ಚನ್ನಪಟ್ಟಣ ಉಪಸಮರ: ನಾನು ಸ್ಪರ್ದಿಸುತ್ತೇನೆ ಅಂತ ಹೇಳಿಲ್ಲ – ನಿಖಿಲ್ ಕುಮಾರಸ್ವಾಮಿ

ಬೆಂಗಳೂರು: ಚನ್ನಪಟ್ಟಣ ಉಪಚುನಾವಣೆಗೆ ನಾನು ಸ್ಪರ್ಧಿಸುತ್ತೇನೆ ಎಂದು ಯಾವತ್ತೂ ವೈಯಕ್ತಿಕವಾಗಿ ಹೇಳಿಲ್ಲ ಎಂದು ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

ಪದ್ಮನಾಭನಗರದ ದೇವೇಗೌಡರ ನಿವಾಸ ಬಳಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ನಿಖಿಲ್ ಕುಮಾರಸ್ವಾಮಿ, ಚನ್ನಪಟ್ಟಣದಲ್ಲಿ ಸ್ಪರ್ಧಿಸುತ್ತೇನೆ ಎಂದು ಹೇಳಿಲ್ಲ. ಸಾಧಕ ಬಾಧಕ ನೋಡಿಕೊಂಡು ನಾವು ತೀರ್ಮಾನ ತೆಗೆದುಕೊಳ್ಳುತ್ತೇವೆ.

ಚನ್ನಪಟ್ಟಣ ಟಿಕೆಟ್ ವಿಚಾರದಲ್ಲಿ ಯಾವುದೇ ರೀತಿಯ ತೀರ್ಮಾನ ತೆಗೆದುಕೊಳ್ಳಲು ಹೆಚ್.ಡಿ.ಕುಮಾರಸ್ವಾಮಿ ನಾವು ಸ್ವಾತಂತ್ರವಾಗಿ ಇದ್ದಾಗಿಯೂ ಅಭ್ಯರ್ಥಿ ಘೋಷಣೆ ಮಾಡಿಲ್ಲ. ರಾಷ್ಟ್ರೀಯ ನಾಯಕರಿಗೆ ಗೌರವ ಕೊಡಲು ಅಭ್ಯರ್ಥಿಯನ್ನ ಘೋಷಣೆ ಮಾಡಿಲ್ಲ.

ಈ ಲೋಕಸಭೆಯಲ್ಲಿ ಮೈತ್ರಿಕೂಟದ ಭಾಗವಾಗಿ ಕೆಲಸ ಮಾಡಿದ್ದೇವೆ. ಹಾಗಾಗಿ ಎರಡೂ ಪಕ್ಷದ ಕಾರ್ಯಕರ್ತರ ನಡುವೆ ಹೊಂದಾಣಿಕೆ ಬೆಳೆದಿದೆ. ಒಬ್ಬ ವ್ಯಕ್ತಿಯ ನಡವಳಿಕೆಯಿಂದ ಯಾವುದೇ ತೀರ್ಮಾನ ಕೈಗೊಳ್ಳುವ ಉದ್ವೇಗಕ್ಕೆ ಒಳಗಾಗೋದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನು ಚನ್ನಪಟ್ಟಣಕ್ಕೆ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿ ಅನ್ನುವ ವಿಚಾರಕ್ಕೆ ಪ್ರತಿಕ್ರಿಯೆಸಿದ ಅವರು, ನಾನು ಎಂದು ಕೂಡ ಅಭ್ಯರ್ಥಿ ಆಗುತ್ತೇನೆ, ನಾನು ಆಕಾಂಕ್ಷಿ ಎಂದು ಇಲ್ಲಿಯವರೆಗೆ ವ್ಯಕ್ತಪಡಿಸಿಲ್ಲ. ನಾನು ಪಕ್ಷದ ಕಾರ್ಯಕರ್ತನಾಗಿ ನನ್ನ ಜವಾಬ್ದಾರಿಯನ್ನ ನಿರ್ವಹಿಸುತ್ತಿದ್ದೇನೆ ಎಂದರು.

ಕಳೆದ ಎರಡು ವಿಧಾನಸಭಾ ಚುನಾವಣೆಯಲ್ಲಿ ಕುಮಾರಣ್ಣ ಅವರು ಸ್ಪರ್ಧೆ ಮಾಡಿರುತ್ತಾರೆ. ಜನತಾದಳ ಪಕ್ಷದ ಪರವಾಗಿ ಚನ್ನಪಟ್ಟಣ ಮತದಾರರು ಆಶೀರ್ವಾದ ಮಾಡಿದ್ದಾರೆ. ಕುಮಾರಣ್ಣನ ಸ್ವಕ್ಷೇತ್ರ ಆಗಿರುವುದರಿಂದ ಮಾಧ್ಯಮಗಳಲ್ಲಿ ನಿರಂತರವಾಗಿ ನೋಡಿದ್ದೇವೆ.

