೀಮುರಳಿ, ರಾಜ್ಯ ಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್, ನಿವೃತ್ತ ನ್ಯಾಯಮೂರ್ತಿ ಎನ್.ಕುಮಾರ್, ಶಾಸಕರಾದ ಶರತ್ ಬಚ್ಚೇಗೌಡ, ಧೀರಜ್ ಮುನಿರಾಜು ಸೇರಿದಂತರೆ ಇತರೆ ಗಣ್ಯರು ಭಾಗವಹಿಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ಸಿದ್ದತೆ ಕಾರ್ಯ ತೀವ್ರಗತಿಯಲ್ಲಿ ಸಾಗುತ್ತಿದೆ.