ಹರಿತಲೇಖನಿ

ದೊಡ್ಡಬಳ್ಳಾಪುರದಲ್ಲಿ ಮುಂದುವರೆದ ಮಳೆ; ಕೋಡಿ ಬಿದ್ದ ಗುಂಡಮಗೆರೆ ಕೆರೆ| ವಿಡಿಯೋ ನೋಡಿ

Hukukudi trust

ದೊಡ್ಡಬಳ್ಳಾಪುರ: ಚಂಡಮಾರುತದ ಕಾರಣ ಕಳೆದ ಕೆಲ ದಿನದಿಂದ ತಾಲೂಕಿನಲ್ಲಿ (rain in doddaballapur) ಧಾರಾಕಾರ ಮಳೆ ಸುರಿದಿದೆ. ನಿರಂತರವಾಗಿ ಸುರಿದ ಮಳೆಯಿಂದ ತಾಲೂಕಿನ ಕೆಲವೆಡೆ ಅವಾಂತರ ಸೃಷ್ಟಿಯಾಗಿದ್ದರೆ, ಹಲವು ಕೆರೆ, ಕುಂಟೆಗಳಿಗೆ ನೀರು ಬಂದಿದೆ.

Aravind, BLN Swamy, Lingapura

ಕಳೆದ ಸೋಮವಾರದಿಂದ ಒಂದೇ ಸಮ ಸುರಿಯುತ್ತಿರುವ ಮಳೆ ಗುರುವಾರ ಮಧ್ಯಾಹ್ನ ಹಾಗೂ ಶುಕ್ರವಾರ ಬೆಳಗ್ಗೆ ಬಿಡುವು ನೀಡಿತ್ತಾದರು, ಶುಕ್ರವಾರ ಸಂಜೆಯಿಂದ ಮತ್ತೆ ಆರ್ಭಟಿಸುತ್ತಿದೆ‌.

ಕೋಡಿ ಬಿದ್ದ ಕೆರೆ: ತಾಲೂಕಿನ ದೊಡ್ಡಕೆರೆಯಾದ ಗುಂಡಮಗೆರೆ ಕೆರೆ ಸುರಿಯುತ್ತಿರುವ ಮಳೆಗೆ ತುಂಬಿ ಕೋಡಿ ಹರಿದಿದೆ. ಮಳಯ ಕೊರೆತೆಯಿಂದ ಕಳೆದ ವರ್ಷ ತುಂಬದ ಕೆರೆ. ಈ ವರ್ಷ ಆರಂಭದಿಂದ ಸುರಿಯುತ್ತಿರುವ ಉತ್ತಮ ಮಳೆಯಿಂದಾಗಿ ಶನಿವಾರ ರಾತ್ರಿ ಕೋಡಿ ಹರಿದಿದೆ.

Aravind, BLN Swamy, Lingapura
https://www.harithalekhani.com/wp-content/uploads/2024/10/1000482906.mp4

ಕೋಡಿ ಹರಿಯುತ್ತಿರುವ ನೀರನ್ನು ನೋಡಲು ಸಾರ್ವಜನಿಕರು ತಂಡೋಪತಂಡವಾಗಿ ಭೇಟಿ ನೀಡುತ್ತಿದ್ದಾರೆ.

ಮತ್ತೊಂದೆಡೆ ತಾಲೂಕಿನ ಚಿಕ್ಕನಾಯಕನಹಳ್ಳಿ ವಿದ್ಯುತ್ ಕಂಬವೊಂದು ಮುರಿದು ಬಿದ್ದಿದ್ದು, ವಿದ್ಯುತ್ ಪೂರೈಕೆ ಸ್ಥಗಿತ ಗೊಂಡಿತು.

Exit mobile version