ನಾನು ಸ್ಪರ್ದಿಸುತ್ತೇನೆ ಅಂತ ಹೇಳಿಲ್ಲ

ನಾನು ನಿಲ್ತೇನೆ ಅಂತ ಹೇಳಿಲ್ಲ. ಇದು ಕುಮಾರಣ್ಣ ಅವರ ಸ್ವಕ್ಷೇತ್ರ ದೆಹಲಿಯ ಬಿಜೆಪಿ ನಾಯಕರು ಕುಮಾರಸ್ವಾಮಿ ಅವರಿಗೆ ಯಾವುದೇ ರೀತಿಯ ತೀರ್ಮಾನ ತಗೊಳ್ಳಿ ಅಂತ ಹೇಳಿದ್ದಾರೆ. ಆದರೂ ಮೈತ್ರಿಗೆ ತೊಂದರೆ ಆಗಬಾರದು ಅಂತ ನಾವಿದೀವಿ ಎಂದರು

ನಮ್ಮ ತೀರ್ಮಾನ ಏನೇ ಇದ್ರೂ ಸಾಧಕ ಬಾಧಕ ನೋಡಿಕೊಂಡು ತೀರ್ಮಾನ ತಗೋತೀವಿ.ನಮಗೆ ಸ್ವಾತಂತ್ರ್ಯ ಇದ್ದಾಗಿಯೂ ನಾವು ಅಭ್ಯರ್ಥಿ ಘೋಷಣೆ ಮಾಡಿಲ್ಲ. ಇದಕ್ಕೆ ಕಾರಣ ರಾಷ್ಟ್ರೀಯ ನಾಯಕರಿಗೆ ಗೌರವ ಕೊಡಬೇಕು ಅಂತ.ಒಬ್ಬ ವ್ಯಕ್ತಿಯ ನಡವಳಿಕೆ ನೋಡಿ ನಾವು ಯಾವುದೇ ರೀತಿಯ ಆತುರದ ನಿರ್ಧಾರ ಮಾಡಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ದೇವೇಗೌಡರು, ಕುಮಾರಣ್ಣ ಜತೆ ಚರ್ಚಿಸಿ ಸೂಕ್ತ ತೀರ್ಮಾನ ಮಾಡ್ತೀವಿ.ನಾನು ಅಭ್ಯರ್ಥಿ ಅಂತ ಎಂದೂ ವೈಯಕ್ತಿಕವಾಗಿ ಹೇಳಿಲ್ಲ. ನನ್ನ ಜವಾಬ್ದಾರಿ ನಿಭಾಯಿಸ್ತಿದ್ದೇನೆ ಕ್ಷೇತ್ರದಲ್ಲಿ ಸಾಧಕ ಬಾಧಕ ನೋಡಿಕೊಂಡು ತೀರ್ಮಾನ ಮಾಡ್ತೀವಿ.ಎರಡು ಮೂರು ದಿನಗಳ ಹಿಂದೆ ಯೋಗೀಶ್ವರ್ ಜತೆ ನಮ್ಮ ಹಿರಿಯ ಮುಖಂಡರು ಚರ್ಚೆ ಮಾಡಿದ್ರು. ಜೆಡಿಎಸ್ ಚಿನ್ಹೆಯಡಿಯೂ ಸ್ಪರ್ಧೆಗೆ ಆಫರ್ ಕೊಟ್ರು. ಈ ಆಫರ್ ಗೆ ಅವರು ಕುಮಾರಸ್ವಾಮಿ ಅವರನ್ನೂ ಕೇಳಿರಲಿಲ್ಲ. ಇದನ್ನು ನಮ್ಮ ಮುಖಂಡರೇ ನನಗೆ ಹೇಳಿದ್ದರು ಎಂದು ತಿಳಿಸಿದರು.

ಮೈತ್ರಿಗೆ ಕಪ್ಪು ಚುಕ್ಕೆ ಬರಬಾರದು

ನಾವು ಯೋಗೀಶ್ವರ್ ವಿಚಾರದಲ್ಲಿ ದೊಡ್ಡ ಔದಾರ್ಯತೆ ತೋರಿದ್ದೇವೆ. ನಮ್ಮ ನಾಯಕರು ಯೋಗೀಶ್ವರ್ ಅವರಿಗೆ ಆಹ್ವಾನ ಕೊಟ್ಟಿದ್ದಾರೆ ಇನ್ನೇನು ಮಾಡಬೇಕು?ಯಾವುದೇ ತೀರ್ಮಾನ ಕೈಗೊಳ್ಳಲು ಬಿಜೆಪಿಯ ವರಿಷ್ಠರು ನಮಗೆ ಅಧಿಕಾರ ಕೊಟ್ಟಿದ್ದಾರೆ. ಆದರೂ ಮೈತ್ರಿಗೆ ಯಾವುದೇ ರೀತಿಯ ಅಗೌರವ ತೋರಬಾರದು ಅದಕ್ಕಾಗಿ ನಮ್ಮ ನಡೆ ಏನೇ ಇದ್ದರೂ ಪಕ್ಷದ ಚೌಕಟ್ಟಿನ ಒಳಗೆ ಆಗಬೇಕು ಎಂದು ತಿಳಿಸಿದರು.

