ಬೆಂಗಳೂರು: ಖ್ಯಾತ ನಟ ಸುದೀಪ್ ಅವರ ತಾಯಿ, ಹಾಗೂ ನನ್ನ ಆತ್ಮೀಯ ಸ್ನೇಹಿತ ಸಂಜೀವ್ ಸರೋವರ ಅವರ ಪತ್ನಿ ಸರೋಜಕ್ಕ ನಿಧನ ಹೊಂದಿರುವುದು ನನಗೆ ಹಾಗೂ ನಮ್ಮ ಕುಟುಂಬಕ್ಕೆ ಅತ್ಯಂತ ದುಖ ತಂದಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಟ ಸುದೀಪ್ ತಾಯಿ ಸರೋಜಕ್ಕ ಅವರು ತೀರಿಕೊಂಡಿದ್ದಾರೆ, ತಾಯಿಯ ಮಮತೆಯ ಸ್ವರೂಪಿಣಿ ಅವರು, ಮನೆಗೆ ಬರುವರಿಗೆಲ್ಲ ಆದರತೆ ತೋರುತ್ತಿದ್ದರು. ಅವರು ಸಾಕ್ಷಾತ್ ಅನ್ನಪೂರ್ಣೆ ಹಲವು ವರ್ಷಗಳ ಕಾಲ ಅವರು ಮನೆಗೆ ಹೋದಾಗೆಲ್ಲ ಊಟ, ಉಪಚಾರ, ಪ್ರೀತಿಯಿಂದ ಮಾತನಾಡುತ್ತಿದ್ದರು.
ಅವರ ಅಗಲಿಕೆ ನನಗೆ ವೈಯಕ್ತಿಕವಾಗಿ ಬಹಳ ನೋವು ತಂದಿದೆ. ಈಗ ನಾನು ಅವರ ಮನೆಗೆ ಹೋಗಿ, ಅಂತಿಮ ದರ್ಶನ ಪಡೆಯುತ್ತೇನೆ.
ಸುದೀಪ್ ಹಾಗೂ ಅವರ ಕುಟುಂಬಕ್ಕೆ ದು:ಖ ಭರಿಸುವ ಶಕ್ತಿ ದೇವರು ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಸಂತಾಪದಲ್ಲಿ ತಿಳಿಸಿದ್ದಾರೆ.