ಸಿಪಿ ಯೋಗೇಶ್ವರ್ ಅವರ ಕೆಲಸ ಮಾಡಲಿ

ಸಿಪಿ ಯೋಗೇಶ್ವರ್ ಬಹಳ ಹಿರಿಯರು, ಅನುಭವಸ್ತರು ಇದ್ದಾರೆ ನಾನು ಈ MLA, ಎಂಪಿ ಆಗಬೇಕಿದ್ರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ನಡೆದ ಸಭೆಯಲ್ಲಿ ಏನು ನಡೆಯಿತು ಎಂದು ಸಾಕ್ಷಿ ಇದೆ.ಪಕ್ಷವನ್ನು ತಳ ಮಟ್ಟದಿಂದ ಕಟ್ಟಬೇಕು ಎಂದು ಕೆಲಸ ಮಾಡುತ್ತಿದ್ದೇನೆ.

ಸಿಪಿ ಯೋಗೇಶ್ವರ್ ಹೇಳಿಕೆಗೆ ಮಾತನಾಡಿದ ಅವರು,ಸುಮ್ನನೇ ಅನುಕಂಪ ಗಿಟ್ಟಿಸಿ ಕೊಳ್ಳಬೇಕೆಂದು ಕುಮಾರಸ್ವಾಮಿ ಅವರು ಅವರ ಮಗನನ್ನ ಬೆಳೆಸುವ ಪ್ರಯತ್ನ ಮಾಡುತ್ತಿದ್ದಾರೆ ಅನ್ನುವುದನ್ನ ಬಿಟ್ಟು ಅವರ ಕೆಲಸ ಮಾಡಲಿ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

ಸಿಪಿ ಯೋಗೇಶ್ವರ್ ಪಕ್ಷೇತರವಾಗಿ ಸ್ಪರ್ಧೆ ಮಾಡುತ್ತಾರೆ ವಿಚಾರಕ್ಕೆ ಮಾತನಾಡಿದ ಅವರು. ಅವರ ನಡೆ ಅವರಿಗೆ ಜೆಡಿಎಸ್ ಅಂದರೆ NDA ನಡೆ. ಜೆಡಿಎಸ್ ಒಂದೇ ತೀರ್ಮಾನ ಮಾಡುವುದಕ್ಕೆ ಆಗಲ್ಲ ಜೆಡಿಎಸ್ ಬಿಜೆಪಿ ನಾಯಕರು ಚರ್ಚಿಸಿ ಅಂತಿಮ ತೀರ್ಮಾನ ಮಾಡುತ್ತಾರೆ ಎಂದರು.

ರಾಜಕೀಯ

ಗ್ರೇಟರ್ ಬೆಂಗಳೂರು; ಟೌನ್ ಶಿಪ್ ನಿರ್ಮಾಣಕ್ಕೆ ಭೂಸ್ವಾಧೀನಕ್ಕೆ ಹೆಚ್.ಡಿ.ದೇವೇಗೌಡರ ತೀವ್ರ ವಿರೋಧ

ಗ್ರೇಟರ್ ಬೆಂಗಳೂರು; ಟೌನ್ ಶಿಪ್ ನಿರ್ಮಾಣಕ್ಕೆ ಭೂಸ್ವಾಧೀನಕ್ಕೆ ಹೆಚ್.ಡಿ.ದೇವೇಗೌಡರ ತೀವ್ರ ವಿರೋಧ

ಟೌನ್ ಶಿಪ್ ನಿರ್ಮಾಣಕ್ಕೆ ರೈತರ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವುದಕ್ಕೆ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡ (HD Deve Gowda) ಅವರು ತೀವ್ರ ವಿರೋಧ

[ccc_my_favorite_select_button post_id="105751"]
ಕಾಂಗ್ರೆಸ್ ಸರ್ಕಾರದ 2 ವರ್ಷಗಳ ಸಾಧನೆ: ಏ. 27 ಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಿಎಂ, ಡಿಸಿಎಂ ಆಗಮನ

ಕಾಂಗ್ರೆಸ್ ಸರ್ಕಾರದ 2 ವರ್ಷಗಳ ಸಾಧನೆ: ಏ. 27 ಕ್ಕೆ ಬೆಂಗಳೂರು ಗ್ರಾಮಾಂತರ

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ಕುಂದಾಣ ಹೋಬಳಿಯ ಭೈರದೇನಹಳ್ಳಿ ಕೈಗಾರಿಕಾಭಿವೃದ್ಧಿ ಪ್ರದೇಶದಲ್ಲಿ ಸರ್ಕಾರದ ಎರಡು ವರ್ಷದ ಸಾಧನೆ ಸಮಾವೇಶ

[ccc_my_favorite_select_button post_id="105775"]
ಇಸ್ರೋದ ಮಾಜಿ ಅಧ್ಯಕ್ಷ ಡಾ.ಕೆ.ಕಸ್ತೂರಿ ರಂಗನ್ ಇನ್ನಿಲ್ಲ..!

ಇಸ್ರೋದ ಮಾಜಿ ಅಧ್ಯಕ್ಷ ಡಾ.ಕೆ.ಕಸ್ತೂರಿ ರಂಗನ್ ಇನ್ನಿಲ್ಲ..!

ಇಸ್ರೋ ಮಾಜಿ ಅಧ್ಯಕ್ಷರಾಗಿದ್ದ ಡಾ.ಕೆ.ಕಸ್ತೂರಿ ರಂಗನ್ (Dr.K.Kasturirangan) ಅವರು ಶುಕ್ರವಾರ ನಿಧನರಾಗಿದ್ದಾರೆ.

[ccc_my_favorite_select_button post_id="105768"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

RCB ಗೆಲುವು: ನಮ್ ಹುಡುಗ್ರು ‘ಚಿನ್ನ’ ಸ್ವಾಮಿ ಎಂದ ಡಿಕೆ ಶಿವಕುಮಾರ್

RCB ಗೆಲುವು: ನಮ್ ಹುಡುಗ್ರು ‘ಚಿನ್ನ’ ಸ್ವಾಮಿ ಎಂದ ಡಿಕೆ ಶಿವಕುಮಾರ್

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) 2025ರ ಐಪಿಎಲ್ ಪಂದ್ಯದಲ್ಲಿ ಕೊನೆಗೂ ತವರು ನೆಲದಲ್ಲಿ ಉಸಿರು ಗಟ್ಟಿಸಿ, ಅಂತಿಮವಾಗಿ ಗೆದ್ದು ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದೆ.

[ccc_my_favorite_select_button post_id="105755"]
ಕ್ವಾರಿ ವಿರುದ್ಧ ಗ್ರಾಮಸ್ಥರ ಧರಣಿ ವೇಳೆ ಮಾಲೀಕನಿಂದ ಶೂಟೌಟ್

ಕ್ವಾರಿ ವಿರುದ್ಧ ಗ್ರಾಮಸ್ಥರ ಧರಣಿ ವೇಳೆ ಮಾಲೀಕನಿಂದ ಶೂಟೌಟ್

ಚಿಕ್ಕಬಳ್ಳಾಪುರ: ಕಲ್ಲು ಕ್ವಾರಿ ಮತ್ತು ಸರ್ಕಾರಿ ಜಾಗದಲ್ಲಿ ರಸ್ತೆ ನಿರ್ಮಾಣಕ್ಕೆ ಪ್ರತಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಕಲ್ಲು ತೂರಾಟ ನಡೆಸಿದ್ದರಿಂದ ಕುಪಿತನಾದ ಕಲ್ಲು ಕ್ವಾರಿ ಮಾಲೀಕ ಸಕಲೇಶಕುಮಾ‌ರ್ ಎಂಬುವರು ಗುಂಡು ಹಾರಿಸಿದ್ದು, ಚಿಕನ್ ರವಿ ಎಂಬುವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ,

[ccc_my_favorite_select_button post_id="105705"]
ದೇವನಹಳ್ಳಿ ಏರ್ಪೋರ್ಟ್ನಲ್ಲಿ ಸರಣಿ ಅಪಘಾತ.. ವಿಮಾನಕ್ಕೆ ಟಿಟಿ ಡಿಕ್ಕಿ…!

ದೇವನಹಳ್ಳಿ ಏರ್ಪೋರ್ಟ್ನಲ್ಲಿ ಸರಣಿ ಅಪಘಾತ.. ವಿಮಾನಕ್ಕೆ ಟಿಟಿ ಡಿಕ್ಕಿ…!

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Airport) ಸಂಭವಿಸಿದ ಸರಣಿ ಅಪಘಾತಗಳು ಆತಂಕಕ್ಕೆ ಕಾರಣವಾಗಿದೆ. harithalekhani

[ccc_my_favorite_select_button post_id="105576"]

ಆರೋಗ್ಯ

ಸಿನಿಮಾ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ನಿಗದಿತ ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರ ಕಛೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ:118 Affidavit

[ccc_my_favorite_select_button post_id="104955"]
error: Content is protected !!